ಬೆಂಗಳೂರು: ನಾಳೆ ಸಂಜೆ 5 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭೇಟಿಯಾಗಲಿದ್ದಾರೆ. ಈ ವೇಳೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ, ಬೇಡಿಕೆಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಕಬ್ಬು ಬೆಳೆಗಾರರು ದರ ನಿಗದಿ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಂತ ಸಂದರ್ಭದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಸಮಸ್ಯೆ ಬಗ್ಗೆ ಚರ್ಚಿಸೋದಕ್ಕೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಕಬ್ಬಿಗೆ ದರ ನಿಗದಿಗೆ ಕೋರಿ ಪತ್ರದಲ್ಲಿ ಪ್ರಧಾನಿ ಮೋದಿಯವರನ್ನು ಸಿಎಂ ಸಿದ್ಧರಾಮಯ್ಯ ಮನವಿ ಮಾಡಿದ್ದರು.
ನಾಳೆ ಈ ವಿಷಯವಾಗಿ ಚರ್ಚಿಸೋದಕ್ಕೆ ಸಂಜೆ 5 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ನಾಳೆ ಪ್ರಧಾನಿ ಮೋದಿಯನ್ನು ಸಿಎಂ ಸಿದ್ಧರಾಮಯ್ಯ ಭೇಟಿಯಾಗಲಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ದೆಹಲಿಗೆ ಪ್ರಯಾಣವನ್ನು ಸಿಎಂ ಸಿದ್ಧರಾಮಯ್ಯ ಬೆಳೆಸಲಿದ್ದಾರೆ. ಪ್ರಧಾನಿ ಮೋದಿ ಬೇಡಿಯಾಗಿ ಕಬ್ಬು ಬೆಳಎಗಾರರ ಸಮಸ್ಯೆ, ಬೇಡಿಕೆಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.
ನ.20ರಂದು ಬಿಹಾರದ ಗಾಂಧಿ ಮೈದಾನದಲ್ಲಿ NDA ಪ್ರಮಾಣವಚನ ಸ್ವೀಕಾರ ಸಮಾರಂಭ: ಪ್ರಧಾನಿ ಮೋದಿ ಭಾಗಿ
ಈ ಹಂತ ಅನುಸರಿಸಿ, ಮನೆಯಲ್ಲೇ ‘ಬಕೆಟ್’ನಲ್ಲಿ ‘ಅಣಬೆ’ ಬೆಳೆಯಿರಿ | Mushrooms








