ಬೆಂಗಳೂರು : ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಆಯ್ದ ಜಿಲ್ಲೆಗಳಲ್ಲಿನ ಮಳೆಹಾನಿ, ಅತಿವೃಷ್ಟಿ, ಪ್ರವಾಹ ಮತ್ತು ಗುಡ್ಡ ಕುಸಿತ ಹಾಗೂ ಈ ಬಗ್ಗೆ ಕೈಗೊಂಡಿರುವ ಮುನ್ನೆಚರಿಕೆ ಕ್ರಮಗಳ ಕುರಿತು ಪರಿಶೀಲಿಸಲು” ಸಂಬಂಧಪಟ್ಟ ಜಿಲ್ಲೆಗಳ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಸಿಎಂ ಸಿದ್ದರಾಮಯ್ಯ ಇಂದು ಮಹತ್ವದ ಸಭೆ ನಡೆಸಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಹಾಗೂ ಉಪ ಮುಖ್ಯಮಂತ್ರಿಯವರ ಉಪಸ್ಥಿತಿಯಲ್ಲಿ ದಿನಾಂಕ: 31.07.2024 ರಂದು ಬುಧವಾರ (ಇಂದು), ಸಂಜೆ 06.00 ಗಂಟೆಗೆ ಗೃಹ ಕಛೇರಿ “ಕೃಷ್ಣಾ”ದಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಆಯ್ದ ಜಿಲ್ಲೆಗಳಲ್ಲಿನ ಮಳೆಹಾನಿ, ಅತಿವೃಷ್ಟಿ, ಪ್ರವಾಹ ಮತ್ತು ಗುಡ್ಡ ಕುಸಿತ ಹಾಗೂ ಈ ಬಗ್ಗೆ ಕೈಗೊಂಡಿರುವ ಮುನ್ನೆಚರಿಕೆ ಕ್ರಮಗಳ ಕುರಿತು ಪರಿಶೀಲಿಸಲು” ಸಂಬಂಧಪಟ್ಟ ಜಿಲ್ಲೆಗಳ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ “ಏಡಿಯೋ ಸಂವಾದ”ದ ಮೂಲಕ ಪರಿಶೀಲನೆಯನ್ನು ಕೈಗೊಳ್ಳಲಿದ್ದಾರೆ.