ಬೆಂಗಳೂರು : ಕರ್ನಾಟಕವು ಸದ್ಯದಲ್ಲೇ ಶುದ್ಧ ಇಂಧನ ನೀತಿಯನ್ನು ಜಾರಿಗೆ ತರಲಿದೆ. ಈ ನೀತಿಯು ಈಗಾಗಲೇ ಸಿದ್ಧವಾಗಿದ್ದು, ಮುಖ್ಯವಾಗಿ ಮಾಲಿನ್ಯ ಉಂಟುಮಾಡದಂತಹ ಸುಗಮ ಸಂಚಾರ ವ್ಯವಸ್ಥೆಗೆ ಉತ್ತೇಜನ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಪರಿಸರಸ್ನೇಹಿ ಮತ್ತು ಸುಸ್ಥಿರ ಸಂಚಾರ ವ್ಯವಸ್ಥೆಯ ಮಾದರಿಗಳನ್ನು ಉತ್ತೇಜಿಸುವ ಆಶಯದೊಂದಿಗೆ ಉಬರ್ ಕಂಪನಿಯು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ `ಸಸ್ಟೆನೋವೇಟ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಗುರುಗ್ರಾಮದ `ಅಹೋಡ್ಸ್’ (ಅಡ್ವಾನ್ಸ್ಡ್ ಹೈಡ್ರೋಜನ್ ಆನ್ ಡಿಮ್ಯಾಂಡ್ ಸಪ್ಲೈ) ಕಂಪನಿಗೆ ಒಂದು ಕೋಟಿ ರೂ. ನಗದು ಬಹುಮಾನವನ್ನು ಪ್ರದಾನ ಮಾಡಿ ಮಾತನಾಡಿದರು.
ಕರ್ನಾಟಕವು ಸದ್ಯದಲ್ಲೇ ಶುದ್ಧ ಇಂಧನ ನೀತಿಯನ್ನು ಜಾರಿಗೆ ತರಲಿದೆ. ಈ ನೀತಿಯು ಈಗಾಗಲೇ ಸಿದ್ಧವಾಗಿದ್ದು, ಮುಖ್ಯವಾಗಿ ಮಾಲಿನ್ಯ ಉಂಟುಮಾಡದಂತಹ ಸುಗಮ ಸಂಚಾರ ವ್ಯವಸ್ಥೆಗೆ ಉತ್ತೇಜನ ನೀಡಲಿದೆ. ಸುಸ್ಥಿರತೆ ಎನ್ನುವುದು ಈಗ ಜೀವನ ವಿಧಾನವೇ ಆಗಿದೆ. ಸುಸ್ಥಿರ ಸಂಚಾರ ವಲಯಕ್ಕೆ ರಾಜ್ಯ ಸರಕಾರವು ಸಂಪೂರ್ಣ ಉತ್ತೇಜನ ಮತ್ತು ಸೌಲಭ್ಯಗಳನ್ನು ನೀಡಲಿದೆ. ಇದನ್ನು ಈ ವಲಯದ ನವೋದ್ಯಮಗಳು ಸದ್ಬಳಕೆ ಮಾಡಿಕೊಳ್ಳಬೇಕೆಂಬ ಕರೆಗೆ `ಅಹೋಡ್ಸ್’ ಕಂಪನಿಯು ರಾಜ್ಯದಲ್ಲಿ ತನ್ನ ರೆಟ್ರೋಫಿಟ್ ಕಿಟ್ ಉತ್ಪಾದನಾ ಘಟಕ ಆರಂಭಿಸುವ ಆಸಕ್ತಿಯನ್ನು ವ್ಯಕ್ತಪಡಿಸಿತು ಎಂದು ತಿಳಿಸಿದ್ದಾರೆ.
140 ಹೆಚ್ಚು ನವೋದ್ಯಮಗಳು ಭಾಗವಹಿಸಿದ್ದ ಈ ಮಹತ್ವದ ಸ್ಪರ್ಧೆಯಲ್ಲಿ ಉಬರ್ ಕಂಪನಿಯ ಹಿರಿಯ ನಿರ್ದೇಶಕರಾದ ಮಣಿಕಂಠನ್ ತಂಗರತ್ನಂ, ಅಹೋಡ್ಸ್ ನವೋದ್ಯಮದ ಉನ್ನತಾಧಿಕಾರಿಗಳಾದ ಸಂಸ್ಥಾಪಕರಾದ ಸೌರಭ್ ಮೋಹನ್ ಸಕ್ಸೇನ, ಪಿ.ಕೆ. ಕುಶ್ವಾಹ, ಮೊದಲಾದವರು ಉಪಸ್ಥಿತರಿದ್ದರು.