ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಸಿಎಜಿ ವರದಿಯನ್ನು ಮಂಡಿಸಿದ್ದಾರೆ. 2023-24ನೇ ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗೆ ಸಾಲದ ಮೊರೆ ಹೋಗಿದ್ದಾರೆ.
ಹೌದು. ಸಂಪನ್ಮೂಲ ಒದಗಿಸಲು ರಾಜ್ಯ ಸರ್ಕಾರದಿಂದ ಸಾಲದ ಮೊರೆ ಹೋಗಲಾಗಿದೆ. 63,000 ಕೋಟಿ ಸಾಲ ಮಾಡಿದ್ದಾಗಿ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಿಎಜಿ ವರದಿಯಲ್ಲಿ 2023-24ನೇ ಸಾಲಿನಲ್ಲಿ ಸರ್ಕಾರದ ವೆಚ್ಚವಾಗಿದೆ. ಹಣಕಾಸು ನಿರ್ವಹಣೆ, ಬಜೆಟ್ ಗೆ ಸಂಬಂಧಿಸಿದ ವಿವರ ಉಲ್ಲೇಖಿಸಲಾಗಿದೆ.
ರಾಜಸ್ವ ವೆಚ್ಚದಲ್ಲಿ ಶೇ.15ರಷ್ಟು 5 ಗ್ಯಾರಂಟಿ ಪಾಲು ಹೊಂದಿದೆ. 2023-24ನೇ ಸಾಲಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ 16,964 ಕೋಟಿ ಖರ್ಚು ಮಾಡಲಾಗಿದೆ. 5 ಗ್ಯಾರಂಟಿ ಯೋಜನೆಗೆ ಕಳೆದ ವರ್ಷದ ಸಾಲಿನಲ್ಲಿ ಹೆಚ್ಚುವರಿ ಸಾಲ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ವಿತ್ತೀಯ ಕೊರತೆ ಹೆಚ್ಚಳವಾಗಿದೆ. ವಿತ್ತೀಯ ಕೊರತೆ 46,623 ಕೋಟಿಯಿಂದ 65,522 ಕೋಟಿ ರೂಪಾಪಿಗೆ ಹೆಚ್ಚಳವಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ಮಂಡಿಸಿದಂತ ಸಿಎಜಿ ವರದಿಯಲ್ಲಿ ತಿಳಿಸಿದ್ದಾರೆ.
2023-24 ಸಾಲಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ 16,964 ಕೋಟಿ ರೂ., ಗೃಹಜ್ಯೋತಿಗೆ 8,900 ಕೋಟಿ, ಅನ್ನಭಾಗ್ಯಕ್ಕೆ 7,384 ಕೋಟಿ, ಶಕ್ತಿ ಯೋಜನೆಗೆ 3200 ಕೋಟಿ, ಯುವನಿಧಿಗೆ 88 ಕೋಟಿ ರೂ. ಹೊರೆಯಾಗಿದೆ. ಗ್ಯಾರಂಟಿ ಯೋಜನೆಗಳು, ಅದರಿಂದ ಉಂಟಾದ ಕೊರತೆಗಳಿಗೆ ಹಣ ಒದಗಿಸಲು 63,000 ಕೋಟಿ ರೂ. ನಿವ್ವಳ ಮಾರುಕಟ್ಟೆ ಸಾಲ ಪಡೆಯಲಾಗಿದೆ. 2022-23ನೇ ಸಾಲಿನ ನಿವ್ವಳ ಸಾಲಕ್ಕಿಂತ 37,000 ಕೋಟಿ ರೂ. ಹೆಚ್ಚಳವಾಗಿದೆ ಎಂದು ತಿಳಿಸಲಾಗಿದೆ.
2022-23ನೇ ಸಾಲಿಗೆ ಹೋಲಿಸಿದರೆ ಗ್ಯಾರಂಟಿ ಯೋಜನೆಗಳು. ಮೂಲಸೌಕರ್ಯಕ್ಕಾಗಿ ಬಂಡವಾಳ ವೆಚ್ಚ 5,229 ಕೋಟಿ ರೂ.ಗಳಷ್ಟು ಕಡಿಮೆ ಮಾಡಲಾಗಿದೆ. 2023-24ರಲ್ಲಿ ರಾಜ್ಯದ ಆದಾಯವು ಕಳೆದ ವರ್ಷಕ್ಕಿಂತ ಶೇ.1.86 ರಷ್ಟು ಹೆಚ್ಚಳವಾಗಿದೆ. ಆದರೇ, ಖರ್ಚು ಶೇ.12.54 ರಷ್ಟು ಹೆಚ್ಚಾಗಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಆದಾಯಕ್ಕೆ ಪೆಟ್ಟು ಬಿದ್ದಿದೆ. ಅಷ್ಟೇ ಅಲ್ಲದೇ ಮುಂದೆ ಈ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಆರ್ಥಿಕತೆಯ ಮೇಲೆ ಒತ್ತಡ ಬೀಳುತ್ತೆ ಎಂದು ಸಿಎಜಿ ವರದಿಯಲ್ಲಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
BREAKING: ‘ಅಕ್ರಮ ಗಣಿಗಾರಿಕೆ ವರದಿ’ಗೆ ‘ರಾಜ್ಯ ಸಚಿವ ಸಂಪುಟ’ ಒಪ್ಪಿಗೆ
ರಾಜ್ಯದ ಎಲ್ಲಾ ಅಸ್ಪತ್ರೆಗಳಲ್ಲಿ ‘ಸೂಪರ್ ಸ್ಪೆಷಾಲಿಟಿ ಅಸ್ಪತ್ರೆ’ ನಿರ್ಮಾಣ: ಸಚಿವ ಶರಣಪ್ರಕಾಶ್ ಪಾಟೀಲ್