ಬೆಂಗಳೂರು: ನಾನು ಆರ್ ಟಿ ಐ ಅಡಿಯಲ್ಲಿ ಮುಡಾಕ್ಕೆ ಮೂಲ ದಾಖಲೆಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದೆ. ಆದರೇ ನನಗೆ ನೀಡಿಲ್ಲ. ಇಂತಹ ದಾಖಲೆಗಳನ್ನು ಸಿಎಂ ಸಿದ್ಧರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಸಿದ್ಧರಾಮಯ್ಯ ಅವರ ಬಳಿಯಲ್ಲೇ ಮುಡಾ ಕೇಸ್ ಗೆ ಸಂಬಂಧಿಸಿದಂತ ಮೂಲ ದಾಖಲೆಗಳು ಇರುವುದಾಗಿ ಆರ್ ಟಿಐ ಕಾರ್ಯಕರ್ತ ಗಂಗರಾಜು ಎಂಬುವರು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಿಎಂ ಸಿದ್ಧರಾಮಯ್ಯ ಅವರ ಬಳಿಯಲ್ಲೇ ಮುಡಾ ಮೂಲ ದಾಖಲೆಗಳಿವೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ, ಡಿಸಿ, ಮುಡಾ ಆಯುಕ್ತರು, ಮುಡಾ ಅಧ್ಯಕ್ಷರು ಸೇರಿ ಹಲವರಿಗೆ ಪತ್ರ ಬರೆಯಲಾಗಿದೆ ಎಂದರು.
ಆರ್ ಟಿ ಐ ಅಡಿಯಲ್ಲಿ ಮುಡಾಗೆ ಸಂಬಂಧಿಸಿದಂತ ದಾಖಲೆಗಳನ್ನು ಕೇಳಿದ್ದೆ. ಆದರೇ ಮುಡಾ ಕಚೇರಿಯಿಂದ ಈವರೆಗೆ ಕೊಟ್ಟಿಲ್ಲ. ಬದಲಿಗೆ ಆ ದಾಖಲೆಗಳನ್ನೇ ಸಿದ್ಧರಾಮಯ್ಯ ಬಿಡುಗಡೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಿಎಂ ದಾಖಲೆ ಬಿಡುಗಡೆ ಮಾಡಿದ್ದಾರೆ. ಸಿದ್ಧರಾಮಯ್ಯ ಅವರಿಗೆ ಆ ದಾಖಲೆಗಳು ಸಿಕ್ಕಿದ್ದು ಹೇಗೆ? ಅಥವಾ ಆ ದಾಖಲೆ ಸಿದ್ಧರಾಮಯ್ಯ ಅವರ ಮನೆಯಲ್ಲೇ ಇರಬೇಕು. ಈ ಕುರಿತು ಸ್ಪಷ್ಟನೆ ನೀಡುವಂತೆ ಸಿಎಂ ಸಿದ್ಧರಾಮಯ್ಯಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
ನಾನು ಆರ್ ಟಿ ಐ ಅಡಿಯಲ್ಲಿ ಕೇಳಿರುವಂತ ಮುಡಾಗೆ ಸಂಬಂಧಿಸಿದಂತ ದಾಖಲೆಗಳನ್ನು ನೀಡಲು ಪತ್ರ ಬರೆಯಲಾಗಿದೆ. ಒಂದು ವೇಳೆ ದಾಖಲೆ ನೀಡದೇ ಇದ್ರೇ ಈ ವಿಚಾರ ಕೋರ್ಟ್ ಗಮನಕ್ಕೆ ತಂದು, ದೂರು ದಾಖಲಿಸುವುದಾಗಿ ಆರ್ ಟಿ ಐ ಕಾರ್ಯಕರ್ತ ಗಂಗರಾಜು ಎಂಬುವರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ 200 ಕೋಟಿ ಹೂಡಿಕೆಗೆ ‘ಬೆಸ್ಟ್’ ಒಲವು: ‘5,000 ಉದ್ಯೋಗ’ ಸೃಷ್ಠಿ: ಸಚಿವ ಎಂ.ಬಿ ಪಾಟೀಲ್
BREAKING: ಕೆಸೆಟ್-2024 ಪರೀಕ್ಷೆಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ | KSET-2024 Exam
BIG NEWS: ಆಲಮಟ್ಟಿ ಡ್ಯಾಂ ಬಳಿ ‘ಗಂಗಾ ಆರತಿ’ ಮಾದರಿಯಲ್ಲಿ ‘ಕೃಷ್ಣಾ ಆರತಿ’: ಡಿಸಿಎಂ ಡಿ.ಕೆ ಶಿವಕುಮಾರ್