ಬೆಂಗಳೂರು: ರಾಜ್ಯಾಧ್ಯಂತ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ( Heavy Rain ), ಜನತೆ ತತ್ತರಿಸಿ ಹೋಗಿದ್ದಾರೆ. ಅಲ್ಲದೇ ಅನೇಕ ಕಡೆಯಲ್ಲಿ ಮಳೆಯಿಂದಾಗಿ ಮನೆ, ಬೆಳೆ ನಾಶಗೊಂಡಿದೆ. ರಾಜ್ಯ ಸರ್ಕಾರದಿಂದ ಸಂಕಷ್ಟಕ್ಕೆ ಸಿಲುಕಿರುವಂತ ಸಂತ್ರಸ್ತರಿಗೆ ಪರಿಹಾರ ನೀಡುವಂತ ಕಾರ್ಯವನ್ನು ಕೂಡ ಮಾಡುತ್ತಿದೆ. ಪರಿಹಾರ ನೀಡುವ ನಿಟ್ಟಿನಲ್ಲಿ ಎ, ಬಿ, ಸಿ ಎಂಬುದಾಗಿ ವರ್ಗೀಕರಿಸಿದ್ದು, ಆ ಮಾದರಿಯಲ್ಲಿಯೇ ಮಳೆಹಾನಿ ಪರಿಹಾರವನ್ನು ವಿತರಿಸಲಾಗುತ್ತಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಮುಂದೆ ಓದಿ..

BREAKING NEWS: ‘ಐಎಸ್ ಲಿಂಕ್’ ಆರೋಪದ ಮೇಲೆ ಜೆಎಂಐ ವಿದ್ಯಾರ್ಥಿ ಮೊಹ್ಸಿನ್ ಅಹ್ಮದ್ ಬಂಧನ: ಆ.16 ರವರೆಗೆ ಎನ್ಐಎ ಕಸ್ಟಡಿಗೆ

ಈ ಕುರಿತಂತೆ ಕಂದಾಯ ಸಚಿವ ಆರ್ ಅಶೋಕ್ ( Minister R Ashok ) ಮಾಹಿತಿ ನೀಡಿದ್ದು, ಮಳೆಹಾನಿಯನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಿಸಲಾಗಿದೆ. ಈ ವರ್ಗೀಕರಣದಂತೆ ಹಾನಿಯನ್ನು ಗುರ್ತಿಸಿ ಪರೀಹಾರ ವಿತರಿಸುವಂತ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.

BREAKING NEWS : ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ : ಸರ್ಕಾರಿ ಬಸ್ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು

ಮಳೆಯಿಂದಾಗಿ ಸಂಪೂರ್ಣ ಮನೆ ಹಾನಿಗೊಂಡಿದ್ದರೇ ಅಂತಹ ಸಂತ್ರಸ್ತರಿಗೆ 5 ಲಕ್ಷ ಪರಿಹಾರ ನೀಡಲಾಗುತ್ತದೆ. ಅರ್ಧ ಮನೆ ಹಾಳಾದ್ರೇ 2.4 ಲಕ್ಷ ಪರಿಹಾರ ವಿತರಿಸಲಾಗುತ್ತದೆ. ಭಾಗಶಃ ಮನೆ ಹಾನಿಗೆ 50 ಸಾವಿರ ಪರಿಹಾರ ನೀಡಲಾಗುತ್ತಿದೆ ಎಂದರು.

BIG NEWS: ಕಿರುತೆರೆ ನಟ ಸುನಾಮಿ ಕಿಟ್ಟಿ ಪಬ್ ನಲ್ಲಿ ಕುಡಿದು ಗಲಾಟೆ: ಎಫ್ಐಆರ್ ದಾಖಲು

ಇನ್ನೂ ಪ್ರತಿ ಹೆಕ್ಟೇರ್ ಬೆಳೆ ನಾಶಕ್ಕೆ 13,600 ರೂ ನೀಡಲಾಗುತ್ತಿದೆ. ನೀರಾವರಿ ಬೆಳೆಹಾನಿಗೆ 25 ಸಾವಿರ ನೀಡಲಾಗುತ್ತಿದೆ. ಬಹುವಾರ್ಷಿಕ ಬೆಳೆಹಾನಿಗೆ 28 ಸಾವಿರ, ಪ್ರವಾಹ ಸಂತ್ರಸ್ತರಿಗೆ 10 ಸಾವಿರ ತುರ್ತು ಪರಿಹಾರ ನೀಡಲಾಗುತ್ತಿದೆ ಎಂಬುದಾಗಿ ಮಾಹಿತಿ ನೀಡಿದ್ದಾರೆ.

Share.
Exit mobile version