ಬೆಂಗಳೂರು: ರಾಜ್ಯ ಸರ್ಕಾರದಿಂದ ಪೌರ ಕಾರ್ಮಿಕರು ತ್ಯಾಜ್ಯ ಸಂಗ್ರಹಣಾ ವಾಹನಗಳ ಚಾಲಕರಿಗೆ ಶುಭಸುದ್ದಿಯೊಂದು ಹೊರ ಬಿದ್ದಿದೆ. ಪೌರ ಕಾರ್ಮಿಕರಿಗೆ ಕಾರ್ಮಿಕರ ದಿನವಾದಂತ ಮೇ.1ರಂದು ಖಾಯಂ ಮಾಡುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ.
ಈ ಬಗ್ಗೆ ಮಾತನಾಡಿರುವಂತ ಸಿಎಂ ಸಿದ್ಧರಾಮಯ್ಯ ಅವರು, ಕಾರ್ಮಿಕರ ದಿನದಂದು ಗುತ್ತಿಗೆ ಆಧಾರಿತ ಪೌರ ಕಾರ್ಮಿಕರನ್ನು ಹಾಗೂ ತ್ಯಾಜ್ಯ ಸಂಗ್ರಹಣಾ ವಾಹನಗಳ ಚಾಲಕರನ್ನು ಖಾಯಂಗೊಳಿಸುವ ನಿರ್ಧಾರಕ್ಕೆ ನಾವು ಬಂದಿದ್ದೇವೆ ಎಂದಿದ್ದಾರೆ.
ಬಸವಾದಿ ಶರಣರ ಕಾಯಕವೇ ಕೈಲಾಸವೆಂಬ ಮಾತಿಗೆ ಬದ್ಧರಾಗಿ ಬಿಸಿಲು – ಮಳೆ, ಹಗಲು – ರಾತ್ರಿಯೆನ್ನದೆ ಸಮಾಜವನ್ನು ಸ್ವಚ್ಚವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರ ಕಲ್ಯಾಣ ನಮ್ಮ ಕರ್ತವ್ಯ ಅಂತ ತಿಳಿಸಿದ್ದಾರೆ.
2017ರಲ್ಲಿಯೂ 10,000 ಪೌರಕಾರ್ಮಿಕರ ಖಾಯಂಮಾತಿ, ವೇತನವನ್ನು ₹7,000 ದಿಂದ ₹17,000 ಸಾವಿರಕ್ಕೆ ಹೆಚ್ಚಳ ಮಾಡಿದ್ದು ನಾವೇ, ಎಲ್ಲ ಕಾಲಕ್ಕೂ ಶ್ರಮಿಕ ಜನರ ನಿಜವಾದ ಹಿತಚಿಂತಕರು ನಾವೇ ಎಂದು ಹೇಳಿದ್ದಾರೆ.
ಕಾರ್ಮಿಕರ ದಿನದಂದು ಗುತ್ತಿಗೆ ಆಧಾರಿತ ಪೌರ ಕಾರ್ಮಿಕರನ್ನು ಹಾಗೂ ತ್ಯಾಜ್ಯ ಸಂಗ್ರಹಣಾ ವಾಹನಗಳ ಚಾಲಕರನ್ನು ಖಾಯಂಗೊಳಿಸುವ ನಿರ್ಧಾರಕ್ಕೆ ನಾವು ಬಂದಿದ್ದೇವೆ.
ಬಸವಾದಿ ಶರಣರ ಕಾಯಕವೇ ಕೈಲಾಸವೆಂಬ ಮಾತಿಗೆ ಬದ್ಧರಾಗಿ ಬಿಸಿಲು – ಮಳೆ, ಹಗಲು – ರಾತ್ರಿಯೆನ್ನದೆ ಸಮಾಜವನ್ನು ಸ್ವಚ್ಚವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರ ಕಲ್ಯಾಣ ನಮ್ಮ… pic.twitter.com/7ErcworXwR
— DIPR Karnataka (@KarnatakaVarthe) April 7, 2025
ಪೌರ ಕಾರ್ಮಿಕರಿಗೆ ಸಿಹಿಸುದ್ದಿ: ಮೇ.1ರಂದು ರಾಜ್ಯ ಸರ್ಕಾರದಿಂದ ‘ನೇಮಕಾತಿ ಪತ್ರ’ ವಿತರಣೆ
BIG NEWS : ‘ಗೃಹಲಕ್ಷ್ಮಿ’ ಯೋಜನೆ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ ರಾಜ್ಯ ಸರ್ಕಾರ