Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪುಣೆ ಪೋರ್ಷೆ ಅಪಘಾತ: ರಕ್ತದ ಮಾದರಿ ವಿನಿಮಯ ಮಾಡಿಕೊಂಡ ಮೂವರು ಆರೋಪಿಗಳಿಗೆ ಸುಪ್ರೀಂಕೋರ್ಟ್ ಜಾಮೀನು

02/02/2026 1:10 PM

ಆಯುಷ್ಮಾನ್ ಭಾರತ್: ನಿಮ್ಮ ಆರೋಗ್ಯ ವಿಮೆ ರದ್ದಾಗದಂತೆ ತಡೆಯಲು ಈ ಸರಳ ಕ್ರಮಗಳನ್ನು ಪಾಲಿಸಿ | Ayushman card

02/02/2026 12:42 PM

ಲೆಬನಾನ್ ನಲ್ಲಿ ಹಿಜ್ಬುಲ್ಲಾ ನಾಯಕ ಅಲಿ ದಾವೂದ್ ಅಮಿಚ್ ನನ್ನು ಹತ್ಯೆ ಮಾಡಿದ ಇಸ್ರೇಲ್

02/02/2026 12:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಮೇಸ್ಟ್ರು’ ಆದ ‘ಸಿಎಂ ಸಿದ್ಧರಾಮಯ್ಯ’: ‘ಶಾಲಾ ವಿದ್ಯಾರ್ಥಿ’ಗಳಿಗೆ ‘ಕನ್ನಡ ವ್ಯಾಕರಣ ಪಾಠ’ | CM Siddaramaiah
KARNATAKA

‘ಮೇಸ್ಟ್ರು’ ಆದ ‘ಸಿಎಂ ಸಿದ್ಧರಾಮಯ್ಯ’: ‘ಶಾಲಾ ವಿದ್ಯಾರ್ಥಿ’ಗಳಿಗೆ ‘ಕನ್ನಡ ವ್ಯಾಕರಣ ಪಾಠ’ | CM Siddaramaiah

By kannadanewsnow0905/07/2024 3:25 PM

ಬೆಂಗಳೂರು: ಇಂದು ಸಿಎಂ ಸಿದ್ಧರಾಮಯ್ಯ ಶಿಕ್ಷಕರಾದರು. ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣ ಪಾಠ ಮಾಡಿದರು. ಸಿಎಂ ಸಿದ್ಧರಾಮಯ್ಯ ಅವರ ಕನ್ನಡ ವ್ಯಾಕರಣದ ಪಾಠ ಕೇಳಿದಂತ ಮಕ್ಕಳಂತೂ ಚಪ್ಪಾಳೆಗಳ ಮಹಾಪೂರವನ್ನೇ ಹರಿಸಿದರು. ಅದು ಎಲ್ಲಿ ಅಂತ ಮುಂದೆ ಓದಿ.

ಬೆಂಗಳೂರಿನ ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭೇಟಿ ನೀಡಿದರು. SCSP/TSP ಸಭೆಯ ಬಳಿಕ ನೇರವಾಗಿ ಭೇಟಿ ನೀಡಿದರು.

ಮುಖ್ಯಮಂತ್ರಿಗಳು ಗಮನಿಸಿದ ಲೋಪಗಳು…

250 ವಿದ್ಯಾರ್ಥಿಗಿರುವ ಶಾಲೆ

*ಮೊದಲಿಗೆ 10 ನೇ ತರಗತಿಗೆ ಸಿಎಂ ಮತ್ತು ಸಚಿವರ ಭೇಟಿ. ವಿದ್ಯಾರ್ಥಿಗಳೊಂದಿಗೆ ಸಿಎಂ ಸಮಾಲೋಚನೆ.

*ಪಠ್ಯ, ಬಾತ್ ರೂಂ ಕಿಟ್ ಗಳ ಸಮರ್ಪಕ ವಿತರಣೆ ಆಗ್ತಿದೆ ಎಂದ ವಿದ್ಯಾರ್ಥಿಗಳು.

