ಬೆಂಗಳೂರು: ಮಳೆಯಿಂದಾಗಿ ರಸ್ತೆ ಗುಂಡಿಗಳದ್ದೇ ಬೆಂಗಳೂರಲ್ಲಿ ಕಾರುಬಾರಾಗಿದೆ. ಈ ಕಾರಣಕ್ಕೆ ಕೆಲ ಐಟಿ ಬಿಟಿ ಕಂಪನಿಗಳು ಬೆಂಗಳೂರು ತೊರೆಯುತ್ತಿರುವುದಾಗಿಯೂ ಹೇಳಲಾಗುತ್ತಿದೆ. ಈ ಎಲ್ಲಾ ಕಾರಣದಿಂದಾಗಿ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಂಗಳೂರು ಸಿಟಿ ರೌಂಡ್ ಮಾಡಲಾಗಿದ್ದಾರೆ.
ಈ ಬಗ್ಗೆ ಸಿಎಂ ಕಚೇರಿಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ ನಗರ ಪ್ರದಕ್ಷಿಣೆ ಕೈಗೊಳ್ಳಲಿದ್ದಾರೆ. ಮುಖ್ಯಮಂತ್ರಿಗಳು 03.00 ಗಂಟೆಗೆ ತಮ್ಮ ಅಧಿಕೃತ ನಿವಾಸ ಕಾವೇರಿಯಿಂದ ಹೊರಡಲಿದ್ದಾರೆ ಎಂಬುದಾಗಿ ತಿಳಿಸಿದೆ.
ಬೆಂಗಳೂರು ನಗರದ ರಸ್ತೆ ಗುಂಡಿಗಳನ್ನು ಭರದಿಂದ ಮುಚ್ಚವ ಕೆಲಸವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿಗಳು ಮಾಡುತ್ತಿದ್ದಾರೆ. ಈಗಾಗಲೇ ಸಾವಿರಾರು ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನೂ ಮುಚ್ಚುವ ಕೆಲ ನಡೆಯುತ್ತಿದೆ. ಇದರ ನಡುವೆ ಇಂದು ಮಧ್ಯಾಹ್ನ 3 ಗಂಟೆಗೆ ಸಿಎಂ ಸಿದ್ಧರಾಮಯ್ಯ ಬೆಂಗಳೂರು ಸಿಟಿ ರೌಡ್ ನಡೆಸಲಿದ್ದಾರೆ. ರಸ್ತೆ ಗುಂಡಿ ಮುಚ್ಚಿರೋದು ಸೇರಿದಂತೆ ನಗರದ ವಿವಿಧ ಸಮಸ್ಯೆಗಳ ಬಗ್ಗೆ ವೀಕ್ಷಣೆ ಮಾಡಲಿದ್ದಾರೆ.
10 ಸಾಮಾನ್ಯ ‘ಕಂಪ್ಯೂಟರ್ ಸಮಸ್ಯೆ’ಗಳಿವು, ಅವುಗಳನ್ನು ಈ ರೀತಿ ಸುಲಭವಾಗಿ ಸರಿಪಡಿಸಿ | Common Computer Problems
SHOCKING : ಎದೆಹಾಲು ಕುಡಿಯುವಾಗಲೇ ಉಸಿರುಗಟ್ಟಿ ಒಂದೂವರೆ ತಿಂಗಳ ಮಗು ಸಾವು.!