ಬೆಂಗಳೂರು: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳಿಂದ ಡಿವೈಎಸ್ಪಿ ಕನಕಲಕ್ಷ್ಮೀಯನ್ನು ಬಂಧಿಸಲಾಗಿದೆ.
ಸಿಐಡಿ ವಿಭಾಗದ ಡಿವೈಎಸ್ಪಿಯಾಗಿದ್ದಂತ ಕನಕಲಕ್ಷಅಮೀ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ವಕೀಲೆ ಜೀವಾ ಆತ್ಮಹಬತ್ಯೆ ಪ್ರಕರಣದಲ್ಲಿ ಡಿವೈಎಸ್ಪಿ ಕನಕಲಕ್ಷ್ಮೀ ಅವರ ಪಾತ್ರ ಇರುವ ಬಗ್ಗೆ ತನಿಖೆಯಲ್ಲಿ ಮಾಹಿತಿ ತಿಳಿದು ಬಂದ ಹಿನ್ನಲೆಯಲ್ಲಿ ಈ ಬಂಧನವನ್ನು ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಸಂಬಂಧ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.
ಭೋವಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ಪ್ರಕರಣದಲ್ಲಿ ಸಿಐಡಿ ತನಿಖೆ ಎದುರಿಸಿದ್ದ ವಕೀಲೆ ಎಸ್.ಜೀವಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಲಾಗಿದೆ. ಬೆಂಗಳೂರು ಸಿಬಿಐನ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ವರ್ಮಾ, ರಾಜ್ಯ ಗೃಹ ರಕ್ಷಕ ದಳದ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಅಕ್ಷಯ್ ಮಚೀಂದ್ರ ಹಾಕೆ, ಆಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರನ್ನು ಒಳಗೊಂಡ ತಂಡವನ್ನು ಹೈಕೋರ್ಟ್ ರಚಿಸಿತ್ತು. ಈ ವಿಶೇಷ ತನಿಖಾ ತಂಡದಿಂದ ಈಗ ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀಯನ್ನು ಬಂಧಿಸಲಾಗಿದೆ.
BREAKING NEWS: ಅಭಿಮಾನಿಯ ಕಪಾಳಕ್ಕೆ ಬಾರಿಸಿದ ‘ನಟಿ ರಾಗಿಣಿ ದ್ವಿವೇದಿ’ | Actress Ragini Dwivedi slapped
ಸಾರ್ವಜನಿಕರೇ ಗಮನಿಸಿ : ವರ್ಷಕ್ಕೊಮ್ಮೆಯಾದರೂ ಈ 10 `ರಕ್ತ ಪರೀಕ್ಷೆ’ ಮಾಡಿಸಲೇಬೇಕು.!