ಬೇಂಗಳೂರು : ಕಳೆದ ಒಂದು ವರ್ಷದ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಬಾಹ್ಮಣ್ಯ ರಾಜಕಾರಣಿಯಾಗಿದ್ದಾರೆ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ನಟ ಚೇತನ್ ಅಹೀಂಸಾ, ಕಳೆದ 1 ವರ್ಷದಲ್ಲಿ ದಲಿತ ವಿರೋಧಿ ಮತ್ತು ಆದಿವಾಸಿ ವಿರೋಧಿ ವ್ಯವಸ್ಥೆಯನ್ನು ಹೆಚ್ಚು ಆಳವಾಗಿ ಕ್ರೋಢೀಕರಿಸಿದ ಸಿಎಂ ಸಿದ್ದು ಏಕೆ ಬ್ರಾಹ್ಮಣ್ಯ ರಾಜಕಾರಣಿಯಾಗಿದ್ದಾರೆ ಎಂಬುದು ಇಲ್ಲಿದೆಃ
1. ಕುರುಬರನ್ನು (ಹಾಲುಮತ) ಎಸ್ಟಿ ವರ್ಗಕ್ಕೆ ಶಿಫಾರಸು ಮಾಡಲಾಗಿದೆ
2. 5 ಪ್ಯಾಚ್ವರ್ಕ್ ಯೋಜನೆಗಳಿಗಾಗಿ ದಲಿತರ ಮತ್ತು ಆದಿವಾಸಿಗಳ 11,000 ಕೋಟಿ ರೂ. ಹಣ ದುರ್ಬಳಕೆ
3. ಜಾತಿ ಗಣತಿಯ ಪ್ರಕಟಣೆ ಇಲ್ಲ
4. ಮಹತ್ವದ ಮೀಸಲಾತಿ ಹೆಚ್ಚಳ ಇಲ್ಲ (ST ಒಳ, ಖಾಸಗಿ ವಲಯದಲ್ಲಿ, etc)
5. ಭೂ ಸುಧಾರಣೆ ಇಲ್ಲ
ನಿನ್ನೆಯಷ್ಟೇ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಟಾಪರ್ಗಳಿಗೆ ಬಾಬಾಸಾಹೇಬ್ ಅವರ ‘ಅನೀಹಿಲೇಷನ್ ಆಫ್ ಕಾಸ್ಟ್’ ಕೃತಿಯ ಪ್ರತಿಯನ್ನು ಉಡುಗೊರೆಯಾಗಿ ಸಿಎಂ ‘ಸೋಮಾರಿ’ ಸಿದ್ದು ನೀಡಿದ್ದಾರೆ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.