ಬೆಂಗಳೂರು: ತನ್ನ ಸಮಸ್ಯೆ ಹೇಳಿಕೊಂಡು ಡಿಗ್ರಿ ಮುಗಿಸಿದ್ದಂತ ವಿಶೇಷ ಚೇತನ ಯುವತಿಯೊಬ್ಬಳು ಇಂದು ಸಿಎಂ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿದರು. ಆಕೆಯ ಮನವಿ ಪಡೆದಂತ ಅವರು, ಸ್ಥಳದಲ್ಲೇ ಪರಿಹಾರವನ್ನು ಸೂಚಿಸಿದರು.
ಇಂದು ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿದೆಡೆಗಳಿಂದ ಸಾವಿರಾರು ಜನರು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಆಗಮಿಸಿದ್ದಾರೆ.
ಮಧ್ಯಾಹ್ನವಾದರೂ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರು ಮಾತ್ರ ಕಡಿಮೆಯಾಗುತ್ತಿಲ್ಲ. ಇನ್ನೂ ಹೆಚ್ಚು ಹೆಚ್ಚೇ ಆಗುತ್ತಿದ್ದು, ಉರಿ ಬಿಸಿಲಿನಲ್ಲೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜನರ ಬಳಿಗೆ ಸರ್ಕಾರ ಎಂಬ ರೀತಿ, ಸಮಸ್ಯೆಯನ್ನು ಶಾಂತ ಚಿತ್ತದಿಂದ ಕೇಳುತ್ತ, ಅದನ್ನು ಪರಿಹರಿಸೋ ಕಾರ್ಯದಲ್ಲಿ ತೊಡಗಿದ್ದಾರೆ.
ಇಂದಿನ ಜನಸ್ಪಂದನ ಕಾರ್ಯಕ್ರಮದಲ್ಲಿ ಡಬಲ್ ಡಿಗ್ರಿ ಮಗುಸಿದ್ದಂತ ಬೆಂಗಳೂರಿನ ವಿಶೇಷ ಚೇತನ ಯುವತಿ ನವ್ಯಶ್ರೀ ಎಂಬುವರು ತಾಯಿ ರಮಾಮಣಿ ಅವರ ಜೊತೆಗೆ ಬಂದು ಉದ್ಯೋಗಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಳಿ ಮನವಿ ಮಾಡಿದರು.
ವಿಕಲ ಚೇತನ ಯುವತಿಯು ನೀಡಿದಂತ ಮನವಿ ಸ್ವೀಕರಿಸಿದಂತ ಸಿಎಂ ಸಿದ್ಧರಾಮಯ್ಯ ಅವರು, ಉದ್ಯೋಗ ಮೇಳದ ವೇಳೆ ಈ ಅರ್ಜಿಯನ್ನು ಪರಿಗಣಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿ, ವಿಶೇಷ ಚೇತನ ಯುವತಿಯ ಬದುಕಿಗೆ ಉದ್ಯೋಗದ ಭರವಸೆಯನ್ನು ನೀಡಿದರು. ಈ ಮೂಲಕ ವಿಶೇಷ ಚೇತನ ಯುವತಿಯ ಬದುಕಿಗೆ ಆಸರೆಯಾದರು.
ಡಬಲ್ ಡಿಗ್ರಿ ಮುಗಿಸಿರುವ ಬೆಂಗಳೂರಿನ ವಿಶೇಷ ಚೇತನ ಯುವತಿ ನವ್ಯಶ್ರೀ ಅವರು ತಾಯಿ ರಮಾಮಣಿ ಅವರ ಜೊತೆ ಬಂದು ಉದ್ಯೋಗಕ್ಕಾಗಿ ಮುಖ್ಯಮಂತ್ರಿ @siddaramaiah ಅವರ ಬಳಿ ಮನವಿ ಮಾಡಿದರು.
ಉದ್ಯೋಗ ಮೇಳದ ವೇಳೆ ಈ ಅರ್ಜಿಯನ್ನು ಪರಿಗಣಿಸುವಂತೆ ಮುಖ್ಯಮಂತ್ರಿಗಳು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿ, ವಿಶೇಷ ಚೇತನ ಯುವತಿಯ ಬದುಕಿಗೆ ಉದ್ಯೋಗದ… pic.twitter.com/OqBL76n0JB— CM of Karnataka (@CMofKarnataka) February 8, 2024
BREAKING NEWS: ‘ಮ್ಯಾನ್ಮಾರ್’ ಜೊತೆಗಿನ ‘ಮುಕ್ತ ಸಂಚಾರ ವ್ಯವಸ್ಥೆ’ಯನ್ನು ರದ್ದುಗೊಳಿಸಿದ ‘ಭಾರತ’