Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಕ್ಷಯ ತೃತೀಯಾ : ಇಂದು ದೇಶಾದ್ಯಂತ ₹20,000 ಕೋಟಿ ಚಿನ್ನಾಭರಣ ಮಾರಾಟದ ನಿರೀಕ್ಷೆ!

20/04/2026 6:22 AM

ಚಿನ್ನದ ಸಾಲ ಪಡೆದವರಿಗೆ ಭಾರೀ ಆಘಾತಕಾರಿ ಸುದ್ದಿ! ಏನು ಅಂತ ಗೊತ್ತಾದ್ರೆನೇ ಟೆನ್ಷನ್‌ ಆಗ್ತೀರಾ!

20/04/2026 6:20 AM

​’100 ಹಡಗುಗಳು, ಒಂದೇ ಗುರಿ’: ಹೋರ್ಮುಜ್ ಬಿಕ್ಕಟ್ಟಿನ ನಡುವೆ ವಿಳಿಂಜಂ ಬಂದರಿಗೆ ಶಶಿ ತರೂರ್ ಜೈಕಾರ!

20/04/2026 6:18 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ‘ಕಾಲರಾ’ ಸೋಂಕು ಹೆಚ್ಚಳ : ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
KARNATAKA

ರಾಜ್ಯದಲ್ಲಿ ‘ಕಾಲರಾ’ ಸೋಂಕು ಹೆಚ್ಚಳ : ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

By kannadanewsnow5702/05/2024 4:51 AM

ಬೆಂಗಳೂರು : ರಾಜ್ಯದಲ್ಲಿ ಬಿಸಿಲಿನ ಬೇಗೆಗೆ ಹೆಚ್ಚಾಗಿದ್ದು, ಅತಿಸಾರ ಬೇದಿ/ ಕಾಲರಾ ಸೋಂಕು ಪ್ರಕರಣಗಳ Outbreak ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳು ಕುರಿತು ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

ಬೇಸಿಗೆ ಕಾಲದಲ್ಲಿ ಅತಿಸಾರ ಬೇದಿ / ಕಾಲರ ಸೋಂಕುಗಳ ಪ್ರಕರಣಗಳು ಸಾಮಾನ್ಯವಾಗಿದ್ದು ಯಾವುದೇ Outbreakಗಳು ಸಂಭವಿಸದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದು ಆದ್ಯ ಕರ್ತವ್ಯವಾಗಿರುತ್ತದೆ. ಆದರೂ ಸಹ Outbreak ಸಂಭವಿಸಿದಲ್ಲಿ ಅದನ್ನು ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳು ಸಮರ್ಪಕವಾಗಿ ನಿಭಾಯಿಸಲು ಸಿದ್ಧರಾಗಿರುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಇಂತಹ ಪ್ರಕರಣಗಳ ಹರಡುವಿಕೆಯನ್ನು ತಗ್ಗಿಸಲು ಮತ್ತು ಔಟ್ ಬ್ರೇಕ್ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು ಈ ಕೆಳಕಂಡಂತಿದೆ:

1. 24/7 ತಾತ್ಕಾಲಿಕ ಚಿಕಿತ್ಸಾಲಯಗಳ ಸ್ಥಾಪನೆ ಸಕ್ರಿಯ ಪ್ರಕರಣಗಳ ನಿರ್ವಹಣೆ ಮತ್ತು ತುರ್ತು ಔಷಧಿಗಳ ದಾಸ್ತಾನು:
ರೋಗ ನಿಯಂತ್ರಣಕ್ಕಾಗಿ 24/7 ತಾತ್ಕಾಲಿಕ ಚಿಕಿತ್ಸಾಲಯಗಳ ಸ್ಥಾಪನೆ, ತುರ್ತು ಔಷಧಿಗಳ (IV fluids, ORS, antibiotics etc) ದಾಸ್ತಾನುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು. ನಿರ್ಜಲೀಕರಣದ ಮಟ್ಟವನ್ನು ಆಧರಿಸಿ ಚಿಕಿತ್ಸೆಯನ್ನು ರೋಗಿಗಳಿಗೆ ವಿಳಂಬವಿಲ್ಲದಂತೆ ತಕ್ಷಣವೇ ಆರೋಗ್ಯ ಕೇಂದ್ರಗಳಲ್ಲಿ ನೀಡುವ ವ್ಯವಸ್ಥೆ ಮಾಡುವುದು.

