ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮನೆಯ ಅಡುಗೆ ಮನೆ ಮೇಲೆ ನಮ್ಮ ಆರೋಗ್ಯ ಇರುತ್ತದೆ. ಕಿಚನ್ ಎಷ್ಟು ಶ್ವಚ್ಛವಾಗಿರುತ್ತದೆಯೋ ನಮ್ಮ ಆರೋಗ್ಯ ಕೂಡ ಅಷ್ಟೇ ಸ್ವಚ್ಛವಾಗಿರುತ್ತದೆ. ಇನ್ನು ಹೊರಗಡೆ ದುಡಿಯಲು ಹೋಗುವ ಹೆಂಗಸರು ತುಂಬಾ ಸಮಯ ಕಿಚನ್‌ನಲ್ಲಿ ಕಳೆಯೋಕೆ ಆಗೋದಿಲ್ಲ. ಇಂತವರಿಗೆ ಕಿಚನ್ ಅನ್ನು ಬೇಗ ಕ್ಲೀನ್ ಆಗಬೇಕೆಂದರೆ ಕೆಲ ಟಿಪ್ಸ್ ಇವೆ ನೋಡಿ,
ಒಲೆಯ ಮೇಲಿಟ್ಟ ಹಾಲು ಉಕ್ಕಿದರೆ ಕೂಡಲೇ ಶ್ವಚ್ಛಗೊಳಿಸಿಬಿಡಿ. ಅದನ್ನು ಹಾಗೆ ಬಿಟ್ಟರೆ ಸ್ಟವ್ ಹಾಗು ನೆಲಕ್ಕೆ ಹಾಲಿನ ಜಿಡ್ಡು ಅಂಟಿಕೊಂಡುಬಿಡುತ್ತದೆ. ಈ ಜಿಡ್ಡನ್ನು ತೆಗೆಯಲು ಆಮೇಲೆ ಹರ ಸಾಹಸ ಪಡಬೇಕಾದೀತು. ಹಾಗಾಗಿ ಬೇಸರ ಮಾಡಿಕೊಳ್ಳದೇ ಕೂಡಲೇ ಉಕ್ಕಿದ ಹಾಲನ್ನು ಒರೆಸಿಬಿಡಿ.
ತಂದ ತರಕಾರಿಗಳನ್ನು ಸ್ವಚ್ಛವಾಗಿ ತೊಳಿದೇ ಫ್ರಿಡ್ಜ್‌ನಲ್ಲಿಡಿ. ಬೆಳಗ್ಗೆ ಆಫೀಸ್‌ಗೆ ಹೋಗುವಾಗ ಗಡಿಬಿಡಿಯಲ್ಲಿ ಅಡುಗೆ ಮಾಡುವಾಗ ಸಮಯದ ಉಳಿತಾಯವಾಗುತ್ತದೆ. ಅಂದಹಾಗೆ ಫ್ರಿಡ್ಜ್‌ನಲ್ಲಿಟ್ಟ ಹಣ್ಣು ತರಕಾರಿಯನ್ನು ಅದರಿಂದ ಹೊರತೆಗೆದು 20ನಿಮಿಷದ ನಂತರ ಉಪಯೋಗಿಸಬೇಕು.
ಹಸಿ ಕಸದ ಡಬ್ಬವನ್ನು ಅಡುಗೆ ಮನೆಯಲ್ಲಿಯೇ ಇರಿಸಿಕೊಳ್ಳಿ. ಹಸಿ ಕಸ ಎಸೆಯಲು ಪದೇ ಪದೇ ಓಡಾಡುವ ಸಂಭವ ಕಡಿಮೆಯಾಗುತ್ತದೆ. ಎಲ್ಲ ಕೆಲಸ ಮುಗಿದ ಮೇಲೆ ಕಸದ ಬುಟ್ಟಿಯನ್ನು ಆಚೆ ಇಡಲು ಸಹ ಮರೆಯಬೇಡಿ.
