ಚಾಮರಾಜನಗರ: ಜಿಲ್ಲೆಯಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾದಂತ 3ನೇ ತರಗತಿ ವಿದ್ಯಾರ್ಥಿನಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವಂತ ಶಾಕಿಂಗ್ ಘಟನೆ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಬನದಗುಪ್ಪೆ ಗ್ರಾಮದ ಲಿಂಗರಾಜು ಮತ್ತು ಶ್ರುತಿ ದಂಪತಿಯ ಪುತ್ರಿ ತೇಜಸ್ವಿನಿ ಎಂಬುವರೇ ತೀವ್ರ ಹೃದಯಾಘಾತದಿಂದ ನಿಧನರಾದಂತ ಬಾಲಕಿಯಾಗಿದ್ದಾರೆ.
ಇಂದು ಶಾಲೆಗೆ ತೆರಳಿದ್ದಂತ ತೇಜಸ್ವಿನಿ, ಶಿಕ್ಷಕರಿಗೆ ನೋಟ್ಸ್ ತೋರಿಸುತ್ತಿದ್ದಾಗಲೇ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಕುಸಿದು ಬಿದ್ದಂತ 3ನೇ ತರಗತಿ ವಿದ್ಯಾರ್ಥಿನಿ, ಬಟ್ಟೆಯಲ್ಲೇ ಮೂತ್ರ ವಿಸರ್ಜನೆ ಕೂಡ ಮಾಡಿಕೊಂಡಿದ್ದರು.
ಶಾಲೆಯಲ್ಲೇ ಹೃದಯಾಘಾತಕ್ಕೆ ಒಳಗಾದಂತ ಆಕೆಯನ್ನು ಶಿಕ್ಷಕರು, ಶಾಲಾ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. ಆದರೇ ಮಾರ್ಗ ಮಧ್ಯೆದಲ್ಲಿ ಸಾವನ್ನಪ್ಪಿದ್ದಾರೆ. ವೈದ್ಯರು ಇದನ್ನು ದೃಢ ಪಡಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
BIG UPDATE : ಕರ್ನಾಟಕದಲ್ಲಿ 2 ‘HMPV’ ಸೋಂಕು ಧೃಡ : ‘ICMR’ ಸ್ಪಷ್ಟನೆ | HMPV VIRUS