ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ನಿನ್ನೆ ಮಹಿಳೆಯೊಬ್ಬರು ಭೇಟಿಯಾಗಿ, ತನಗೆ ನಿವೇಶನ ಇಲ್ಲ. ಗಂಡ ಮತ್ತು ಇಬ್ಬರು ಮಕ್ಕಳಿದ್ದಾರೆ. ಬಾಡಿಗೆ ಕಟ್ಟೋದಕ್ಕೂ ಕಷ್ಟವಾಗುತ್ತಿದೆ ಎಂಬುದಾಗಿ ಅಲವತ್ತುಕೊಂಡು, ನಿವೇಶನಕ್ಕೆ ಮನವಿ ಮಾಡಿದ್ದರು. ಅವರು ಮನವಿ ಮಾಡಿದಂತ ಒಂದೇ ದಿನದಲ್ಲಿ ನಿವೇಶನ ಮಂಜೂರು ಮಾಡಿ ಆದೇಶಿಸಲಾಗಿದೆ.
ಈ ಸಂಬಂಧ ತುಮಕೂರು ಜಿಲ್ಲೆಯ ಶಿರಾ ನಗರಸಭೆಯ ಪೌರಾಯುಕ್ತರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ದಿನಾಂಕ 02-12-2024ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತುಮಕೂರಿಗೆ ಭೇಟಿ ನೀಡಿದಂತ ಸಂದರ್ಭದಲ್ಲಿ ರಾಬಿಯಾ ಕೋಂ ಅಸ್ಲಂ ಪಾಷಾ ಎಂಬುವರು ತಾತ್ಕಾಲಿಕ ನಿವೇಶನ ಕೋರಿ ಮನವಿ ಸಲ್ಲಿಸಿದ್ದರು.
ಅವರು ಸಲ್ಲಿಸಿದಂತ ಮನವಿಯಲ್ಲಿ ತಾನು ಶಿರಾ ಟೌನ್ ನಿವಾಸಿಯಾಗಿದ್ದು, ಕಡು ಬಡವರಾಗಿದ್ದೇವೆ. ಗಂಡ ಮತ್ತು ಎರಡು ಪುಟ್ಟ ಮಕ್ಕಳನ್ನು ನೋಡಿಕೊಂಡು ಬಾಡಿಗೆ ಕಟ್ಟಲು ಸಾಧ್ಯವಿಲ್ಲದ ಕಾರಣ ತಾತ್ಕಾಲಿಕವಾಗಿ ನಿವೇಶನವನ್ನು ಕಲ್ಪಿಸುವಂತೆ ಕೋರಿದ್ದರು ಎಂದಿದ್ದಾರೆ.
ಸದರಿ ಕೋರಿಯನ್ನು ಶಿರಾ ಆಶ್ರಯ ಸಮಿತಿಯ ಸಭೆಯಲ್ಲಿ ಪರಿಗಣಿಸಿ, ಶಿರಾ ನಗರದ ಸರ್ವೆ ನಂಬಬರ್.100ರಲ್ಲಿ ನಗರ ಆಶ್ರಯ ಯೋಜನೆಯಡಿ ರಚಿಸಲಾಗಿರುವ ನಿವೇಶನಗಳ ಪೈಕಿ 20×30 ಅಳತೆಯ ಒಂದು ನಿವೇಶವನ್ನು ಸದರಿಯವರಿಗೆ ಹಂಚಿಕೆ ಮಾಡಲು ಠರಾವು ಅಂಗೀಕರಿಸಲಾಗಿರುತ್ತದೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಇವರು ರಾಜೀವ್ ಗಾಂಧಿ ವಸತಿ ನಿಗಮ, ಬೆಂಗಳೂರು ಇವರಿಗೆ ದಾಖಲೆಗಳನ್ನು ಸಲ್ಲಿಸಿ ನಿಯಮಾನುಸಾರ ಹಕ್ಕು ಪತ್ರ ಸೃಜಿಸಿ, ವಿತರಿಸಲು ಕ್ರಮವಹಿಸಲಾಗಿರುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ ನಿನ್ನೆ ಮುಖ್ಯಮಂತ್ರಿಗಳಿಗೆ ಬಡ ಕುಟುಂಬದ ಮಹಿಳೆ ತನಗೆ ನಿವೇಶನವಿಲ್ಲ. ಬಾಡಿಗೆ ಮನೆಯಲ್ಲಿ ಇದ್ದೀವಿ. ಬಾಡಿಗೆ ಕಟ್ಟೋದಕ್ಕೂ ಕಷ್ಟವಾಗುತ್ತಿದೆ ಎಂಬುದಾಗಿ ಗೋಳಾಡುತ್ತಲೇ ಸಿದ್ಧರಾಮಯ್ಯಗೆ ಮನವಿ ನೀಡಿದ್ದರು. ನಿವೇಶನ ನೀಡಿ, ಮನೆ ಮಂಜೂರು ಮಾಡಿಸಿಕೊಡುವಂತೆಯೂ ಮನವಿಯಲ್ಲಿ ಕೋರಿದ್ದರು. ಈ ಮನವಿಗೆ ಮಾನವೀಯತೆಯನ್ನು ಮೆರೆದಂತ ಸಿಎಂ ಸಿದ್ಧರಾಮಯ್ಯ ಒಂದೇ ದಿನದಲ್ಲಿ ಸೈಟ್ ಮಂಜೂರು ಮಾಡಿ ಆದೇಶಿಸಿದ್ದಾರೆ.
ಕೈಗಾರಿಕಾ ಘಟಕದ ಶೇಖರಣಾ ಟ್ಯಾಂಕರ್ ಸ್ಪೋಟಗೊಂಡು ನಾಲ್ವರು ಕಾರ್ಮಿಕರು ದುರ್ಮರಣ
BREAKING: ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಗೆ ಬಿಗ್ ರಿಲೀಫ್: ಚುನಾವಣಾ ಬಾಂಡ್ ಕೇಸ್ ರದ್ದುಪಡಿಸಿ ಹೈಕೋರ್ಟ್ ಆದೇಶ