ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ನಡೆಸಿದಂತ ಸಾರಿಗೆ ಸಂಘಟನೆಗಳೊಂದಿಗಿನ ಸಭೆಯಲ್ಲಿ ಸಕಾರಾತ್ಮಕವಾಗಿಯೇ ಪ್ರತಿಸ್ಪಂದಿಸಿದ್ದಾರೆ. ಸಾರಿಗೆ ನೌಕರರಿಗೆ 14 ತಿಂಗಳ ಅರಿಯರ್ಸ್ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, 38 ತಿಂಗಳ ಬಾಕಿ ವೇತನವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. 718 ಕೋಟಿ ಕೊಡುವುದಾಗಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. 14 ತಿಂಗಳ ಅರಿಯರ್ಸ್ ಕೊಡಲು ಸಿಎಂ ಸಿದ್ಧರಾಮಯ್ಯ ಒಪ್ಪಿಗೆ ನೀಡಿದ್ದಾರೆ ಎಂದರು.
ಸಾಮಾನ್ಯವಾಗಿ 4 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಆಗುತ್ತದೆ. ಹಿಂದಿನ ಸರ್ಕಾರ ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ಮಾಡಿರಲಿಲ್ಲ. ಸಿಬ್ಬಂದಿ ಮುಷ್ಕರದ ಬಗ್ಗೆ ನಾವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.
BREAKING: ‘ಧರ್ಮಸ್ಥಳ ಕೇಸ್’ಗೆ ಮತ್ತೊಂದು ಟ್ವಿಸ್ಟ್: ಬಂಗ್ಲಗುಡ್ಡದಲ್ಲಿ ‘ಅಸ್ಥಿಪಂಜರ’ದ ಹಲವು ಭಾಗಗಳು ಪತ್ತೆ
BREAKING: ತುಮಕೂರು ಬಳಿ 19 ನವಿಲು ಸಾವಿನ ಬಗ್ಗೆ ತನಿಖೆಗೆ ಸಚಿವ ಈಶ್ವರ ಖಂಡ್ರೆ ಆದೇಶ