ಬೆಂಗಳೂರು: ಈಗಾಗಲೇ ವಿಧಾನ ಮಂಡಲ ಬಜೆಟ್ ಅಧಿವೇಶನ ಆರಂಭವಾಗಿದ್ದು, ಮಾರ್ಚ್ 7ರ ಇಂದು ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 16ನೇ ರಾಜ್ಯ ಬಜೆಟ್ ( Karnataka Budget 2025-26 ) ಮಂಡಿಸಲಿದ್ದಾರೆ.
ಮಾರ್ಚ್.7ರ ಇಂದು ಬೆಳಿಗ್ಗೆ 10.15ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ( Chief Minister Siddaramaiah ) ದಾಖಲೆಯ 16ನೇ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಿಸಲಿದ್ದಾರೆ. ಗ್ಯಾರಂಟಿಗಳ ಒತ್ತಡದ ನಡುವೆ ಯಾವ ರೀತಿಯ ಬಜೆಟ್ ಮಂಡಿಸಲಿದ್ದಾರೆ? ಯಾವ ಹೊಸ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂಬ ಬಗ್ಗೆ ತೀವ್ರ ಕುತೂಹಲ ಹುಟ್ಟಿಕೊಂಡಿವೆ.
ರಾಜ್ಯದಲ್ಲಿ ಜುಲೈ 2023ರಲ್ಲಿ 14ನೇ ಬಜೆಟ್ ಮಂಡಿಸಿದಾಗಲೇ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಸಿದ್ದರಾಮಯ್ಯ ಅವರ ಹೆಸರಿನಲ್ಲಿದೆ. 2024-25ನೇ ಸಾಲಿನ ಬಜೆಟ್ ಅನ್ನು ಫೆಬ್ರವರಿ ತಿಂಗಳಲ್ಲಿ ಮಂಡಿಸಿದ್ದರು. ಇದು ಅವರ 15ನೇ ಬಜೆಟ್ ಆಗಿತ್ತು.
ಇಂದು ಸಿಎಂ ಸಿದ್ದರಾಮಯ್ಯ ಅವರ 16ನೇ ಬಜೆಟ್ ಹಲವು ವಿಶೇಷತೆಗಳನ್ನು ಹೊಂದಿದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ ಎಂದು ಹೇಳಲಾಗುತ್ತಿದೆ.
ಅಂದಹಾಗೇ ಕಾಂಗ್ರೆಸ್ ಸರ್ಕಾರ ತನ್ನ ಐದು ಗ್ಯಾರಂಟಿ ಯೋಜನೆಗಳಿಗಾಗಿ ಕೂಡ ಅನುದಾನ ಮೀಸಲಿಡಬೇಕಿದ್ದು, ಇದರ ಮಧ್ಯೆ ಮೂಲಭೂತ ಸೌಕರ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಹೊಂದಿಸಬೇಕಿರುವುದು ಸವಾಲಿನ ಕೆಲಸವಾಗಿದೆ. ಅದನ್ನೆಲ್ಲ ಯಾವ ರೀತಿ ಸಿಎಂ ಸಿದ್ಧರಾಮಯ್ಯ ಇಂದಿನ ಬಜೆಟ್ ನಲ್ಲಿ ಹೊಂದಾಣಿಕೆ ಮಾಡಿ ರಾಜ್ಯ ಬಜೆಟ್ ಮಂಡಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.