ಹರಿಯಾಣ : ಲೋಕಸಭಾ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಹರಿಯಾಣದಲ್ಲಿ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದ್ದು, ಈ ಹಿಂದೆ ಬೆಂಬಲ ಸೂಚಿಸಿದ ಮೂವರು ಸ್ವತಂತ್ರ ಅಭ್ಯರ್ಥಿಗಳು ಇದೀಗ ಬೆಂಬಲವನ್ನು ಹಿಂಪಡೆದಿದ್ದಾರೆ ಈ ಮೂಲಕ ಹರಿಯಾಣದಲ್ಲಿ ಬಿಜೆಪಿಗೆ ಸಂಕಷ್ಟ ಎದುರಾಗಿದೆ.

ಮಾಜಿ ಮುಖ್ಯಮಂತ್ರಿಗಳಾದ ಮನೋಹರ್ ಲಾಲ್ ಮತ್ತು ರಂಜಿತ್ ಚೌತಾಲಾ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಇದಾದ ಬಳಿಕ ಬಿಜೆಪಿಯ ಅಂಕಿ-ಅಂಶ 46ಕ್ಕೇರಿತ್ತು. ಮೂವರು ಸ್ವತಂತ್ರ ಶಾಸಕರು ಕೂಡ ಬೆಂಬಲ ಹಿಂಪಡೆದಿದ್ದಾರೆ. ಅವರಲ್ಲಿ ಚರ್ಖಿ ದಾದ್ರಿ ಶಾಸಕ ಸೋಮವೀರ್ ಸಾಂಗ್ವಾನ್, ನಿಲೋಖೇರಿ ಶಾಸಕ ಧರಂಪಾಲ್ ಗೊಂಡರ್ ಮತ್ತು ಪುಂಡ್ರಿ ಶಾಸಕ ರಣಧೀರ್ ಗೋಲನ್ ಸೇರಿದ್ದಾರೆ.

ಸದ್ಯ ಸರ್ಕಾರಕ್ಕೆ 43 ಶಾಸಕರ ಬೆಂಬಲವಿದೆ. ಅಂದರೆ ಸರ್ಕಾರ ಅಲ್ಪಮತದಲ್ಲಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ 30 ಶಾಸಕರನ್ನು ಹೊಂದಿದ್ದರೆ, ಜನನಾಯಕ ಜನತಾ ಪಕ್ಷವು 10 ಶಾಸಕರನ್ನು ಹೊಂದಿದೆ. ಬಿಜೆಪಿ 40 ಶಾಸಕರನ್ನು ಹೊಂದಿದೆ. ಆದರೆ ರಂಜಿತ್ ಚೌತಾಲಾ ರಾಜೀನಾಮೆ ನೀಡಿದ ಕಾರಣ ಸ್ವತಂತ್ರರ ಸಂಖ್ಯೆ 7 ರಿಂದ 6 ಕ್ಕೆ ಇಳಿದಿದೆ.

ಈ ಹಿನ್ನೆಲೆಯಲ್ಲಿ ಹರಿಯಾಣದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಮೂವರು ಸ್ವತಂತ್ರ ಶಾಸಕರು ಬಿಜೆಪಿ ಬೆಂಬಲವನ್ನು ಹಿಂಪಡೆದಿದ್ದಾರೆ.ಹಾಗಾಗಿ ಅವರು ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಹೊರಗಿನಿಂದ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ನಲ್ಲೇ ಇರುವುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

Share.
Exit mobile version