ಬೆಂಗಳೂರು: ಪ್ರಸಕ್ತ(2024-25) ಸಾಲಿಗೆ ಕಾಫಿ ಮಂಡಳಿ ವತಿಯಿಂದ ಕಾಫಿ ತೋಟದ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಕಾಫಿ ಮರುನಾಟಿ, ನೀರಾವರಿ ಯೋಜನೆಯಡಿ ಕೆರೆ, ತೆರೆದ ಬಾವಿ, ರಿಂಗ್ ಬಾವಿ, ಸ್ಪ್ರಿಂಕ್ಲರ್ ಇರಿಗೇಷನ್, ಹನಿ ನೀರಾವರಿಗೆ-ವಾಟರ್ ಅಗ್‍ಮೆಂಟೇಷನ್, ಕಾಫಿಗೋಡೌನ್, ಕಾಫಿ ಕಣ, ಪಲ್ಪರ್ ಯುನಿಟ್, ಇಕೋ ಪಲ್ಪರ್, ಮೆಕಾನಿಕಲ್ ಡ್ರೈಯರ್, ಸೋಲಾರ್ ಟನೆಲ್ ಡ್ರೈಯರ್-ಕ್ವಾಲಿಟಿ ಅಪ್‍ಗ್ರೇಡೇಷನ್, ಬಿಳಿಕಾಂಡ ಕೊರಕದ ಹತೋಟಿಗಾಗಿ ನಾನ್ ವೋವನ್ ಪ್ಯಾಬ್ರಿಕ್ ರ್ಯಾಪಿಂಗ್ ಮೆಟಿರಿಯಲ್, ಕಾಫಿ ತೋಟದಲ್ಲಿ ಬಳಸಬಹುದಾದ ಯಂತ್ರೋಪಕರಣಗಳು ಮತ್ತಿತರ ಕಾರ್ಯ ಚಟುವಟಿಕೆಗಳಿಗೆ ಸಹಾಯಧನದ ಯೋಜನೆಯನ್ನು ಅನುಮೋದಿಸಲಾಗಿದೆ.
25ಎಚ್‍ಎ(61.75 ಎಕರೆ) ವರೆಗಿನ ಕಾಫಿ ತೋಟ ಹೊಂದಿರುವ ಎಲ್ಲಾ ಬೆಳೆಗಾರರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ತಮ್ಮ ತೋಟವನ್ನು ಅಭಿವೃದ್ಧಿ ಪಡಿಸಲಿಚ್ಚಿಸುವ ಅರ್ಹ ಕಾಫಿ ಬೆಳೆಗಾರರು, ಈ ಎಲ್ಲಾ ಚಟುವಟಿಕೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಸಲು ಸೆಪ್ಟೆಂಬರ್, 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕಾಫಿ ಮಂಡಳಿಯ ಉಪ ನಿರ್ದೇಶಕರು(ವಿಸ್ತರಣೆ) ತಿಳಿಸಿದ್ದಾರೆ.
ಬೆಂಗಳೂರು ಜನತೆ ಗಮನಕ್ಕೆ: ಆ.22ರಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
BREAKING: ಕರ್ನಾಟಕಕ್ಕೆ ಅನ್ನಭಾಗ್ಯ ಯೋಜನೆಗೆ ಅಗತ್ಯ ಅಕ್ಕಿ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ | Anna Bhagya scheme
‘ಸಿದ್ದರಾಮಯ್ಯ’ ಅವರದು ಹೆದರುವ ರಕ್ತವಲ್ಲ, ಅದು ಅವರ ರಕ್ತದಲ್ಲಿಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್