ಹಾಸನ: ಜಿಲ್ಲೆಯ ಬಳಿಯಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಭೀಕರ ಅಪಘಾತವಾಗಿದೆ. ಈ ಅಪಘಾತದಲ್ಲಿ ಸಿಐಡಿ ವಿಭಾಗದ ಡಿವೈಎಸ್ಪಿ ಮೊಹಮ್ಮದ್ ರಫಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ.
ಹಾಸನ ನಗರದಿಂದ ಅರಕಲಗೂಡಿಗೆ ಖಾಸಗಿ ಕೆಲಸ ನಿಮಿತ್ತ ಸಿಐಡಿ ಡಿವೈಎಸ್ಪಿ ಮೊಹಮ್ಮದ್ ರಫಿ ಅವರು ಎರಿಟಿಗಾ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆಯಲ್ಲಿ ಹಾಸನದ ಕಡೆಯಿಂದ ಬರುತ್ತಿದ್ದಂತ ಇನ್ನೋವಾ ಕಾರು ಡಿಕ್ಕಿಯಾಗಿ ಭೀಕರ ಅಪಘಾತ ಉಂಟಾಗಿದೆ.
ಇನ್ನೋವಾ ಕಾರು ಹಾಗೂ ಎರಿಟಿಗಾ ಕಾರಿನ ನಡುವೆ ನಡೆದಂತ ಅಪಘಾತದಲ್ಲಿ ಸಿಐಡಿ ಡಿವೈಎಸ್ಪಿ ಮೊಹಮ್ಮದ್ ರಫಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದೀಗ ಅವರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
BREAKING : ಜಪಾನ್‌ನ ಆಡಳಿತ ಪಕ್ಷದ ಪ್ರಧಾನ ಕಛೇರಿಯ ಮೇಲೆ ಬಾಂಬ್ ದಾಳಿ : ಸ್ಥಳದಲ್ಲೇ ಶಂಕಿತ ಅರೆಸ್ಟ್!
BREAKING : ‘ಮುಡಾ’ ಹಗರಣದಲ್ಲಿ ಸಿಎಂಗೆ ಮತ್ತೆ ಸಂಕಷ್ಟ : ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ‘ಭೂ’ ಅಕ್ರಮ ಆರೋಪ!