*ಅವಿನಾಶ್ ಆರ್ ಭೀಮಸಂದ್ರ
ಬೆಂಗಳೂರು: ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ( ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳು) ವತಿಯಿಂದ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಆಯೋಜಿಸಿರುವ “ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ”ವನ್ನು ಉದ್ಘಾಟಿಸಿ ಮಾತನಾಡಿದರು.
ನಿಯಮ ಉಲ್ಲಂಘಿಸಿದ ‘SBI, ಕೆನರಾ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್’ಗೆ 3 ಕೋಟಿ ದಂಡ ವಿಧಿಸಿ ಬಿಸಿ ಮುಟ್ಟಿಸಿದ ‘RBI’
ಇದೇ ವೇಳೆ ಅವರು ಮಾತನಾಡಿ, ರಾಜ್ಯದ ಜನತೆಯ ಪರವಾಗಿ ನಾವು ನೀವು ಕೆಲಸ ಮಾಡಬೇಕಾಗಿದೆ, ನನಗೆ ಎರಡನೇ ಬಾರಿ ಅಧಿಕಾರ ನಡೆಸಲು ನೀವು ಮತ್ತು ನಿಮ್ಮ ಕುಟುಂಬದವರು ಸಹಕಾರ ನೀಡಿದ್ದೀರಾ ಅಂತ ತಿಳಿಸಿದರು. ಇನ್ನೂ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖ ಮಾಡಿದ ಸಿಎಂ ಈ ದೇಶಕ್ಕೆ ಹೊಸ ಸಂವಿಧಾನ ಜಾರಿಗೆ ಬಂದಿದ್ದು, ಅವರು ಹೇಳಿರುವ ಪ್ರಕಾರ ವೈವಿದ್ಯತೆಯ ಸಮಾಜಕ್ಕೆ ಕಾಲಿಡುತ್ತಿದ್ದು, ನಮ್ಮ ಸಮಾಜದಲ್ಲಿ ಸಾಮಾಜಿಕ ಅಸಮಾನತೆ ಇದೇ, ಆರ್ಥಿಕ ಅಸಮಾನತೆ ಇದೇ, ರಾಜಕೀಯ ಸ್ವಾತಂತ್ರ್ಯದ ಅಡಿಯಲ್ಲಿ ಒಂದು ಓಟು ಒಂದು ಮೌಲ್ಯ, ಇದು ಎಲ್ಲರಿಗೂ ಅನ್ವಯ ಆಗುತ್ತದೆ ಅಂತ ಹೇಳಿದರು. ಇನ್ನೂ ಇದು ರಾಜಕೀಯ ಪ್ರಜಾಪ್ರಭುತ್ವ, ಆದರೆ ಅದೇ ರೀತಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕತೆಯಲ್ಲಿ ಒಂದು ಓಟು ಇಲ್ಲ. ಜಾತಿ ಕಾರಣಕ್ಕೆ ಸಾಮಾಜಿಕ, ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ ಅಂತ ಸಿಎಂ ತಿಳಿಸಿದರು.
BREAKING : ಬೆಂಗಳೂರಲ್ಲಿ ‘CCB’ ಭರ್ಜರಿ ಬೇಟೆ : ಅಂತಾರಾಷ್ಟ್ರೀಯ ‘ಡ್ರಗ್ ಪೆಡ್ಲರ್’ ಸಹಿತ 4 ಆರೋಪಿಗಳ ಬಂಧನ
