ವಿಜಯಪುರ: ನಿನ್ನೆ ನಿಧನರಾದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಎಲ್ಲಾ ಭಕ್ತರು ಶಾಂತಿ, ಸಂಯಮ ಹಾಗೂ ಶಿಸ್ತಿನಿಂದ ದರ್ಶನ ಪಡೆದು ಅಂತ್ಯಕ್ರಿಯೆಗೆ ಸಹರಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಇಂದು ಈ ಬಗ್ಗೆ ವಿಜಯಪುರದಲ್ಲಿ ಮಾತಾಡಿದಂತ ಅವರು, ವಿಜಯಪುರ ಜಿಲ್ಲಾಡಳಿತ, ಎಲ್ಲಾ ಜನಪ್ರತಿನಿಧಿಗಳು, ಮುಖಂಡರಾದ ಎಂ.ಬಿ.ಪಾಟೀಲ್, ಬಸನಗೌಡರು, ಶಾಸಕರು ಎಲ್ಲರೂ ಅಚ್ಚುಕಟ್ಟಾಗಿ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು.

ಸಕಲ ಸರ್ಕಾರಿ ಗೌರವಗಳನ್ನು ಸಿದ್ದೇಶ್ವರ ಶ್ರೀಗಳಿಗೆ ಸೂರ್ಯ ಅಸ್ತವಾಗೋ ಮೊದಲೇ ಸಲ್ಲಿಸಬೇಕಾಗುತ್ತದೆ. 5.15ಕ್ಕೆ ಸರ್ಕಾರಿ ಗೌರವಗಳನ್ನು ಪ್ರಾರಂಭಿಸಲಾಗುತ್ತದೆ. ಈ ಸಕಲ ಸರ್ಕಾರಿ ಗೌರವಗಳನ್ನು ನೆರವೇರಿಸಿದ ನಂತ್ರವೂ ಭಕ್ತರಿಗೆ ಶ್ರೀಗಳ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಯಾರೂ ಆಂತಕ ಪಡುವ ಅಗತ್ಯವಿಲ್ಲ. ಶಾಂತಿಯುತವಾಗಿ ಶ್ರೀಗಳ ಅಂತಿಮ ದರ್ಶನ ಪಡೆಯುವಂತ ಮನವಿ ಮಾಡಿದರು.

ಸಿದ್ದೇಶ್ವರ ಶ್ರೀಗಳು ಒಂದು ಸಂಸ್ಕೃತಿ ಯನ್ನೇ ಬಿಟ್ಟುಹೋಗಿದ್ದಾರೆ

ವಿಜಯಪುರದ ಜನ ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡುತ್ತಿದ್ದಾರೆ. ಸಿದ್ದೇಶ್ವರ ಗುರುಗಳು ಎಷ್ಟು ಪ್ರೀತಿ, ವಿಶ್ವಾಸ ಹಾಗೂ ಸಂಸ್ಕೃತಿಯನ್ನೇ ಬಿಟ್ಟುಹೋಗಿದ್ದಾರೆ ಎನ್ನುವುದು ಅಲ್ಲಿನ ಜನತೆ ನಡೆದುಕೊಂಡ ರೀತಿಯನ್ನು ನೋಡಿದಾಗ ನಿಜವಾಗಿಯೂ ಸಿದ್ದೇಶ್ವರರ ಮಾತಿನಂತೆ ನಡೆದುಕೊಳ್ಳುವ ಜನ ಎಂದೆನಿಸಿದೆ. ಸಹಾಯ, ಸಹಕಾರ, ಊಟ, ತಿಂಡಿ, ನೀರು ನೀಡುತ್ತಿದ್ದಾರೆ. ಇದಕ್ಕಾಗಿ ವಿಜಯಪುರದ ಸಮಸ್ತ ಜನತೆಗೆ ಧನ್ಯವಾದಗಳನ್ನು ಮುಖ್ಯ ಮಂತ್ರಿಗಳು ತಿಳಿಸಿದರು.

BIGG NEWS : ಚಂದ್ರಬಾಬು ನಾಯ್ಡು ರ‍್ಯಾಲಿಯಲ್ಲಿ ಕಾಲ್ತುಳಿತಕ್ಕೆ 11 ಬಲಿ : ಜಾಥ , ಸಾರ್ವಜನಿಕ ಸಭೆಗೆ ಆಂಧ್ರ ಸರ್ಕಾರ ನಿಷೇಧ

BIGG NEWS: ಸಿದ್ದೇಶ್ವರ ಶ್ರೀಗಳು ಅಸ್ತಂಗತ:ನಿಡಗುಂದಿ ಪಟ್ಟಣ ಬಂದ್;‌ ಸ್ವಾಮೀಜಿ ಭಾವಪೂರ್ಣ ಶ್ರದ್ಧಾಂಜಲಿ

Siddeshwara Swamiji: ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಹರಿದುಬಂದ ಭಕ್ತಸಾಗರ: ಕಿಲೋ ಮೀಟರ್ ಗಟ್ಟಲೇ ಕ್ಯೂ

Share.
Exit mobile version