ಬೆಂಗಳೂರು: ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಈ ಸಲುವಾಗಿ ಪುಟ್ಟ ಬಾಲಕನೊಬ್ಬ ತೊದಲು ನುಡಿಯಲ್ಲಿ ಸಂವಿಧಾನ ಪೀಠಿಕೆ ಓದಿದ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವೀಡಿಯೋ ಹಂಚಿಕೊಂಡಿರುವಂತ ಸಿೆಂ ಸಿದ್ಧರಾಮಯ್ಯ ನೀವು ನೋಡಿ ಅಂತ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ ಮಾಡಿರುವಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಪುಟ್ಟ ಬಾಲಕನ ತೊದಲು ನುಡಿಯಲ್ಲಿ ಸಂವಿಧಾನದ ಪೀಠಿಕೆ ಕೇಳುವುದೇ ಒಂದು ಖುಷಿ. ಈ ಹುಡುಗನಂತೆ ಪ್ರತಿಯೊಬ್ಬರ ಮನದಲ್ಲೂ ಸಂವಿಧಾನದ ಪೀಠಿಕೆಯ ಪ್ರತಿ ಪದ ಅಚ್ಚಾಗಬೇಕು ಆಗ ಮಾತ್ರ ಸಮಾನತೆ, ಬಹುತ್ವದ ತಳಹದಿಯ ಮೇಲೆ ಬಲಿಷ್ಠ ಭಾರತ ರೂಪುಗೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ.
ಸಿಎಂ ಸಿದ್ಧರಾಮಯ್ಯ ಹಂಚಿಕೊಂಡಿರುವಂತ ವೀಡಿಯೋದಲ್ಲಿ ಶಾಲೆಯೊಂದರಲ್ಲಿ ಪುಟ್ಟ ಬಾಲಕನೊಬ್ಬ ಸಂವಿಧಾನ ಪೀಠಿಕೆಯನ್ನು ತನ್ನ ತೊದಲು ನುಡಿಯಲ್ಲಿ ಓದೋದು ಕಂಡು ಬಂದಿದೆ. ಆ ವೀಡಿಯೋ ಈ ಕೆಳಗಿನ ಎಕ್ಸ್ ಲಿಂಕ್ ನಲ್ಲಿ ಇದ್ದು, ನೀವು ಒಮ್ಮೆ ನೋಡಿ.
ಪುಟ್ಟ ಬಾಲಕನ ತೊದಲು ನುಡಿಯಲ್ಲಿ ಸಂವಿಧಾನದ ಪೀಠಿಕೆ ಕೇಳುವುದೇ ಒಂದು ಖುಷಿ.
ಈ ಹುಡುಗನಂತೆ ಪ್ರತಿಯೊಬ್ಬರ ಮನದಲ್ಲೂ ಸಂವಿಧಾನದ ಪೀಠಿಕೆಯ ಪ್ರತಿ ಪದ ಅಚ್ಚಾಗಬೇಕು ಆಗ ಮಾತ್ರ ಸಮಾನತೆ, ಬಹುತ್ವದ ತಳಹದಿಯ ಮೇಲೆ ಬಲಿಷ್ಠ ಭಾರತ ರೂಪುಗೊಳ್ಳಲು ಸಾಧ್ಯ.#ConstitutionOfIndia pic.twitter.com/C31Y578w3G— Siddaramaiah (@siddaramaiah) January 27, 2024
BREAKING: ಲೋಕಸಭಾ ಚುನಾವಣೆ: ರಾಜ್ಯದ 28 ಕ್ಷೇತ್ರಗಳಿಗೆ ‘ಬಿಜೆಪಿ ಉಸ್ತುವಾರಿ’ಗಳು ನೇಮಕ, ಇಲ್ಲಿದೆ ಸಂಪೂರ್ಣ ಲೀಸ್ಟ್
BREAKING : ಭೂಮಿ ಹಗರಣ ಪ್ರಕರಣ : ಬಿಹಾರ ಮಾಜಿ ಸಿಎಂ ಲಾಲು ಪತ್ನಿ ರಾಬ್ರಿ ದೇವಿ, ಪುತ್ರಿಯರಿಗೆ ‘ಕೋರ್ಟ್ ಸಮನ್ಸ್’