2. Outbreak ಸಂದರ್ಭಗಳಲ್ಲಿ ಕುಡಿಯುವ ನೀರಿನ ಮಾದರಿಗಳ ತಪಾಸಣೆ:

ಎಲ್ಲಾ ಜಿಲ್ಲಾ ಸರ್ವೇಕ್ಷಣ ಘಟಕವು ಔಟ್ ಬ್ರೇಕ್ ಸಂದರ್ಭಗಳಲ್ಲಿ ಕುಡಿಯುವ ನೀರಿನ ಮೂಲಗಳಲ್ಲಿ Coliformಗಳ ಪತ್ತೆಹಚ್ಚುವಿಕೆಗಾಗಿ H2S ವಿಧಾನ ಮತ್ತು ಎಂ. ಪಿ .ಎನ್ Most Probable number (PN) ಪರೀಕ್ಷೆಗಳನ್ನು ನಡೆಸುವುದು. ಹಾಗೂ ಪ್ಯಾಥೋಜನ್ ಗಳ ಪತ್ತೆ ಹಚ್ಚುವಿಕೆಗಾಗಿ 10-15% ಶಂಕಿತ ಪ್ರಕರಣಗಳಿಂದ Stool culture and sensitivity ಪರೀಕ್ಷೆಯನ್ನು ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ / ಜಿಲ್ಲಾ ಸರ್ವೇಕ್ಷಣ ಪ್ರಯೋಗಾಲಯಗಳಲ್ಲಿ ಮಾಡುವುದು.

3. ಕಣಾವಲು ಮತ್ತು ವರದಿ : ಎಲ್ಲಾ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳು ಯಾವುದೇ ಮಲದ ಮಾದರಿಯಲ್ಲಿ ಹ್ಯಾಂಗಿಂಗ್ ಡ್ರಾಪ್ ಪಾಸಿಟಿವ್ ಎಂದು ವರದಿಯಾದ ಕೂಡಲೇ ಸರ್ವೇಕ್ಷಣ ಚಟುವಟಿಕೆಗಳನ್ನು ಪ್ರಾರಂಭಿಸುವುದು ಮತ್ತು IHIPಪೋರ್ಟಲ್ ನಲ್ಲಿ ವರದಿಯಾಗುವಂತೆ ಕ್ರಮವಹಿಸುವುದು. ಮುಂದುವರೆದು ಸದರಿ ಪ್ರಕರಣದ ಆರೋಗ್ಯ ಸ್ಥಿತಿ ಸ್ಥಿರಗೊಳ್ಳುವವರೆಗೂ ಅನುಸರಿಸಿ ಮಾಹಿತಿಯನ್ನು ರಾಜ್ಯಮಟ್ಟಕ್ಕೆ ವರದಿ ಸಲ್ಲಿಸುವುದು.

4. ಕ್ಲಸ್ಟರ್/ Outbreak : ಅತಿಸಾರ/ಕಾಲರಾ ಕಾಯಿಲೆಯ ಕ್ಲಸ್ಟರ್/Outbreak ವರದಿಯಾದಲ್ಲಿ ತಕ್ಷಣವೇ ಭಾರತ ಸರ್ಕಾರದ IHIPಪೋರ್ಟಲ್ ನಲ್ಲಿ “ಇವೆಂಟ್ ಅಲರ್ಟ್” ಜನರೇಟ್ ಮಾಡಿ ಔಟ್ ಬ್ರೇಕ್ ನಿರ್ವಹಣೆಯ ಶಿಷ್ಟಾಚಾರದ ಅನುಸಾರ ಕ್ರಮ ವಹಿಸುವುದು. -ಮನೆ-ಮನೆಗೆ ಭೇಟಿ ನೀಡಿ ಸಕ್ರಿಯ ಸರ್ವೇಕ್ಷಣೆಯನ್ನು ಬಲಪಡಿಸುವುದು.

5. ಸಾಮರ್ಥ್ಯ ವೃದ್ಧಿ: ಕೇಸ್ ಮ್ಯಾನೇಜ್‌ಮೆಂಟ್, ಸೋಂಕು ನಿಯಂತ್ರಣ ಕ್ರಮಗಳ ಕುರಿತು ಕ್ಷೇತ್ರ ಮಟ್ಟದ ಆರೋಗ್ಯ ಕಾರ್ಯಕರ್ತರಿಗೆ Hands on ತರಬೇತಿ ನೀಡುವುದು.