ಹೊರಗಡೆಯಿಂದ ತಂದ ಮಾಂಸವನ್ನು ಸುಮಾರು 30ನಿಮಿಷಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು ನಂತರ ಕತ್ತರಿಸಿ, ಆಗ ಮಾಂಸ ಬೇಗನೆ ಮತ್ತು ಸುಲಭವಾಗಿ ಕಟ್ ಆಗುತ್ತದೆ. ಹಿಟ್ಟು ಕಲಿಸಲು ಬೆಂಚ್ ಸ್ಕ್ರಾಪರ್ ಬಳಸಿ, ಇದರಿಂದ ಶ್ರಮ ಮತ್ತು ಸಮಯ ಎರಡೂ ಉಳಿತಾಯವಾಗುತ್ತದೆ.
ಅಡುಗೆ ಮಾಡುವಾಗ ಅಥವಾ ಕಿಚನ್‌ನಲ್ಲಿ ಇನ್ನಾವುದೇ ಕೆಲಸ ಮಾಡುವಾಗ ವೆಪ್ರಾನ್ ಬಳಸಿ. ಈ ಕುಕ್ಕಿಂಗ್ ಡ್ರೆಸ್ ಹಾಕಿಕೊಂಡೆ ತೊಟ್ಟ ಬಟ್ಟೆ ಕರೆಯಾಗೋದಿಲ್ಲ. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ವೆಪ್ರಾನ್ ಬಳಕೆ ತುಂಬಾ ಸಹಾಯವಾಗುತ್ತದೆ. ಇದನ್ನು ಆಗಾಗ ತೊಳೆಯೋದನ್ನು ಮರೆಯಬೇಡಿ.
ಚಪಾತಿ ಲಟ್ಟಿಸುವಾಗ ಹಿಟೆಲ್ಲಾ ಕಟ್ಟೆಯ ಮೇಲೆ ಹರಡದಂತೆ ಚಪಾತಿ ಮಣೆ ಕೆಳಗೆ ಒಂದು ತೆಳುವಾದ ಕಾಟನ್ ಬಟ್ಟೆ ಹಾಸಿಕೊಳ್ಳಿ. ಆಗ ಹಿಟ್ಟು ಅಡುಗೆಮನೆಯಲ್ಲಾ ಹರಡೋದು ಕಡಿಮೆಯಾಗುತ್ತದೆ. ಕೆಳಗ ಹಾಸಿದ ಬಟ್ಟಯನ್ನು ಆಗಾಗ ತೊಳೆದರೆ ಸಾಕು.
ಶುಂಠಿಯನ್ನು ತಂದ ಕೂಡಲೇ ಅದನ್ನು ಚೆನ್ನಾಗಿ ತೊಳೆದು ಸಿಪ್ಪೆ ಸುಲಿದು ಇಟ್ಟುಕೊಳ್ಳಿ. ನಿಮಗೆ ಬೇಕೆನಿಸಿದರೆ ಶುಂಠಿಯ ಪೇಸ್ಟ್ ಕೂಡ ಮಾಡಿಟ್ಟುಕೊಂಡರೆ ಮುಂದೆ ಅಡುಗೆ ಮಾಡುವಾಗ ಸಮಯ ಉಳಿಯುತ್ತದೆ. ಹಾಗೆಯೇ ಮಾರುಕಟ್ಟೆಯಿಂದ ಸುಳಿದ ಬೆಳ್ಳುಳ್ಳಿ ತಂದರೂ ಸಹ ನಿಮಗೆ ಶ್ರಮದ ಹೊರೆ ಕಡಿಮೆಯಾಗುತ್ತದೆ. ಆದಷ್ಟು ರೆಡಿಮೇಡ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅವೈಡ್ ಮಾಡಿ. ವಾರಕ್ಕೆ ಒಂದು ಸಲ ನೀವೇ ಮನೆಯಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟುಕೊಂಡರೆ ಒಳ್ಳೆಯದು.