*ಊಟದ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳಿಂದ ಕೇಳಿ ತಿಳಿದ ಸಿಎಂ…ಬೆಳಗ್ಗೆ ದೋಸೆ, ಮಧ್ಯಾಹ್ನ ಊಟ ಚೆನ್ನಾಗಿತ್ತು ಎಂದ ವಿದ್ಯಾರ್ಥಿಗಳು. ಆಗಾಗ ಪಲಾವ್ ಕೊಡ್ತಾರೆ ಎಂದು ಖುಷಿಪಟ್ಟ ವಿದ್ಯಾರ್ಥಿಗಳು.

ಕಳೆದ ಬಾರಿ SSLC ಯಲ್ಲಿ ಎಲ್ಲರೂ ಡಿಸ್ಟಿಂಕ್ಷನ್, ಒಬ್ಬ ವಿಧ್ಯಾರ್ಥಿನಿ ಮಾತ್ರ ಸೆಕೆಂಡ್ ಬಂದಿದ್ದಾಗಿ ಶಿಕ್ಷಕರ ವಿವರಣೆ

*ನಮ್ಮ ಆರೋಗ್ಯ ತಪಾಸಣೆಗೆ ನಿಯಮಿತವಾಗಿ ವೈದ್ಯರು ಬರುತ್ತಿದ್ದಾರೆ ಎಂದು ಸಿಎಂ ಗೆ ತಿಳಿಸಿದ ವಿದ್ಯಾರ್ಥಿಗಳು…

ಸಮಾಜಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, MLC ಪ್ರಕಾಶ್ ರಾಥೋಡ್ ಸೇರಿ ಇತರರು ಉಪಸ್ಥಿತರಿದ್ದರು.‌

ಅಕ್ಷರಗಳು ಎಡಬಿಡದೆ ಸೇರುವುದೇ ಸಂದಿ: ಮಕ್ಕಳಿಗೆ ಸಿಎಂ ಸಿದ್ಧರಾಮಯ್ಯ ವ್ಯಾಕರಣ ಪಾಠ

ಸಂದಿ ಎಂದರೇನು? ಸಂದಿಗಳಲ್ಲಿ ಎಷ್ಟು ವಿಧ? ಕನ್ನಡ ಅಕ್ಷರ ಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ? ಅವಲ್ಲಿ ಯೋಗವಾಹಗಳು ಎಷ್ಟು? ಸ್ವರ ಎಂದರೇನು? ವ್ಯಂಜನಗಳು ಎಂದರೇನು? ಎಷ್ಟಿವೆ? ವರ್ಗೀಯ, ಅವರ್ಗೀಯ ವ್ಯಂಜನಗಳು ಎಷ್ಟಿವೆ? ಅಲ್ಪಪ್ರಾಣ, ಮಹಾಪ್ರಾಣ ಎಂದರೇನು? ಅಲ್ಪ ಪ್ರಾಣಕ್ಕೆ ಉದಾಹರಣೆ ಹೇಳಿ ಎನ್ನುವ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿದ ಸಿಎಂ ಸಿದ್ಧರಾಮಯ್ಯ ಮಕ್ಕಳ ಉತ್ತರಗಳನ್ನು ತಿದ್ದಿ ಹೇಳಿದರು.

ಮೊರಾರ್ಜಿ ದೇಸಾಯಿ ಶಾಲೆಗಳನ್ನು ರಾಜ್ಯದಲ್ಲಿ ಯಾರು, ಯಾವಾಗ ಆರಂಭಿಸಿದರು ಎಂದು ಸಿಎಂ ಪ್ರಶ್ನೆ ಮಾಡಿದರು. ನೀವೇ ಆರಂಭಿಸಿದ್ದು ಎಂದ ವಿದ್ಯಾರ್ಥಿ ಇಸವಿ ಹೇಳಲಿಲ್ಲ. ಬಳಿಕ 94-95 ರಲ್ಲಿ ಆರಂಭಿಸಿದ್ದಾಗಿ ಸಿಎಂ ಹೇಳಿದರು. ಆಗ ಮಕ್ಕಳು ಚಪ್ಪಾಳೆ ತಟ್ಟಿದರು.

