ಉಡುಪಿ: ನಾಗರ ಪಂಚಮಿಯ ದಿನವಾದಂತ ಇಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲದೇ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಇಂದು ಉಡುಪಿಯ ಕಾಪು ಮಾರಿಯಮ್ಮನ ದರ್ಶನಕ್ಕೆ ಸಾಗರ ಕ್ಷೇತ್ರದ ಶಾಸಕ ಗೋಪಾಲ ಕೃಷ್ಣ ಬೇಳೂರು ಭೇಟಿ ನೀಡಿದರು. ನಾಗರ ಪಂಚಮಿ ಪ್ರಯುಕ್ತ ಗಂಟಾ ನಾದ ಸೇವೆ ಹಾಗೂ ದೇವಿಗೆ ಸೀರೆಯನ್ನು ಶಾಸಕರು, ಪತ್ನಿ ರಂಜಿತಾ ರಾಧಾ, ಪುತ್ರ ವಿಹಾನ್ ಕಾರ್ಣಿಕ್ ಅರ್ಪಿಸಿದರು.
ಈ ವೇಳೆ ಮಾತನಾಡಿದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ನಾನು ನಾಗರ ಪಂಚಮಿಯ ದಿನವಾದಂತ ಇಂದು ಕಾಪು ಮಾರಿಕಾಂಬ ದೇವಸ್ಥಾನಕ್ಕೆ ಬಂದಿದ್ದೇನೆ. ಎಲ್ಲಾ ಸೇವೆಯನ್ನು ಮಾಡಿದ್ದೇನೆ. ಜೊತೆಗೆ ವಿಶೇಷವಾಗಿ ಇಲ್ಲಿ ಗಂಟಾನಾದ. ಬೃಹತ್ ಗಂಟೆಯನ್ನು ಭಾರಿಸುವ ಮೂಲಕ ನನ್ನ ಬೇಡಿಕೆ ಈಡೇರಿಸುವಂತೆ ಕೇಳಿಕೊಂಡಿದ್ದೇನೆ ಎಂದರು.
ಅಯೋಧ್ಯೆಯಲ್ಲಿ ಇಷ್ಟು ದೊಡ್ಡ ಗಾತ್ರದ ಗಂಟೆ ಇದ್ದರೇ, 2ನೇಯದು ಕಾಪುವಿನಲ್ಲಿ ಇರುವಂತದ್ದು. ಗಂಟಾನಾದ ಅದ್ಭುತವಾಗಿದೆ. ಗಂಟಾನಾದವನ್ನು ಕೇಳುತ್ತಿದ್ದರೇ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆ.ವಾಸುದೇವ್ ಶೆಟ್ಟಿ, ಗಂಟಾನಾದ ಸೇವಾ ಸಮಿತಿ ಅಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ , ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಗೌರವ ಸಲಹೆಗಾರರಾದ ನಿರ್ಮಲ ಕುಮಾರ್ ಹೆಗ್ಡೆ, ವಿಕ್ಕಿ ಪೂಜಾರಿ ಮಡುಂಬು ಜೊತೆಗೂಡಿ ಶಾಸಕ ಗೋಪಾಲ ಕೃಷ್ಣ ಬೇಳೂರು ಕುಟುಂಬವನ್ನು ಸನ್ಮಾನಿಸಿ ಗೌರವಿಸಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಅಕ್ರಮ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಗ್ರಹಿಸಿ: ಪೊಲೀಸ್ ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ
BREAKING: ಕೊಲೆ ಬೆದರಿಕೆ: ದರ್ಶನ್ ಅಭಿಮಾನಿಗಳ ವಿರುದ್ಧ ನಟ ಪ್ರಥಮ್ ಪೊಲೀಸರಿಗೆ ದೂರು