Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ನಿಮ್ಮ ತಂದೆಗೆ ನನ್ನ ವಿನಂತಿ ತಲುಪಿಸಿ’:ತಮ್ಮನ್ನು ‘ಮೋದಿ ಪಗಲು’ ಎಂದ ವ್ಯಕ್ತಿಯ ಮಗನಿಗೆ ಪ್ರಧಾನಿ ಮೋದಿಯ ಕ್ಯೂಟ್ ರಿಪ್ಲೈ!

21/03/2026 8:12 AM

ಹಾರ್ಮುಜ್ ಜಲಸಂಧಿ ನಮಗೆ ಬೇಕಿಲ್ಲ, ನೀವೇ ರಕ್ಷಿಸಿಕೊಳ್ಳಿ: ಮಿತ್ರ ರಾಷ್ಟ್ರಗಳಿಗೆ ಟ್ರಂಪ್ ಖಡಕ್ ಎಚ್ಚರಿಕೆ

21/03/2026 8:00 AM

ಅಫ್ಘಾನ್ ಸಂತ್ರಸ್ತರ ನೆರವಿಗೆ ಧಾವಿಸಿದ ಭಾರತ: ಕಾಬೂಲ್ ದಾಳಿ ಬೆನ್ನಲ್ಲೇ 2.5 ಟನ್ ತುರ್ತು ಔಷಧಿ ರವಾನೆ !

21/03/2026 7:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಭಿಯೋಜಕರ ಅಕಾಡೆಮಿ ಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಭರವಸೆ
KARNATAKA

ಅಭಿಯೋಜಕರ ಅಕಾಡೆಮಿ ಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಭರವಸೆ

By kannadanewsnow0910/01/2026 4:27 PM

ಬೆಂಗಳೂರು: ಅಸಮಾನತೆಯಿರುವ ಸಮಾಜದಲ್ಲಿ ಬಡವ, ಬಲ್ಲಿದ ಎನ್ನದೇ ಎಲ್ಲರನ್ನೂ ಸಮಾನವಾಗಿ ಕಾಣಬೇಕು . ಸಮಾನತೆ, ನ್ಯಾಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಭಿಯೋಜನಾಧಿಕಾರಿಗಳ ಸಂಘದ ವತಿಯಿಂದ KEB ಇಂಜಿನಿಯರ್ ಅಸೋಸಿಯೇಷನ್ ರಜತ ಮಹೋತ್ಸವ ದಲ್ಲಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರ ಹಾಗೂ 17 ನೇ ರಾಜ್ಯ ಮಟ್ಟದ ಸಮ್ಮೇಳನ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನೂರು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು

ಅಭಿಯೋಜಕರು ನ್ಯಾಯ ಸಂರಕ್ಷಕರು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಇವೆಲ್ಲವೂ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ ಸಾಧ್ಯ. ಸಮಾಜದ ಜನರ ಹಿತ ಕಾಪಾಡುವುದು ನಮ್ಮೆಲ್ಲರ ಕೆಲಸ. ನಾಗರಿಕ ಸುರಕ್ಷಾ ಸಂಹಿತೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಕಾಯ್ದೆಯ ಸೆಕ್ಷನ್ 8 ಮತ್ತು 9 ರ ಪ್ರಕಾರ ಅಭಿಯೋಜಕರನ್ನು ವಿಂಗಡಿಸಿ, ಕರ್ತವ್ಯಗಳನ್ನು ಹೇಳಿದ್ದಾರೆ. ಆರೋಪಿಗಳ ಹಕ್ಕುಗಳನ್ನು ಸಂರಕ್ಷಿಸಬೇಕೆಂದು ನಿಯಮ ರೂಪಿಸಿದೆ. ನೂರು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂದರು.

ಸಾಕ್ಷಿಗಳ ವಿಚಾರಣೆ, ಪಾಟಿ ಸವಾಲು ಮಾಡುವಾಗ ಎಚ್ಚರಿಕೆ ಅಗತ್ಯ

ಆರೋಪಿಗಳ ಪರವಾಗಿರುವ ಸಾಕ್ಷ್ಯಾಧಾರಗಳನ್ನೂ ನ್ಯಾಯಾಲಯದ ಗಮನಕ್ಕೆ ತರುವುದು ಅಭಿಯೋಜಕರ ಆದ್ಯ ಕರ್ತವ್ಯ. ತನಿಖಾಧಿಕಾರಿಗಳ ಜೊತೆ ಮಾತನಾಡುವುದು, ಸಾಕ್ಷಿಗಳ ವಿಚಾರಣೆ, ಪಾಟಿ ಸವಾಲು ಮಾಡುವಾಗ ಎಚ್ಚರಿಕೆಯಿಂದ ಮಾಡಿದರೆ ಶಿಕ್ಷೆ ಪ್ರಮಾಣ ಹೆಚ್ಚಾಗಲು ಸಾಧ್ಯ ಎಂದರು.