6. ಅಂತರ ಇಲಾಖೆ ಸಮನ್ವಯ ಮತ್ತು ಸಹಯೋಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪುರಸಭೆ, ನಗರ ಸಭೆ ಮತ್ತು ಇತರ ಸಂಬಂಧಿತ ಸ್ಥಳೀಯ ಇಲಾಖೆಯಗಳೊಂದಿಗೆ ಸಭೆಗಳನ್ನು ನಡೆಸಿ, ಸಾರ್ವಜನಿಕರಿಗೆ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವುದು ಹಾಗೂ ಕುಡಿಯುವ ನೀರಿನ ಮೂಲಗಳನ್ನು ನಿಯಮಿತವಾಗಿ ಪರೀಕ್ಷೆಗೊಳಪಡಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.

ಆಹಾರ ಸುರಕ್ಷತಾ ಅಧಿಕಾರಿಗಳು ಕ್ಯಾಂಟೀನ್ ಗಳು, ಮದುವೆ ಸಮಾರಂಭಗಳು, ಹಾಗೂ ಸಾಮೂಹಿಕ ಅಡುಗೆ ಮಾಡುವ ಸ್ಥಳ, ಇತ್ಯಾದಿಗಳಿಗೆ ನಿಯಮಿತವಾಗಿ ಮೇಲ್ವಿಚಾರಣೆಗೆ ಭೇಟಿ ನೀಡಿ ನೀರು ಮತ್ತು ಆಹಾರ ಮಾದರಿಗಳ ಸಂಗ್ರಹಣೆ ಮತ್ತು ಪರೀಕ್ಷೆಗೊಳಪಡಿಸುವಿಕೆಯಿಂದ ಆಹಾರ ಸುರಕ್ಷತೆ ನಿಯಮಗಳನ್ನು ಜಾರಿಗೊಳಿಸಿ ಆಹಾರ ಮತ್ತು ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟಲು

ಸಹಾಯ ಮಾಡುತ್ತದೆ.

7. ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ಮಾಹಿತಿ ಮತ್ತು ಸಂವಹನ : ಕಾಲರಾ ಅಥವಾ ತೀವುವಾದ ಅತಿಸಾರ ಕಾಯಿಲೆಯ ಚಿಹ್ನೆಗಳು ಮತ್ತು ರೋಗಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸುವುದು. ಓ ಆರ್ ಎಸ್ ತಯಾರಿಸಿ ಬಳಸುವ ವಿಧಾನ, ವೈಯುಕ್ತಿಕ ಸ್ವಚ್ಛತೆ, ಕೈ ತೊಳೆಯುವುದು, ಕಾಯಿಸಿ ಆರಿಸಿದ ನೀರನ್ನು ಕುಡಿಯುವುದು, ಮನೆಯ ಸುತ್ತಮುತ್ತಲು ಶುಚಿತ್ವವನ್ನು ಕಾಪಾಡಿಕೊಳ್ಳುವುದು ಹಾಗೂ ಇತರ ರೋಗ

ನಿಯಂತ್ರಣದ ಕುರಿತು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ಮಾಹಿತಿ ಮತ್ತು ಸಂವಹನ ನೀಡುವುದು. 8. ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ: ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ತಾಲೂಕು/ಜಿಲ್ಲಾ ಮಟ್ಟದ ತ್ವರಿತ ಪುಕ್ರಿಯ ತಂಡದ ವರದಿಯನ್ನು ಮೇಲ್ವಿಚಾರಣೆ ಮಾಡಿ ಮತ್ತು ಪ್ರತಿಕ್ರಿಯೆ ಚಟುವಟಿಕೆಗಳ ಪರಿಣಾಮಕಾರಿತ್ಯದ ಆಧಾರದ

ಮೇಲೆ ಅಗತ್ಯವಿರುವಂತೆ ಸೂಕ್ತ ಕ್ರಮ ಕೈಗೊಳ್ಳುವುದು.

ದೈನಂದಿನ ವರದಿಯನ್ನು ರಾಜ್ಯಮಟ್ಟಕ್ಕೆ ನಿಯಮಿತವಾಗಿ ಸಲ್ಲಿಸುವುದು ಮತ್ತು IHIPಪೋರ್ಟಲ್ ನಲ್ಲಿ ವರದಿಗಳು ನಮೂದಾಗುವಂತೆ ಕ್ರಮ ವಹಿಸುವುದು.