ಮಕ್ಕಳಿಗೆ ಬಸವಣ್ಣನವರ ಮಹತ್ವ ತಿಳಿಸಿದ ಸಿಎಂ

ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿದ್ದು ಏಕೆ ಎಂದು ಸಿಎಂ ಸಿದ್ಧರಾಮಯ್ಯ ಕೇಳಿದರು. ಅಗ ಮನುಷ್ಯರ ನಡುವಿನ ತಾರತಮ್ಯ, ಜಾತಿ ವ್ಯವಸ್ಥೆ ವಿರೋಧಿಸಿ ಸಾಮಾಜಿಕ ಕ್ರಾಂತಿ ನಡೆಸಿದ ಬಸವಣ್ಣನವರು…ಎಂದು ಸಿಎಂ ತಾವೇ ಮಕ್ಕಳಿಗೆ ಉತ್ತರಿಸಿದರು.

ವಿದ್ಯಾರ್ಥಿಗಳೊಂದಿಗೆ ಊಟ ಸೇವಿಸಿದ ಸಿಎಂ ಸಿದ್ಧರಾಮಯ್ಯ

ಸಿಎಂ ಸಿದ್ಧರಾಮಯ್ಯ ಅವರು ಚಾಮರಾಜಪೇಟೆಯ ಮೂರಾರ್ಜಿ ದೇಸಾಯಿ ಶಾಲೆಗೆ ಭೇಟಿ ನೀಡಿ, ಮಕ್ಕಳಿಗೆ ಕನ್ನಡ ವ್ಯಾಕರಣ ಪಾಠ ಮಾಡಿದ ಬಳಿಕ, ಮಧ್ಯಾಹ್ನದ ಹೊತ್ತಾಗಿದ್ದರಿಂದ ಅಲ್ಲಿಯೇ ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸೇವಿಸಿದರು.

BREAKING: ‘ಪ್ರಜ್ವಲ್ ರೇವಣ್ಣ’ಗೆ ಬಿಗ್ ಶಾಕ್: ಅತ್ಯಾಚಾರ ಕೇಸಲ್ಲಿ ಸಲ್ಲಿಸಿದ್ದ ‘ಜಾಮೀನು ಅರ್ಜಿ’ 2 ವಾರ ಮುಂದೂಡಿಕೆ | Prajwal Revanna

ಬೆಂಗಳೂರಿಗರೇ ಹುಷಾರ್ : ಇನ್ನುಮುಂದೆ ಎಲ್ಲೆಂದರಲ್ಲಿ ಕಸ ಬೀಸಾಡಿದರೆ ಬೀಳುತ್ತೆ ಭಾರಿ ದಂಡ!

Share. Facebook Twitter LinkedIn WhatsApp Email

Related Posts

ಬೆಳಗಾವಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಿಡಿದೆದ್ದ ಮಹಿಳಾ ಅಧಿಕಾರಿ : ಜೆಸಿಬಿ ಗ್ಲಾಸ್ ಗೆ ಕಲ್ಲು ಹೊಡೆದು ಆಕ್ರೋಶ

02/02/2026 12:30 PM1 Min Read

BIG NEWS : ಲಕ್ಕುಂಡಿಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಚಿನ್ನ, ನಿಧಿ ನಿಕ್ಷೇಪಗಳ ಶೋಧ ಕಾರ್ಯಕ್ಕೆ ಮುಂದಾದ ರಾಜ್ಯ ಸರ್ಕಾರ

02/02/2026 12:23 PM1 Min Read

ALERT : ಈ ತಪ್ಪು ಮಾಡಿದ್ರೆ `ಇನ್ವರ್ಟರ್ ಬ್ಯಾಟರಿ’ ಬಾಂಬ್ ನಂತೆ ಸ್ಫೋಟಗೊಳ್ಳಬಹುದು ಎಚ್ಚರ.!