ಶಿಕ್ಷೆ ಪ್ರಮಾಣದರದಲ್ಲಿ ಕರ್ನಾಟಕಕ್ಕೆ 22 ನೇ ಸ್ಥಾನ

ಎನ್.ಸಿ.ಆರ್.ಬಿ ವರದಿ ಪ್ರಕಾರ ಶಿಕ್ಷೆ ಪ್ರಮಾಣ ದರದಲ್ಲಿ ಕರ್ನಾಟಕ, ಬಿಹಾರ ಮತ್ತು ರಾಜಸ್ಥಾನ 22 ನೇ ಸ್ಥಾನದಲ್ಲಿದೆ. ಕೇರಳದಲ್ಲಿ 87% ರಷ್ಟಿದೆ., ಮಿಜೋರಾಂ 92%, ಗುಜರಾತ್ ಮತ್ತು ತೆಲಂಗಾಣ 57%, , ಉತ್ತರ ಪ್ರದೇಶದಲ್ಲಿ 72%, ದೆಹಲಿ 89% ರಷ್ಟಿದೆ. ನಾವು ಕೇರಳ ರಾಜ್ಯದೊಂದಿಗೆ ಹೋಲಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಕಿವಿ ಮಾತು ಹೇಳಿದರು.

ನ್ಯಾಯ ಎತ್ತಿ ಹಿಡಿಯುವ ಪ್ರಯತ್ನವನ್ನು ಅಭಿಯೋಜಕರು ಮಾಡಬೇಕು

ಸಮಸ್ಯೆಗಳ ಹೊರತಾಗಿಯೂ ನ್ಯಾಯ ಒದಗಿಸಬೇಕು. ಸೈಬರ್ ಅಪರಾಧಗಳು, ಆರ್ಥಿಕ , ಅಪರಾಧಗಳು ಶುರುವಾಗಿದ್ದು ಇದಕ್ಕೆ ತರಬೇತಿ ಅತ್ಯಂತ ಅವಶ್ಯಕ. ಅಭಿಯೋಜಕರು ನಿರಂತರ ಅಧ್ಯಯನ ಮಾಡಬೇಕು ಎಂದರು.

ಅಭಿಯೋಜಕರ ಅಕಾಡೆಮಿ ಸ್ಥಾಪನೆಗೆ ಭರವಸೆ

ಪ್ರತಿ ವರ್ಷವೂ ಸಮ್ಮೇಳನಗಳ ಜರುಗಬೇಕು ಎಂದ ಮುಖ್ಯಮಂತ್ರಿಗಳು ಅಭಿಯೋಜಕರ ಅಕಾಡೆಮಿ ಸ್ಥಾಪಿಸಿ ಅನುದಾನವನ್ನೂ ನೀಡುವ ಭರವಸೆ ನೀಡಿದ ಮುಖ್ಯಮಂತ್ರಿಗಳು, ಬೇಡಿಕೆಗಳನ್ನು ಪರಿಶೀಲಿಸಲಾಗುವುದು ಎಂಬ ಆಶ್ವಾಸನೆಯಿತ್ತರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್. ಕೆ ಪಾಟೀಲ್, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಇಲಾಖೆ ಕಾರ್ಯದರ್ಶಿ ತುಷಾರ್ ಗಿರಿ, ಪೊಲೀಸ್ ಮಹಾ ನಿರ್ದೇಶಕರಾದ ಡಾ: ಎಂ. ಎ.ಸಲೀಂ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕರಾದ ಅಂಜಲಿ ದೇವಿ ರಾಜ್ಯ ಅಭಿಯೋಜನಾ ಅಧಿಕಾರಿಗಳ ಸಂಘದ ಅಧ್ಯಕ್ಷ ಅಶ್ವಥನಾರಾಯಣ್,ಕಾರ್ಯದರ್ಶಿ ಸವಿತಾ ಮೊದಲಾದವರು ಉಪಸ್ಥಿತರಿದ್ದರು.

