ಶಿವಮೊಗ್ಗ: ಚಾಮರಾಜನಗರ ತಾಲೂಕಿನ ಕಮರವಾಡಿ ಗೇಟ್ ಬಳಿ ಬೈಕ್‌ಗಳ ನಡುವೆ ಗುರುವಾರದಂದು ರಾತ್ರಿ ಸಂಭವಿಸಿದ ಅಪಘಾತದಲ್ಲಿ ಸಾಗರದ ಉಳ್ಳೂರಿನ ಅಗ್ನಿವೀರ ಯೋಧ ಪ್ರಜ್ವಲ್ 21 ಮೃತಪಟ್ಟಿದ್ದರು. ಅವರ ಪಾರ್ಥೀವ ಶರೀರಕ್ಕೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅಂತಿಮ ನಮನ ಸಲ್ಲಿಸಿದರು.
ತಂದೆ ರಾಮಚಂದ್ರ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಗಳೆಮನೆ ಗ್ರಾಮದವರು. ಪ್ರಸ್ತುತ ಚಾಮರಾಜನಗರದ ಸೇವಾಭಾರತಿ ಶಾಲೆ ಶಿಕ್ಷಕ ರಾಮಚಂದ್ರ ಅವರ ಪುತ್ರ ಆರ್.ಪ್ರಜ್ವಲ್ (21) ಮೃತರು. ಈತ ಇತ್ತೀಚೆಗೆ ಅಗ್ನಿವೀರ್ ಹುದ್ದೆಗೆ ನೇಮಕಾತಿಯಾಗಿ ಪಶ್ಚಿಮ ಬಂಗಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಜೆ ಮೇಲೆ ಊರಿಗೆ ಬಂದಿದ್ದ ಅವರು ಆ.16ರಂದು ಕರ್ತವ್ಯಕ್ಕೆ ವಾಪಸ್ ಹೋಗುವವರಿದ್ದರು.
ಆದರೆ ಗುರುವಾರ ಕಾರ್ಯನಿಮಿತ್ತ ಸ್ನೇಹಿತ ರೋಹಿತ್ ಜತೆ ಬೈಕ್‌ನಲ್ಲಿ ಮೈಸೂರಿಗೆ ತೆರಳಿದ್ದರು. ರಾತ್ರಿ ತಿ.ನರಸೀಪುರ ಮಾರ್ಗದ ಕಮರವಾಡಿ ಗೇಟ್ ಬಳಿ ಮತ್ತೊಂದು ಬೈಕ್ ಡಿಕ್ಕಿಯಾಗಿದೆ. ಈ ವೇಳೆ ಸ್ಥಳದಲ್ಲೇ ಪ್ರಜ್ವಲ್ ಮೃತಪಟ್ಟರು. ಸ್ನೇಹಿತ ರೋಹಿತ್ ಹಾಗೂ ಮತ್ತೊಂದು ಬೈಕ್‌ನಲ್ಲಿದ್ದ ಬಸವಟ್ಟಿ ಸುಭಾಷ್, ಮೆಳ್ಳಹಳ್ಳಿ ಗಾಯಗಳಾಗಿವೆ. ಸಂತಮರಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹ ಮತ್ತು ಗಾಯಾಳುಗಳನ್ನು ಸಿಮ್ಸ್ ಆಸ್ಪತ್ರೆಗೆ ರವಾನಿಸಿದರು. ಪ್ರಜ್ವಲ್ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು. ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಮಚಂದ್ರ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಜಿಗಳೆಮನೆಯವರಾದ ಕಾರಣ ಮೃತದೇಹವನ್ನು ಹುಟ್ಟೂರಾದ ಜಿಗಳೇಮನೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಈ ಸಂಧರ್ಭದಲ್ಲಿ ಸಾಗರ ವಿಧಾನಸಭಾ ಶಾಸಕರು ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು, ಅಗ್ನಿವೀರ್ ಅಧಿಕಾರಿಗಳು, ಯೋಧರು ಹಾಗೂ ನಿವೃತ್ತ ಯೋಧರು ಹಾಜರಾಗಿ ಶೃದ್ದಾಂಜಲಿ ಅರ್ಪಿಸಿದರು.
ವರದಿ: ರಫೀಕ್ ಎಂ ಬ್ಯಾರಿ, ಸಾಗರ
ಮತಗಳ್ಳತನ ನಡೆದಿರುವ ಬಗ್ಗೆ ಕಾನೂನು ಇಲಾಖೆ ಪರಿಶೀಲನೆ: ಸಿಎಂ ಸಿದ್ಧರಾಮಯ್ಯ
ಬೆಂಗಳೂರಲ್ಲಿ ಮರದ ಕೊಂಬೆ ಮುರಿದು ವೃದ್ಧನ ಸೊಂಟದ ಮೂಳೆ ಮುರಿತ : ‘BBMP’ ಸಿಬ್ಬಂದಿ ವಿರುದ್ಧ ‘FIR’ ದಾಖಲು