02/02/2026 12:11 PM2 Mins Read
Recent News

ಪುಣೆ ಪೋರ್ಷೆ ಅಪಘಾತ: ರಕ್ತದ ಮಾದರಿ ವಿನಿಮಯ ಮಾಡಿಕೊಂಡ ಮೂವರು ಆರೋಪಿಗಳಿಗೆ ಸುಪ್ರೀಂಕೋರ್ಟ್ ಜಾಮೀನು

02/02/2026 1:10 PM

ಆಯುಷ್ಮಾನ್ ಭಾರತ್: ನಿಮ್ಮ ಆರೋಗ್ಯ ವಿಮೆ ರದ್ದಾಗದಂತೆ ತಡೆಯಲು ಈ ಸರಳ ಕ್ರಮಗಳನ್ನು ಪಾಲಿಸಿ | Ayushman card

02/02/2026 12:42 PM

ಲೆಬನಾನ್ ನಲ್ಲಿ ಹಿಜ್ಬುಲ್ಲಾ ನಾಯಕ ಅಲಿ ದಾವೂದ್ ಅಮಿಚ್ ನನ್ನು ಹತ್ಯೆ ಮಾಡಿದ ಇಸ್ರೇಲ್

02/02/2026 12:33 PM

ಬೆಳಗಾವಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಿಡಿದೆದ್ದ ಮಹಿಳಾ ಅಧಿಕಾರಿ : ಜೆಸಿಬಿ ಗ್ಲಾಸ್ ಗೆ ಕಲ್ಲು ಹೊಡೆದು ಆಕ್ರೋಶ

02/02/2026 12:30 PM
State News
KARNATAKA

ಬೆಳಗಾವಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಿಡಿದೆದ್ದ ಮಹಿಳಾ ಅಧಿಕಾರಿ : ಜೆಸಿಬಿ ಗ್ಲಾಸ್ ಗೆ ಕಲ್ಲು ಹೊಡೆದು ಆಕ್ರೋಶ

By kannadanewsnow0502/02/2026 12:30 PM KARNATAKA 1 Min Read

ಬೆಳಗಾವಿ : ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿ ಒಬ್ಬರು ಅಕ್ರಮ ಗಣಿಗಾರಿಕೆ ವಿರುದ್ಧ ಸಿಡಿದೆದ್ದಿದು, ಗಣಿಗಾರಿಕೆ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಜೆಸಿಬಿಗೆ…

BIG NEWS : ಲಕ್ಕುಂಡಿಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಚಿನ್ನ, ನಿಧಿ ನಿಕ್ಷೇಪಗಳ ಶೋಧ ಕಾರ್ಯಕ್ಕೆ ಮುಂದಾದ ರಾಜ್ಯ ಸರ್ಕಾರ

02/02/2026 12:23 PM

ALERT : ಈ ತಪ್ಪು ಮಾಡಿದ್ರೆ `ಇನ್ವರ್ಟರ್ ಬ್ಯಾಟರಿ’ ಬಾಂಬ್ ನಂತೆ ಸ್ಫೋಟಗೊಳ್ಳಬಹುದು ಎಚ್ಚರ.!

02/02/2026 12:11 PM

BIG NEWS : ಚಾಮರಾಜನಗರದಲ್ಲಿ ‘ಫ್ಲೋರೈಡ್’ ಮಿಶ್ರಿತ ನೀರು ಸೇವಿಸಿ ಕಿಡ್ನಿ ಕಳೆದುಕೊಂಡ 45 ಜನ!

02/02/2026 12:03 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.