ಬೆಂಗಳೂರು: 2024ನೇ ಮೇ ತಿಂಗಳಲ್ಲಿ ನಡೆದ ತಾಂತ್ರಿಕ ಪರೀಕ್ಷಾ ಮಂಡಳಿಯ ಸಿ-20 ಪಠ್ಯಕ್ರಮದ 6ನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶವನ್ನು ಈಗಾಗಲೇ ಮೇ 28ರಂದು ಪ್ರಕಟಿಸಲಾಗಿದ್ದು, ಇನ್ನುಳಿದ ಎಲ್ಲಾ ಡಿಪ್ಲೋಮಾ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ಜೂನ್ 18ರಂದು ರಾಜ್ಯದ ಎಲ್ಲಾ ಪಾಲಿಟೆಕ್ನಿಕ್‍ಗಳಲ್ಲಿ ಅಪರಾಹ್ನ 2.00 ಗಂಟೆಗೆ ಪ್ರಕಟಿಸಲಾಗುವುದು ಹಾಗೂ ಪರೀಕ್ಷಾ ಫಲಿತಾಂಶವು www.bteresults.in ವೆಬ್‍ಸೈಟ್‍ನಲ್ಲಿ ಲಭ್ಯವಿದೆ ಎಂದು ತಾಂತ್ರಿಕ ಪರೀಕ್ಷಾ ಮಂಡಳಿಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share.
Exit mobile version