ಎಲ್ಲಿಯವರಿಗೂ ಅಸಮಾನತೆ ಇರುತ್ತದೆಯೋ ಅಲ್ಲಿ ತನಕ ಸಮಾನತೆ ತರಲು ಸಾಧ್ಯವಿಲ್ಲ ಅಂತ ದೊಡ್ಡವರು ಹೇಳಿದ್ದಾರೆ ಅಂತ ಹೇಳಿದರು. ಎಲ್ಲರೂ ಅಸಮಾನತೆಯನ್ನು ತೊಡೆದು ಹಾಕಬೇಕು ಅಂತ ಸಿಎಂ ಸಿದ್ದರಾಮಯ್ಯ ಅವರು ಕರೆ ನೀಡಿದರು. ಅಸಮಾನತೆಯನ್ನು ತೊಡೆದು ಹಾಕಿದಲ್ಲಿ ಮಾತ್ರ ಸಂವಿಧಾನದ ಆಶಯ ಈಡೇರಲಿದೆ ಅಂತ ತಿಳಿಸಿದರು. ಇನ್ನೂ ಸರ್ಕಾರ ನಿಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಲೇ ಬೇಕು ಅದರಲ್ಲಿ ಎರಡು ಮಾತಿಲ್ಲ. ಆದರೆ ಅದೇ ಮೊದಲ ಆದ್ಯತೆ ಅಲ್ಲ, ಆದರೆ ನಿಮ್ಮ ಆಗಿರುವ ಅನ್ಯಾಯವನ್ನು ಸರ್ಕಾರದ ಮುಂದಿಟ್ಟು, ಅದನ್ನು ಸರಿ ಪಡಿಸುವ ಕೆಲಸ ಮಾಡುವುದು ಮುಖ್ಯವಾಗಿದೆ ಅಂತ ಹೇಳಿದರು. ಈ ರಾಜ್ಯದ ಜನತೆಯೇ ಮಾಲೀಕರು, ಅವರ ಪರವಾಗಿ ಕೆಲಸ ಮಾಡಬೇಕಾಗಿರುವುದು ಮೊದಲ ಅಧ್ಯತೆ. ನಿಮ್ಮ ಬೇಡಿಕೆ ನಂತರದ ಬೇಡಿಕೆಯಾಗಿದೆ ಅಂತ ಹೇಳಿದರು. ಇದನ್ನೂ ನೀವು ಅರ್ಥ ಮಾಡಿಕೊಂಡಿದ್ದೀರಾ, ಹಾಗೂ ನಾನು ಅರ್ಥ ಮಾಡಿಕೊಂಡಿದ್ದೀನಿ ಎನ್ನುವುದು ನಮ್ಮ ಭಾವನೆಯಾಗಿದೆ ಅಂತ ತಿಳಿಸಿದರು.
BREAKING : ಚಿತ್ರದುರ್ಗದ ಮುರುಘಾ ಮಠಕ್ಕೆ ‘ಆಡಳಿತ ಸಮಿತಿ ರಚಿಸಿ’ : ರಾಜ್ಯ ಸರ್ಕಾರಕ್ಕೆ ಸುಪ್ರೀಂ ‘ನೋಟಿಸ್’
ಇನ್ನೂ ಈ ದೇಶದ ಇತಿಹಾಸವನ್ನು ಸಂವಿಧಾನವನ್ನು ನೀವೆಲ್ಲ ತಿಳಿದುಕೊಂಡಿದ್ದೇವೆ ಎನ್ನುವುದು ನಮ್ಮ ಭಾವನೆ ಅಂತ ಹೇಳಿದರು. ಮೊನ್ನೆ ಎರಡು ದಿನಗಳ ಕಾಲ ಸಂವಿಧಾನ ಐಕ್ಯತೆ ಕಾರ್ಯಕ್ರಮವನ್ನು ನೇರವೇರಿಸಿದೇವು, ಆಗ ಹಲವು ಮಂದಿ ನಾಯಕರುಗಳು ಹಾಜರಿದ್ದರು, ಆಗ ನಾವು ಸಂವಿಧಾನದ ಉಳಿವಿಗಾಗಿ ಒಗ್ಗಟು ಆಗಲಿದ್ದೇವೆ ಅಂತ ತಿಳಿಸಿದರು . ಇನ್ನೂ ಆರನೇ ವೇತನ ಆಯೋಗ ಮತ್ತು ಏಳನೇ ವೇತನ ಆಯೋಗ ಇದ್ದಾಗ ನಾನು ಸಿಎಂ ಆಗಿದ್ದೇ ಅಂಥ ಹೇಳಿದ ಸಿಎಂ ಸಿದ್ದರಾಮಯ್ಯ ಅವರು, ನಾನು ವೇತನ ಆಯೋಗದ ವಿರುದ್ದ ಇದ್ದೇನೆ ಅಂಥ ಹಲವು ಮಂದಿ ಅಪಪ್ರಚಾರತ ನಡೆಸಿದರು ಅಂತ ಹೇಳಿದರು. ಇನ್ನೂ ನಾನು ವಿರುದ್ದ ಇದ್ದರೇ ಯಾಕೆ ಆರನೇ ವೇತನ ಆಯೋಗವನ್ನು ಜಾರಿಗೆ ತರುತ್ತಿದ್ದೇ ಅಂಥ ಪ್ರಶ್ನೆ ಮಾಡಿದರು.
