ರಾಯಚೂರು: ಈವರೆಗೆ ವಯಸ್ಕರು, ವಯೋವೃದ್ಧರಲ್ಲಿ ಕಾಣಿಸಿಕೊಳ್ಳುತ್ತಿದ್ದಂತ ರಕ್ತದೊತ್ತಡ, ಈಗ ಮಕ್ಕಳಲ್ಲೂ ಆರಂಭಗೊಂಡಿದೆ. ಶಾಕಿಂಗ್ ಎನ್ನುವಂತೆ 8ನೇ ತರಗತಿ ಬಾಲಕನೊಬ್ಬ ಲೋ ಬಿಪಿಯಾಗಿ ಶಾಲೆಯಲ್ಲೇ ಕುಸಿದು ಬಿದ್ದು, ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುತ್ತಿರುವ ವೇಳೆ ಸಾವನ್ನಪ್ಪಿರುವಂತ ಘಟನೆ ರಾಯಚೂರಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಸಿರಿವಾರ ಪಟ್ಟಣದಲ್ಲಿನ ಖಾಸಗಿ ಶಾಲೆಯೊಂದರಲ್ಲಿ 8ನೇ ತರಗತಿಯನ್ನು ಬಾಲಕ ತರುಣ್ ಅತ್ತನೂರು(14) ಓದುತ್ತಿದ್ದನು. ಎಂದಿನಂತೆ ಶಾಲೆಗೆ ತೆರಳಿದ್ದಂತ ತರುಣ್ ಗೆ ಲೋ ಬಿಪಿಯಾಗಿ, ಏಕಾಏಕಿ ಶಾಲೆಯಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಶಿಕ್ಷಕರು ಆತನನ್ನು ಸಿರಿವಾರ ಪಟ್ಟಣದ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ.
ಪ್ರಾಥಮಿಕ ಚಿಕಿತ್ಸೆಯ ಬಳಿಕ, ತೀವ್ರ ಅಸ್ವಸ್ಥಗೊಂಡಿದ್ದಂತ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿಗೆ ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಮಾರ್ಗಮಧ್ಯದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಸಿರಿವಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೇಂದ್ರ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ : ಈ ದಾಖಲೆಗಳಿದ್ರೆ ಕೂಡಲೇ ಅರ್ಜಿ ಸಲ್ಲಿಸಿ!