ಬೆಂಗಳೂರು: ನಾಗರಹೊಳೆ ಅರಣ್ಯದಲ್ಲಿ ಕ್ರೂರ ಪ್ರಾಣಿಗಳ ದಾಳಿಗೆ ಒಳಗಾಗಿ ಮರಿ ಆನೆಯೊಂದು ಗಾಯಗೊಂಡು, ನರಳುತ್ತಿದ್ದನ್ನು ಗಮನಿಸಿದ್ದಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಬೊಮ್ಮಾಯಿಗೆ ಪತ್ರ ಬರೆದು, ಅಗತ್ಯ ಚಿಕಿತ್ಸೆಗಾಗಿ ಕೋರಿದ್ದರು. ಈ ಪತ್ರಕ್ಕೆ ಸ್ಪಂದಿಸಿರುವಂತ ಸಿಎಂ ಬಸವರಾಜ ಬೊಮ್ಮಾಯಿಯವರು, ಅಗತ್ಯ ಚಿಕಿತ್ಸೆಗಾಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸೀಮಿತ ಬಳಕೆದಾರರಿಗೆ ಜಿಯೋ 5G Welcome ಆಫರ್ ಘೋಷಣೆ ; ಸೇವೆ ಪಡೆಯುವುದು ಹೇಗೆ ಗೊತ್ತಾ??

ಈ ಕುರಿತಂತೆ ರಾಹುಲ್ ಗಾಂಧಿಯವರಿಗೆ ಮರು ಪತ್ರ ಬರೆದಿರುವಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ನಿಮ್ಮ ಕಳಕಳಿಯ ಕಾಳಜಿಗೆ ಧನ್ಯವಾದಗಳು. ಆನೆ ಮರಿ ಕ್ರೂರ ಪ್ರಾಣಿಗಳಿಂದ ಗಾಯಗೊಂಡಿದೆ. ಈಗ ಸದ್ಯಕ್ಕೆ ಆನೆ ಮರಿ ತಾಯಿಯ ಆರೈಕೆಯಲ್ಲಿದೆ. ಈ ಹಂತದಲ್ಲಿ ತಾಯಿಯಿಂದ ಬೇರ್ಪಡಿಸಿ ಗಾಯಗೊಂಡಿರುವಂತ ಮರಿಗೆ ಚಿಕಿತ್ಸೆ ಕೊಡುವುದು ಕಷ್ಟ ಎಂಬುದಾಗಿ ಹೇಳಿದ್ದಾರೆ.

ಅ.8ರಂದು ಜನತಾ ಮಿತ್ರ ಸಮಾರೋಪ ಸಮಾವೇಶ: ಪೂರ್ವ ಸಿದ್ಧತಾ ಸಭೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ

ತಾಯಿಯ ಆರೈಕೆಯಲ್ಲಿರುವಂತ ಗಾಯಗೊಂಡಿರುವಂತ ಆನೆ ಮರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತಾಯಿಯ ಜೊತೆಗೆ ಮರಿ ಆನೆಯನ್ನು ತೀರ್ವ ನಿಗಾವಹಿಸಿ ಚಿಕಿತ್ಸೆ ನೀಡುವಂತೆ ಸೂಚಿಸಿರೋದಾಗಿ ಹೇಳಿದ್ದಾರೆ.

‘ST ಸಮುದಾಯ’ದವರಿಗೆ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿ – ಸಿದ್ಧರಾಮಯ್ಯ ಆಗ್ರಹ

Share.
Exit mobile version