Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನನಗೆ ಬೈದು ಮತ ಕೇಳುವ ದಾರಿದ್ರ್ಯ ಬಿಜೆಪಿಗೆ ಬಂದಿದೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

06/04/2026 7:23 PM

BREAKING: ಜಯರಾಜ್-ಬೆನಿಕ್ಸ್ ಲಾಕಪ್ ಡೆತ್ ಕೇಸ್: ತಮಿಳುನಾಡಿನ 9 ಮಂದಿ ಪೊಲೀಸರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ!

06/04/2026 7:20 PM

BIG BREAKING: ವಾಹನ ಸವಾರರಿಗೆ ಶಾಕ್: ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿಢೀರ್ ಹೆಚ್ಚಳ

06/04/2026 7:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕ’ ವಾಹನಗಳನ್ನು ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ಧರಾಮಯ್ಯ
KARNATAKA

‘ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕ’ ವಾಹನಗಳನ್ನು ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ಧರಾಮಯ್ಯ

By kannadanewsnow0919/12/2025 3:26 PM

ಬೆಳಗಾವಿ ಸುವರ್ಣಸೌಧ: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು,  ಸುವರ್ಣ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂದೆ “ಆರೋಗ್ಯ ಸೇತು  ಸಂಚಾರಿ ಆರೋಗ್ಯ ಘಟಕ” ಗಳ ಲೋಕಾರ್ಪಣೆ ನೆರವೇರಿಸಿದರು.

“ದೂರದ ಹಳ್ಳಿಗೂ ಹತ್ತಿರದ ಆರೈಕೆ”

  • ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ರವರಿಂದ   ದಿನಾಂಕ: 19-12-2025 ರಂದು 10:00 ಗಂಟೆಗೆ, ಸುವರ್ಣ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂದೆ “ಆರೋಗ್ಯ ಸೇತು  ಸಂಚಾರಿ ಆರೋಗ್ಯ ಘಟಕ” ಗಳ ಲೋಕಾರ್ಪಣೆ ಮಾಡಲಿದ್ದಾರೆ.
  • ನಿಮ್ಮ ಆರೋಗ್ಯ ನಮ್ಮ ಆದ್ಯತೆ” ಆಶಯದೊಂದಿಗೆ ಸಮಾಜದ ಪ್ರತಿಯೊಬ್ಬ ನಾಗರೀಕರಿಗೂ ಗುಣಮಟ್ಟ ಆರೋಗ್ಯ ಸೇವೆಗಳನ್ನು ನೀಡುವ ಹಲವು ಉಪಕ್ರಮಗಳನ್ನು ಕಾಲಕಾಲಕ್ಕೆ ಸರ್ಕಾರವು ರೂಪಿಸಿದೆ.
  • ಸಂಪರ್ಕರಹಿತ ಪ್ರದೇಶಗಳು, ದುರ್ಗಮ ಪ್ರದೇಶಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಮನೆಯ ಬಾಗಿಲಲ್ಲೇ ಆರೋಗ್ಯ ಸೇವೆಗಳನ್ನು ನೀಡುವ ಉದ್ದೇಶದಿಂದ 81 “ಸಂಚಾರಿ ಆರೋಗ್ಯ ಘಟಕ” ಗಳನ್ನು ಪ್ರಾರಂಭಿಸಲಾಗುವುದು.
  • ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 49 ಸಂಚಾರಿ ಆರೋಗ್ಯ ಘಟಕಗಳನ್ನು ಮತ್ತು ರಾಜ್ಯ ಸರ್ಕಾರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅನುದಾನದಡಿಯಲ್ಲಿ 32 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಲ್ಲಿ ಅನುಷ್ಟಾನಗೊಳಿಸಲಾಗುವುದು.
  • ಸಂಚಾರಿ ಆರೋಗ್ಯ ಘಟಕಗಳ ಮೂಲಕ ಪ್ರಾಥಮಿಕ ಆರೋಗ್ಯ ಸೇವೆಗಳು, ಸಮುದಾಯ ಆರೈಕೆ ಸೇವೆಗಳು, ರೆಫರಲ್‌ ಸೇವೆಗಳು, ರಾಷ್ಟ್ರೀಯ ಹಾಗೂ ರಾಜ್ಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಟಾನ ಹಾಗೂ ಇತರೆ ಸೇವೆಗಳನ್ನು ಒದಗಿಸಲಾಗುವುದು.
  • ಜಿಲ್ಲೆಯ ಭೌಗೋಳಿಕ ಪರಿಸ್ಥಿತಿ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲೆಯ ಅಗತ್ಯತೆಗೆ ಅನುಗುಣವಾಗಿ ವಿಕೇಂದಿಕೃತ ವ್ಯವಸ್ಥೆಯಲ್ಲಿ ಕ್ರಿಯಾಯೋಜನೆಯನ್ನು ರೂಪಿಸಿ ಸಂಚಾರಿ ಆರೋಗ್ಯ ಘಟಕಗಳನ್ನು ಕಾರ್ಯಾಚರಣೆ ಮಾಡಲಾಗುವುದು.
  • ತುರ್ತು ಆರೋಗ್ಯ ಪರಿಸ್ಥಿತಿಯ ಪರಿಣಾಮಕಾರಿ ನಿರ್ವಹಣೆಗೆ ಸದರಿ ಸಂಚಾರಿ ಆರೋಗ್ಯ ಘಟಕಗಳನ್ನು ಬಳಸಿಕೊಳ್ಳಲಾಗುವುದು.
  • ಸಂಚಾರಿ ಆರೋಗ್ಯ ಘಟಕಗಳನ್ನು ಜಿಲ್ಲಾ ಮಟ್ಟದಲ್ಲಿ ಅನುಷ್ಟಾನಗೊಳಿಸಲಾಗುತ್ತಿದ್ದು, ವಾಹನವನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲಾಗುವುದು, ಮಾನವ ಸಂಪನ್ಮೂಲಗಳಾದ ಎಂ.ಬಿ.ಬಿ.ಎಸ್‌ ವೈದ್ಯರುಗಳು, ಶುಶ್ರೂಷಕ / ಕಿ ಯರು, ಪ್ರಯೋಗ ಶಾಲಾ ತಂತ್ರಜ್ಞರುಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗಿದ್ದು ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲು ಅವಶ್ಯಕ ಮೂಲಭೂತ ಆರೋಗ್ಯ ಸಲಕರಣೆಗಳು ಮತ್ತು ಉಪಭೋಗ್ಯ ವಸ್ತುಗಳು ಹಾಗೂ ತುರ್ತು ಪರಿಸ್ಥಿತಿಯ ನಿರ್ವಹಣೆಗೆ ಅಗತ್ಯವಿರುವ ಜೀವನಾವಶ್ಯಕ ಔಷಧಿಗಳೊಂದಿಗೆ ಸಜ್ಜುಗೊಳಿಸಲಾಗಿದೆ.
  • ಸಂಚಾರಿ ಆರೋಗ್ಯ ಘಟಕವು ಕನಿಷ್ಠ 2-3 ಆಯ್ದ ದುರ್ಗಮ ಹಾಗೂ ಸಂಪರ್ಕ ರಹಿತ ಹಳ್ಳಿಗಳಿಗೆ ಕ್ರಿಯಾ ಯೋಜನೆಯನ್ನು ರೂಪಿಸಿ ನಿರ್ಧಿಷ್ಟ ದಿನಾಂಕ  ಮತ್ತು ಸಮಯದಂದು ಅಲ್ಲಿಯ ಸ್ಥಳೀಯರಿಗೆ ಮುಂಗಡವಾಗಿ ತಿಳಿಸಿ ತೆರಳಿ ಸೇವೆಯನ್ನು ಒದಗಿಸಲಾಗುವುದು.
  • ಪ್ರತಿ ಸಂಚಾರಿ ಆರೋಗ್ಯ ಘಟಕಗಳನ್ನು ಮಾಸಿಕ ರೂ. 1.92 ಲಕ್ಷಗಳ ಅನುದಾನದಲ್ಲಿ ಅನುಷ್ಟಾನಗೊಳಿಸಲಾಗುವುದು. ಇದರಿಂದಾಗಿ ಒಟ್ಟಾರೆ ವಾರ್ಷಿಕ ಅಂದಾಜು ರೂ. 1686.24 ಲಕ್ಷಗಳ ಅನುದಾನವನ್ನು ಸರ್ಕಾರವು ವೆಚ್ಚ ಮಾಡಲಿದೆ.
  • ಜಿಲ್ಲಾವಾರು ಹಂಚಿಕೆ ಮಾಡಲಾದ ಸಂಚಾರಿ ಘಟಕಗಳ ವಿವರ:
ಕ್ರ.ಸಂ ಜಿಲ್ಲೆಯ ಹೆಸರು ಸಂಚಾರಿ ಆರೋಗ್ಯ ಘಟಕಗಳ ಸಂಖ್ಯೆ
1. ಬಾಗಲಕೋಟೆ 2
2. ಬಳ್ಳಾರಿ 1
3. ಬೀದರ್‌ 1
4. ಬೆಳಗಾವಿ 4
5. ಬೆಂಗಳೂರು ದಕ್ಷಿಣ 1
6. ಚಾಮರಾಜನಗರ 4
7. ಚಿತ್ರದುರ್ಗ 3
8. ಚಿಕ್ಕಬಳ್ಳಾಪುರ 1
9. ಚಿಕ್ಕಮಗಳೂರು 3
10. ದಕ್ಷಿಣ ಕನ್ನಡ 5
11. ಧಾರವಾಡ 2
12. ದಾವಣಗೆರೆ 2
13. ಗದಗ 2
14. ಹಾಸನ 1
15. ಹಾವೇರಿ 2
16. ಕಲಬುರಗಿ 5
17. ಕೊಡಗು 4
18. ಕೋಲಾರ 1
19. ಕೊಪ್ಪಳ 1
20. ಮಂಡ್ಯ 2
21. ಮೈಸೂರು 4
22. ರಾಯಚೂರು 8
23. ಶಿವಮೊಗ್ಗ 2
24. ತುಮಕೂರು 3
25. ಉಡುಪಿ 4
26. ಉತ್ತರ ಕನ್ನಡ 6
27. ವಿಜಯನಗರ 4
28. ವಿಜಯ ಪುರ 2
29. ಯಾದಗಿರಿ 1
ಒಟ್ಟು 81