Cholera outbreak in Kerala: Health Department issues guidelines ರಾಜ್ಯದಲ್ಲಿ 'ಕಾಲರಾ' ಸೋಂಕು ಹೆಚ್ಚಳ : ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
Share. Facebook Twitter LinkedIn WhatsApp Email

Related Posts

BIG NEWS : ಏ.24ಕ್ಕೆ `ಕರ್ನಾಟಕ SSLC ಪರೀಕ್ಷೆ ಫಲಿತಾಂಶ’ ಪ್ರಕಟ ಡೌಟ್.!

20/04/2026 6:14 AM1 Min Read

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ರಾಜ್ಯ ಕೃಷಿ ಇಲಾಖೆಯಲ್ಲಿ 258 ಹುದ್ದೆಗಳಿಗೆ ಅರ್ಜಿ ಆಹ್ವಾನ

20/04/2026 6:11 AM2 Mins Read

BIG NEWS : ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆ `ಬಡ್ತಿ’ : ಸರ್ಕಾರದಿಂದ ಮಹತ್ವದ ಆದೇಶ.!

20/04/2026 6:09 AM2 Mins Read
Recent News

ಅಕ್ಷಯ ತೃತೀಯಾ : ಇಂದು ದೇಶಾದ್ಯಂತ ₹20,000 ಕೋಟಿ ಚಿನ್ನಾಭರಣ ಮಾರಾಟದ ನಿರೀಕ್ಷೆ!

20/04/2026 6:22 AM

ಚಿನ್ನದ ಸಾಲ ಪಡೆದವರಿಗೆ ಭಾರೀ ಆಘಾತಕಾರಿ ಸುದ್ದಿ! ಏನು ಅಂತ ಗೊತ್ತಾದ್ರೆನೇ ಟೆನ್ಷನ್‌ ಆಗ್ತೀರಾ!

20/04/2026 6:20 AM

​’100 ಹಡಗುಗಳು, ಒಂದೇ ಗುರಿ’: ಹೋರ್ಮುಜ್ ಬಿಕ್ಕಟ್ಟಿನ ನಡುವೆ ವಿಳಿಂಜಂ ಬಂದರಿಗೆ ಶಶಿ ತರೂರ್ ಜೈಕಾರ!

20/04/2026 6:18 AM

ಅಮೆರಿಕದಲ್ಲಿ ನಡುಕ ಹುಟ್ಟಿಸಿದ ಹತ್ಯಾಕಾಂಡ: ಎಂಟು ಮಕ್ಕಳ ಬಲಿ ಪಡೆದ ತಂದೆ; ಆರೋಪಿ ಪೊಲೀಸ್ ಗುಂಡಿಗೆ ಬಲಿ

20/04/2026 6:15 AM
State News
KARNATAKA

BIG NEWS : ಏ.24ಕ್ಕೆ `ಕರ್ನಾಟಕ SSLC ಪರೀಕ್ಷೆ ಫಲಿತಾಂಶ’ ಪ್ರಕಟ ಡೌಟ್.!

By kannadanewsnow5720/04/2026 6:14 AM KARNATAKA 1 Min Read

ಬೆಂಗಳೂರು: ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಫಲಿತಾಂಶ ಪ್ರಕಟಣೆಯು ಈಗ ಕಾನೂನು ಸಂಘರ್ಷದ ಸುಳಿಗೆ ಸಿಲುಕಿದೆ. ಈ ಮೊದಲು…

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ರಾಜ್ಯ ಕೃಷಿ ಇಲಾಖೆಯಲ್ಲಿ 258 ಹುದ್ದೆಗಳಿಗೆ ಅರ್ಜಿ ಆಹ್ವಾನ

20/04/2026 6:11 AM

BIG NEWS : ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆ `ಬಡ್ತಿ’ : ಸರ್ಕಾರದಿಂದ ಮಹತ್ವದ ಆದೇಶ.!

20/04/2026 6:09 AM

ರಾಜ್ಯ ಆರೋಗ್ಯ ಇಲಾಖೆ ನೌಕರರಿಗೆ ಗುಡ್ ನ್ಯೂಸ್ : 2026ನೇ ಸಾಲಿನ ವರ್ಗಾವಣೆಗೆ ವೇಳಾಪಟ್ಟಿ ಪ್ರಕಟ

20/04/2026 6:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.