ಬೆಂಗಳೂರು: ರಾಜ್ಯ ಸರ್ಕಾರದಿಂದ ಬೆಂಗಳೂರಿಗೆ ಇಂದಿನ ಬಜೆಟ್ ನಲ್ಲಿ ಬಂಪರ್ ಗಿಫ್ಟ್ ನೀಡಲಾಗಿದೆ. ನಗರದಲ್ಲಿನ ಪ್ರವಾಸಿ ತಾಣಗಳನ್ನು ಆಕರ್ಷಕವಾಗಿ ಅಭಿವೃದ್ಧಿಗೊಳಿಸುವುದಲ್ಲದೇ, ವಿವಿಧ ಕಾರಿಡಾರ್ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.
ಇಂದು ರಾಜ್ಯ ಬಜೆಟ್ ಮಂಡಿಸಿ ವಿಧಾನಸಭೆಯಲ್ಲಿ ಮಾತನಾಡಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಬೆಂಗಳೂರಲ್ಲಿ ಆಕರ್ಷಕ ಪ್ರವಾಸಿ ತಾಣಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ. ಬಿಸಿನೆಸ್ ಕಾರಿಡಾರ್ ರೂಪಿಸಲಾಗುತ್ತದೆ ಎಂದರು.
27 ಸಾವಿರ ಕೋಟಿ ವೆಚ್ಚದಲ್ಲಿ 73 ಕಿಲೋಮೀಟರ್ ರಸ್ತೆ ಅಭಿವೃದ್ಧಿಗೊಳಿಸಲಾಗುತ್ತದೆ. ಸ್ಕೈಡ್ ವಾಕರ್ ನಿರ್ಮಾಣ ಮಾಡಲಾಗುತ್ತದೆ. ನಗರಾಭಿವೃದ್ಧಿ ಅಂಗ ಸಂಸ್ಥೆಗಳಾದಂತ ಬಿಎಂಆರ್ ಸಿಎಲ್, ಬಿಬಿಎಂಪಿ, ಬಿಡಬ್ಲ್ಯೂ ಎಸ್ ಎಸ್ ಬಿ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಅನುದಾನ ಒದಗಿಸೋದಾಗಿ ತಿಳಿಸಿದ್ದಾರೆ.
ಇನ್ನೂ ಸೋಲಾರ್ ಪಾರ್ಕ್ ಅನ್ನು ನಿರ್ಮಾಣ ಮಾಡುವುದಾಗಿಯೂ ಘೋಷಿಸಿರುವಂತ ಸಿದ್ಧರಾಮಯ್ಯ ಅವರು, ಬೆಂಗಳೂರಿಗೆ ರಾಜ್ಯ ಬಜೆಟ್ 2024-25ರಲ್ಲಿ ಬಂಪರ್ ಗಿಫ್ಟ್ ನೀಡಿದ್ದಾರೆ.
BREAKING : ವಿವಾಹದ ಆನ್ಲೈನ್ ನೋಂದಣಿ ಪ್ರಕ್ರಿಯೆಗೆ ಪ್ರಾಯೋಗಿಕ ಚಾಲನೆ : ಶೀಘ್ರ ರಾಜ್ಯಾದ್ಯಂತ ವಿಸ್ತರಣೆ