ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ತರ ಕೊಡೋದಕ್ಕೆ ಶುರು ಮಾಡಿದರು. ಆಗ ವಿಪಕ್ಷಗಳಿಂದ ಗಲಾಟೆ ಶುರು ಮಾಡಲಾಯಿತು. ವಿಪಕ್ಷಗಳ ವಿರುದ್ಧ ಸಿಟ್ಟಾದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಗೂಂಡಾಗಳು ಎಂಬುದಾಗಿ ಹೇಳಿದರು. ಇದಕ್ಕೆ ಕೆಂಡಾಮಂಡಲರಾದಂತ ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿ ಪ್ರತಿಭಟನೆ ನಡೆಸಿದರು.
ವಿಧಾನಪರಿಷತ್ತಿನಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲೆ ಸಿಎಂ ಸಿದ್ಧರಾಮಯ್ಯ ಉತ್ತರದ ವೇಳೆಯಲ್ಲಿ ಗದ್ದಲ ಕೋಲಾಹಲವೇ ನಡೆದಿದೆ. ಸಿಎಂ ಸಿದ್ಧರಾಮಯ್ಯ ಗೂಂಡಾಗಳು ಹೇಳಿಕೆ ವಿರುದ್ಧ ಸಿಡೆದ್ದಂತ ವಿಪಕ್ಷಗಳು, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆಗೂ ಸಾಕ್ಷಿಯಾಯಿತು.
ಸಿಎಂ ಸಿದ್ಧರಾಮಯ್ಯ ಅವರ ಗೂಂಡಾಗಳು ಹೇಳಿಕೆ ಖಂಡನೀಯ ಎಂಬುದಾಗಿ ಹೇಳಿದಂತ ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು, ಪರಿಷತ್ ಕಲಾಪದಿಂದ ಸಭಾತ್ಯಾಗ ಮಾಡಿದರು.
ವಿಧಾನಪರಿಷತ್ತಿನಲ್ಲಿ ನಡೆದಿದ್ದೇನು.?
ರಾಜ್ಯಪಾಲರ ಭಾಷಣದ ಮೇಲೆ ಸಿಎಂ ಸಿದ್ಧರಾಮಯ್ಯ ಉತ್ತರಿಸೋ ವೇಳೆಯಲ್ಲಿ ವಿಪಕ್ಷಗಳ ಸದಸ್ಯರಿಂದ ಗದ್ದಲ ಉಂಟು ಮಾಡಲಾಯಿತು. ಇದಕ್ಕೆ ಸಿಟ್ಟಾದಂತ ಸಿಎಂ ಸಿದ್ಧರಾಮಯಯ್ ಪ್ರಶ್ನೆ ಕೇಳಿದವರು ಸುಮ್ಮನಿರುವಾಗ ವಿಪಕ್ಷದವರದ್ದೇನು ಮಾತು ಎಂಬುದಾಗಿ ಗರಂ ಆದರು.
ನಮ್ಮ ಫ್ಯಾಕ್ಟ್ ಉತ್ತರ ಸಹಿಸಲ್ಲ. ನೀವು ಕೂಗಾಡಿದರೂ ಸತ್ಯವೇ. ನೀವು ಗೂಂಡಾಗಳು ಎಂಬುದಾಗಿ ವಾಗ್ಧಾಳಿ ನಡೆಸಿದರು. ಈ ವೇಳೆಯಲ್ಲೇ ಸದನದಲ್ಲಿ ಗದ್ದಲ, ಕೋಲಾಹಲಕ್ಕೂ ಕಾರಣವಾಯಿತು. ಆಗ ಸದಸ್ಯರನ್ನು ಸಭಾಪತಿ ಬಸವರಾಜ ಹೊರಟ್ಟಿಯವರು ಮನವೊಲಿಸೋದಕ್ಕೆ ಪ್ರಯತ್ನ ಪಟ್ಟರು. ಆದರೇ ಸಾಧ್ಯವಾಗದೇ ವಿಪಕ್ಷಗಳ ಸದಸ್ಯರಿಂದ ಸಭಾತ್ಯಾಗ ನಡೆಸಲಾಯಿತು.
‘ಸರ್ಕಾರಿ ನೌಕರ’ರಿಗೆ ಮಹತ್ವದ ಮಾಹಿತಿ: ಹೀಗಿದೆ ‘ರಾಜ್ಯ ಸರ್ಕಾರ’ದಿಂದ ಮಾನ್ಯತೆ ಪಡೆದ ‘ಖಾಸಗಿ ಆಸ್ಪತ್ರೆ’ಗಳ ಪಟ್ಟಿ