ಕಲಬುರ್ಗಿ: ಭೀಮಾ ತೀರದಲ್ಲಿ ಪ್ರವಾಹದಿಂದಾಗಿ ನೆರೆ ಬಂದು ಬೆಳೆಹಾನಿಗೊಂಡ ರೈತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಗುಡ್ ನ್ಯೂಸ್ ನೀಡಿದ್ದಾರೆ. ಅದೇ ಜಂಟಿ ಸರ್ವೆ ಮುಗಿದ ಬಳಿಕ ಬೆಳೆಹಾನಿಗೆ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
ಇಂದು ವೈಮಾನಿಕ ಸಮೀಕ್ಷೆಯ ಬಳಿಕ ಕಲಬುರ್ಗಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, NDRF ಮಾರ್ಗಸೂಚಿಯಂತೆ 1 ಹೆಕ್ಟೇರ್ ಖುಷ್ಕಿ ಜಮೀನಿಗೆ 8,500, ನೀರಾವರಿಗೆ ಒಂದು ಹೆಕ್ಟೇರಿಗೆ 17,000 ಪರಿಹಾರವಿದೆ. ಖುಷ್ಕಿ ಜಮೀನಿಗೆ ಹೆಚ್ಚುವರಿಯಾಗಿ 8,500 ಕೊಡಬೇಕೆಂದು ನಿರ್ಧರಿಸಲಾಗಿದೆ. ನೀರಾವರಿಗೂ 8,500 ಹೆಚ್ಚು ಕೊಡಬೇಕು ಎಂದು ತೀರ್ಮಾನಿಸಿದ್ದೇನೆ ಎಂದರು.
ಇದು ರಾಜ್ಯ ಸರ್ಕಾರದಿಂದ ರೈತರಿಗೆ ನೀಡಬೇಕು ಎಂದು ನಿರ್ಧರಿಸಲಾಗಿದೆ. 2 ಸಾವಿರ ಕೋಟಿಗಿಂತಲೂ ಹೆಚ್ಚು ರೈತರಿಗೆ ಪರಿಹಾರ ನೀಡುತ್ತಿದ್ದೇವೆ. ಸೇತುವೆ, ರಸ್ತೆ, ಬ್ಯಾರೇಜ್, ಶಾಲೆ, ಟ್ರಾನ್ಸ್ ಫಾರ್ಮರ್ ಗಳು ಹಾಳಾಗಿವೆ. ಸಮೀಕ್ಷೆ ಮುಗಿದ ಬಳಿಕ ದುರಸ್ಥಿ ಮಾಡುತ್ತೇವೆ ಎಂದರು.
ಕೇಂದ್ರ ಸರ್ಕಾರ ಸಹ ಪ್ರವಾಹಕ್ಕೆ ಸ್ಪಂದಿಸಬೇಕು. ಸರ್ವೆ ಮುಗಿದ ಬಳಿಕ ಹೆಚ್ಚು ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ. ಪ್ರವಾಹದಿಂದ ಮನೆಗಳು ಮುಳುಗಿದ್ರೆ ತಕ್ಷಣವೇ 5,000 ನೀಡುತ್ತಿದ್ದೇವೆ ಎಂದರು.
ಹೀಗಿದೆ ಇಂದಿನ ಸಿಎಂ ಸಿದ್ಧರಾಮಯ್ಯ ಅವರ ‘ವೈಮಾನಿಕ ಸಮೀಕ್ಷೆ’ಯ ನಂತ್ರದ ಸಭೆಯ ಪ್ರಮುಖ ಹೈಲೈಟ್ಸ್