ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ 700 ಕೆಜಿ ಬೆಳ್ಳಿಯ ಉಡುಗೋರೆಗಳನ್ನು ನೀಡಲಾಗಿತ್ತು. ಈ ಉಡುಗೋರೆಗಳನ್ನು ಮಲೆಮಹದೇಶ್ವರ ಸ್ವಾಮಿಗೆ ಅರ್ಪಿಸಿದ್ದಾರೆ.
ಸಿಎಂ ಸಿದ್ಧರಾಮಯ್ಯ ಅವರು ಸಭೆ, ಸಮಾರಂಭಗಳಲ್ಲಿ ಉಡುಗೋರೆಯಾಗಿ ಬಂದಿದ್ದ ಬೆಳ್ಳಿಯ ಗದೆ, ಕತ್ತಿ ಮುಂತಾದ ವಸ್ತುಗಳನ್ನು ಸೇರಿದಂತೆ 700 ಕೆಜಿಯಷ್ಟು ಬೆಳ್ಳಿಯನ್ನು ಮಲೆ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ. ಆದ್ರೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇದು ಯಾವುದನ್ನು ಹೇಳಿಕೊಳ್ಳಲಿಲ್ಲ ಎಂದು ಮಾಜಿ ಶಾಸಕ ಹೆಚ್.ಪಿ ಮಂಜುನಾಥ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷವು ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಭಕ್ತಿಯನ್ನು ಬೀದಿಯಲ್ಲಿ ತೋರಿಸುವುದಲ್ಲ. ಆತ್ಮದಲ್ಲಿ ತೋರಿಸಬೇಕು. ನಾವು ಕೂಡ ರಾಮೆ ರಾಮ ಎನ್ನುವ ಮಂತ್ರವನ್ನು ಪಠಿಸುತ್ತಾ ಸೀತಾರಾಮನಿಗೆ ಕೈ ಮುಗಿಯುತ್ತೇವೆ ಎಂದರು.
ಜೈ ಶ್ರೀರಾಮ್ ಎಂದು ಆಕ್ರೋಶದಿಂದ ಕೂಗುವುದಿಲ್ಲ. ನಮ್ಮದು ತಾರತಮ್ಯ ಇಲ್ಲದ ಆಡಳಿತವಾಗಿದೆ. ಟಿಕೆಟ್ ಹಂಚಿಕೆಯಲ್ಲೂ ಎಲ್ಲಾ ವರ್ಗಕ್ಕೂ ಸಮಾನತೆ ನೀಡಲಾಗಿದೆ ಎಂದು ತಿಳಿಸಿದರು.
ಭಾರತದಲ್ಲಿ ಶ್ರೀಮಂತರ ಸಂಖ್ಯೆಯಲ್ಲಿ ಶೇ.75 ಕ್ಕಿಂತ ಹೆಚ್ಚಳ : ಇದೇ ಮೊದಲ ಬಾರಿಗೆ 1,300 ದಾಟಿದ ಸಿರಿವಂತರ ಸಂಖ್ಯೆ!
BREAKING: ಬಿಗ್ ಬಾಸ್ ಕನ್ನಡ ಖ್ಯಾತಿಯ ‘ಸೋನು ಶ್ರೀನಿವಾಸಗೌಡ’ಗೆ ’14 ದಿನ’ ನ್ಯಾಯಾಂಗ ಬಂಧನ, ಜೈಲುಪಾಲು