ಇನ್ನೂ ಕಳೆದ ಸಾರಿ ಸಮ್ಮೇಳನ ನಡೆದ ವೇಳೆಯಲ್ಲಿ ನಾನು ಕೂಡ ಆಗಮಿಸಿದ್ದೇ, ಆದರೆ ಆಗ ಜನತೆ ಕಮ್ಮಿ ಪ್ರಮಾಣದಲ್ಲಿ ಹಾಜರಿದ್ದರು, ಈ ಬಾರಿ ಹೆಚ್ಚು ಜನರು ಸೇರಿರುವುದರಿಂದ ಸಂತೋಶ ತಂದಿದೆ ಅಂಥ ಹೇಳಿದರು. 7ನೇ ವೇತನ ಆಯೋಗವು ತನ್ನ ವರದಿ ಸಲ್ಲಿಕೆ ಮಾಡಲು ಮಾರ್ಚ್ 15 ಕೊನೆಯ ದಿನವಾಗಿದೆ. ಆದರೆ ನಾನು ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನಲೇಯಲ್ಲಿ ನಾನು ಆಗಸ್ಟ್‌ನಲ್ಲಿ ವರದಿ ಸಲ್ಲಿಸುವುದಕ್ಕೆ ಹೇಳಿದ್ದೇನೇ ಅಂತ ಹೇಳಿದರು. ಇನ್ನೂ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ೫೨ ಸಾವಿರ ಕೋಟಿ ಮೀಸಲು ಇಟ್ಟಿದ್ದೇವೆ ಅಂತ ಹೇಳಿದರು.
ಇನ್ನೂ ಶೀಘ್ರದಲ್ಲಿ ನಿಮ್ಮ ಬೇಡಿಕೆಯನ್ನು ಈಡೇರಿಸಲಾಗುವುದು ಅಂತ ಹೇಳಿದರು. ಇನ್ನೂ ಒಪಿಎಸ್ ಬಗ್ಗೆ ಮಾತನಾಡುತ್ತ ಸಿಎಂ ಸಿದ್ದರಾಮಯ್ಯ ಅವರು ಇನ್ನೂ ವರದಿ ಬಂದಿಲ್ಲ, ಕೂಡಲೇ ಈ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಗಾಗುವುದು ಅಂತ ಹೇಳಿದರು. ಒಪಿಎಸ್ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಾಗುವುದು ಅಂತ ತಿಳಿಸಿದರು. ಇನ್ನೂ ಹಿಮಾಚಲ ಪ್ರದೇಶ, ಛತ್ತೀಸ್‌ಘಡ, ಸೇರಿದಂಥೆ ಇತರೆ ರಾಜ್ಯಗಳಲ್ಲಿರುವ ಕಾನೂನು ಗಳನ್ನು ಪರಿಶೀಲನೆ ಮಾಡಲಾಗುವುದು ಅಂತ ಹೇಳಿದರು. ನಿಮ್ಮ ಜೊತೆಗೆ ಚರ್ಚೆ ಮಾಡಿ ಶೀಘ್ರದಲ್ಲಿ ತೀರ್ಮಾನ ಮಾಡೋಣ ಅಂತ ಹೇಳಿದರು. ಇನ್ನೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಬಗ್ಗೆ ಕೂಡ ತೀರ್ಮಾನ ಮಾಡಲಾಗುವುದು ಅಂತ ಹೇಳಿದರು. ನಾನು, ನಮ್ಮ ಸರ್ಕಾರ ನಿಮ್ಮ ಪರವಾಗಿದ್ದು, ಯಾವುದೇ ಕಾರಣಕ್ಕೂ ಚಿಂತೆ ಮಾಡಬೇಡಿ, ನಿಮಗೆ ನ್ಯಾಯಾ ನೀಡಲು ಯಾವುದೇ ಕಾರಣಕ್ಕೂ ಹಿಂದೇಟು ಹಾಕುವುದಿಲ್ಲ ಅಂತ ಅವರು ಹೇಳಿದರು. ಅಂತಿಮ ವರದಿ ಬಂದ ಬಳಿಕ ಏಳನೇ ವೇತನ ಯೋಜನೆ ಮತ್ತು ಹಳೆ ಪಿಂಚಣಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಅಂತ ತಮ್ಮ ಮಾತನ್ನು ಮುಗಿಸಿದರು.