ಬೆಂಗಳೂರು: ಅಟ್ಲಾಂಟಿಕ್ ಮಹಾಸಾಗರ ದಾಟಿ ದಾಖಲೆ ನಿರ್ಮಿಸಿದ ರಾಷ್ಟ್ರಕವಿ ಜಿಎಸ್ಎಸ್ ಮೊಮ್ಮಗಳಾದಂತ ಅನನ್ನಯ ಪ್ರಸಾದ್ ಸಾಧನೆಗೆ ಸಿಎಂ ಸಿದ್ಧರಾಮಯ್ಯ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅಟ್ಲಾಂಟಿಕ್ ಮಹಾಸಾಗರವನ್ನು ಸತತ 52 ದಿನಗಳ ಕಾಲ ಏಕಾಂಗಿಯಾಗಿ ರೋವಿಂಗ್ ಮಾಡುತ್ತಾ ದಾಟಿ ಹೊಸದೊಂದು ದಾಖಲೆ ನಿರ್ಮಿಸಿದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಮೊಮ್ಮಗಳು ಅನನ್ಯ ಪ್ರಸಾದ್ ಅವರು ಇಂದು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾದರು.
ಅನಾಥ ಮಕ್ಕಳಿಗೆ ಶಿಕ್ಷಣ ನೀಡುವ ಚಾಮರಾಜನಗರ – ರಾಮಸಮುದ್ರದ ದೀನಬಂಧು ಶಾಲೆಯ ಮಕ್ಕಳ ಭವಿಷ್ಯಕ್ಕಾಗಿ ಇಂಥದ್ದೊಂದು ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿರುವ ಅನನ್ಯ ಪ್ರಸಾದ್ ಅವರ ಕಾಳಜಿಯನ್ನು ಮೆಚ್ಚಿ ಮುಖ್ಯಮಂತ್ರಿಗಳು ಮನಸ್ಪೂರ್ತಿಯಾಗಿ ಶ್ಲಾಘಿಸಿದರು.
Watch Video: ನಡು ರಸ್ತೆಯಲ್ಲೇ ‘ಬಿಜೆಪಿ ಮುಖಂಡ’ನಿಗೆ ಕಪಾಳಮೋಕ್ಷ ಮಾಡಿದ ‘PSI’: ವೀಡಿಯೋ ವೈರಲ್
BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮೋಟಾರ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ತಗುಲಿ ಯುವತಿ ಸಾವು!