ಸಚಿವ ಮಹದೇವಪ್ಪ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಒತ್ತಾಯ: ಯಾಕೆ ಗೊತ್ತಾ?

BIG NEWS : ರಾಜ್ಯದ ಜನತೆಯ ಗಮನಕ್ಕೆ : ಕರ್ನಾಟಕ ಸರ್ಕಾರದ ವಿವಿಧ ನಿಗಮಗಳಿಂದ ಸಿಗುವ ಯೋಜನೆಗಳ ಕುರಿತು ಇಲ್ಲಿದೆ ಮಾಹಿತಿ

Share. Facebook Twitter LinkedIn WhatsApp Email

Related Posts

ನನಗೆ ಬೈದು ಮತ ಕೇಳುವ ದಾರಿದ್ರ್ಯ ಬಿಜೆಪಿಗೆ ಬಂದಿದೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

06/04/2026 7:23 PM2 Mins Read

BIG BREAKING: ವಾಹನ ಸವಾರರಿಗೆ ಶಾಕ್: ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿಢೀರ್ ಹೆಚ್ಚಳ

06/04/2026 7:15 PM1 Min Read

ಬೇಸಿಗೆ ದಟ್ಟಣೆ: ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಅವಧಿ ವಿಸ್ತರಣೆ

06/04/2026 7:08 PM1 Min Read
Recent News

ನನಗೆ ಬೈದು ಮತ ಕೇಳುವ ದಾರಿದ್ರ್ಯ ಬಿಜೆಪಿಗೆ ಬಂದಿದೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

06/04/2026 7:23 PM

BREAKING: ಜಯರಾಜ್-ಬೆನಿಕ್ಸ್ ಲಾಕಪ್ ಡೆತ್ ಕೇಸ್: ತಮಿಳುನಾಡಿನ 9 ಮಂದಿ ಪೊಲೀಸರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ!

06/04/2026 7:20 PM

BIG BREAKING: ವಾಹನ ಸವಾರರಿಗೆ ಶಾಕ್: ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿಢೀರ್ ಹೆಚ್ಚಳ

06/04/2026 7:15 PM

BREAKING: ದೆಹಲಿ ವಿಧಾನಸಭೆಯಲ್ಲಿ ಭದ್ರತಾ ಲೋಪ: ಒಳನುಗ್ಗಿ ಹೂಗುಚ್ಛ ಇಟ್ಟು ನಾಪತ್ತೆಯಾಗಿದ್ದ ‘ಮುಖವಾಡಧಾರಿ’ ಕೊನೆಗೂ ಅರೆಸ್ಟ್!

06/04/2026 7:10 PM
State News
KARNATAKA

ನನಗೆ ಬೈದು ಮತ ಕೇಳುವ ದಾರಿದ್ರ್ಯ ಬಿಜೆಪಿಗೆ ಬಂದಿದೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

By kannadanewsnow0906/04/2026 7:23 PM KARNATAKA 2 Mins Read

ದಾವಣಗೆರೆ: ನಾವು ಮಾಡಿದ ಜನಪರ ಕೆಲಸಗಳ, ಅಭಿವೃದ್ದಿ ಕೆಲಸಗಳ ಆಧಾರದಲ್ಲಿ ಮತ ಕೇಳುತ್ತಿದ್ದೇವೆ. ಆದರೆ, ನನಗೆ ಬೈದು ಮತ ಕೇಳುವ…

BIG BREAKING: ವಾಹನ ಸವಾರರಿಗೆ ಶಾಕ್: ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿಢೀರ್ ಹೆಚ್ಚಳ

06/04/2026 7:15 PM

ಬೇಸಿಗೆ ದಟ್ಟಣೆ: ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಅವಧಿ ವಿಸ್ತರಣೆ

06/04/2026 7:08 PM

ಕೇಂದ್ರದ ಬಿಜೆಪಿ ಸರ್ಕಾರ ‘ಬಾಕಿ ಸರ್ಕಾರ’; ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿ: ಕಾಂಗ್ರೆಸ್ MLC ಮಂಜುನಾಥ್ ಭಂಡಾರಿ ಕರೆ

06/04/2026 7:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.