ಬೆಂಗಳೂರು: ಮೊಣಗಾಲಿನ ನೋವಿನಿಂದ ಬಳಲುತ್ತಿರುವಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸರ್ಕಾರಿ ಫಾರ್ಚೂನರ್ ಕಾರು ತೊರೆದಿದ್ದಾರೆ. ಖಾಸಗಿ ಟೊಯೋಟಾ ವೆಲ್ ಪೈರ್ ಕಾರಿನಲ್ಲೇ ಓಡಾಡುತ್ತಿರುವುದಾಗಿ ಹೇಳಲಾಗುತ್ತಿತ್ತು. ಇಂದು ವಿಧಾನಸೌಧಕ್ಕೆ ಅದೇ ಕಾರಿನಲ್ಲಿ ಆಗಮಿಸಿ ಗಮನ ಸೆಳೆದರು.
ಇಂದು ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಹಿನ್ನಲೆಯಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಸರ್ಕಾರಿ ಫಾರ್ಚೂನರ್ ಕಾರು ಬಿಟ್ಟು, ಖಾಸಗಿ ಕಾರಿನಲ್ಲೇ ಆಗಮಿಸಿದರು.
ಟೊಯೋಟಾ ವೆಲ್ ಫೈರ್ ಕಾರಿನಲ್ಲಿ ವಿಧಾನಸೌಧಕ್ಕೆ ಆಗಮಿಸಿದಂತ ಅವರು, ಕಾರಿನಿಂದ ಇಳಿದು ವೀಲ್ಹ್ ಚೇರಿನಲ್ಲೇ ವಿಧಾನಸೌಧದ ಸಂಪುಟ ಸಭಾ ಮಂದಿರಕ್ಕೆ ತೆರಳಿದರು.
ಇದೇ ವೇಳೆಯಲ್ಲಿ ಮೂಡಾ ಹಗರಣದಲ್ಲಿ ಕ್ಲೀನ್ ಚಿಟ್ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಅದಕ್ಕೆ ಪ್ರತಿಕ್ರಿಯಿಸದೇ ಮುಂದೆ ಸಾಗಿದರು.
3 ದಿನಗಳ ‘ನಮ್ಮ ರಸ್ತೆ-2025’ ಕಾರ್ಯಗಾರ, ಪ್ರದರ್ಶನ, ಸಮಾವೇಶಕ್ಕೆ ಡಿಸಿಎಂ ಡಿಕೆಶಿ ಚಾಲನೆ
BIG NEWS: ’60 ಲಕ್ಷ ದೇವರ ಹುಂಡಿ ಹಣ’ವನ್ನೇ ಪತ್ನಿ ಖಾತೆಗೆ ವರ್ಗಾಯಿಸಿದ ‘ಅಧಿಕಾರಿ ಸಸ್ಪೆಂಡ್’