Share. Facebook Twitter LinkedIn WhatsApp Email

Related Posts

ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರಿಗೆ 2026ನೇ ಸಾಲಿನ ರಾಜ್ಯಮಟ್ಟದ ‘ಬಸವ ಪ್ರಶಸ್ತಿ’ ಘೋಷಣೆ

20/03/2026 10:12 PM1 Min Read

‘ವರ್ಗಾವಣೆ’ಯಲ್ಲಿ ಸಿಎಂ ಹಸ್ತಕ್ಷೇಪಕ್ಕೆ ಹೈಕೋರ್ಟ್ ಗರಂ: ‘ಮಾಡಬೇಕಾದ ಕೆಲಸಗಳು ಬೇರೆ ಇವೆ’ ಎಂದ ನ್ಯಾಯಪೀಠ

20/03/2026 9:56 PM2 Mins Read

ಪೋಷಕರ ವಿರೋಧದ ನಡುವೆ ಒಂದಾದ ಪ್ರೇಮಿಗಳು: ಹೈಕೋರ್ಟ್ ಮಧ್ಯಪ್ರವೇಶದಿಂದ ಸುಗಮವಾಗಿ ನೆರವೇರಿದ ಅಂತರ್ಜಾತಿ ವಿವಾಹ

20/03/2026 8:40 PM1 Min Read
Recent News

‘ನಿಮ್ಮ ತಂದೆಗೆ ನನ್ನ ವಿನಂತಿ ತಲುಪಿಸಿ’:ತಮ್ಮನ್ನು ‘ಮೋದಿ ಪಗಲು’ ಎಂದ ವ್ಯಕ್ತಿಯ ಮಗನಿಗೆ ಪ್ರಧಾನಿ ಮೋದಿಯ ಕ್ಯೂಟ್ ರಿಪ್ಲೈ!

21/03/2026 8:12 AM

ಹಾರ್ಮುಜ್ ಜಲಸಂಧಿ ನಮಗೆ ಬೇಕಿಲ್ಲ, ನೀವೇ ರಕ್ಷಿಸಿಕೊಳ್ಳಿ: ಮಿತ್ರ ರಾಷ್ಟ್ರಗಳಿಗೆ ಟ್ರಂಪ್ ಖಡಕ್ ಎಚ್ಚರಿಕೆ

21/03/2026 8:00 AM

ಅಫ್ಘಾನ್ ಸಂತ್ರಸ್ತರ ನೆರವಿಗೆ ಧಾವಿಸಿದ ಭಾರತ: ಕಾಬೂಲ್ ದಾಳಿ ಬೆನ್ನಲ್ಲೇ 2.5 ಟನ್ ತುರ್ತು ಔಷಧಿ ರವಾನೆ !

21/03/2026 7:32 AM

ಇತಿಹಾಸದಲ್ಲೇ ಅತಿದೊಡ್ಡ ಇಂಧನ ಬಿಕ್ಕಟ್ಟು: ಇರಾನ್ ಯುದ್ಧದಿಂದ ಜಗತ್ತಿಗೆ ‘ತೈಲ ಶಾಕ್’, ಪೂರೈಕೆಯಲ್ಲಿ ಭಾರೀ ವ್ಯತ್ಯಯ!

21/03/2026 7:26 AM
State News
KARNATAKA

ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರಿಗೆ 2026ನೇ ಸಾಲಿನ ರಾಜ್ಯಮಟ್ಟದ ‘ಬಸವ ಪ್ರಶಸ್ತಿ’ ಘೋಷಣೆ

By kannadanewsnow0920/03/2026 10:12 PM KARNATAKA 1 Min Read

ಬೆಂಗಳೂರು: ಕಲಬುರಗಿಯ ಪಾಳಾದ ಶ್ರೀ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ವತಿಯಿಂದ ನೀಡಲಾಗುವ 2026ನೇ ಸಾಲಿನ ರಾಜ್ಯಮಟ್ಟದ ಪ್ರತಿಷ್ಠಿತ…

‘ವರ್ಗಾವಣೆ’ಯಲ್ಲಿ ಸಿಎಂ ಹಸ್ತಕ್ಷೇಪಕ್ಕೆ ಹೈಕೋರ್ಟ್ ಗರಂ: ‘ಮಾಡಬೇಕಾದ ಕೆಲಸಗಳು ಬೇರೆ ಇವೆ’ ಎಂದ ನ್ಯಾಯಪೀಠ

20/03/2026 9:56 PM

ಪೋಷಕರ ವಿರೋಧದ ನಡುವೆ ಒಂದಾದ ಪ್ರೇಮಿಗಳು: ಹೈಕೋರ್ಟ್ ಮಧ್ಯಪ್ರವೇಶದಿಂದ ಸುಗಮವಾಗಿ ನೆರವೇರಿದ ಅಂತರ್ಜಾತಿ ವಿವಾಹ

20/03/2026 8:40 PM

ಹಣದಾಸೆಗೆ ನಕಲಿ ದಾಖಲು ಸೃಷ್ಟಿಸುವವರ ವಿರುದ್ದ ಮುಲಾಜಿಲ್ಲದೇ ಕಾನೂನು ಕ್ರಮ: ಶಿವಮೊಗ್ಗ ಡಿಸಿ ವಾರ್ನಿಂಗ್

20/03/2026 8:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.