ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಗಾಳಿಯ ಜೊತೆಗೆ ಹೆಚ್ಚಾದ ತಾಪ ಮಾನದ ಪರಿಣಾಮವಾಗಿ ಕಾಲರಾ ರೋಗ ಹೆಚ್ಚಾಗುತ್ತಿದೆ. ರಾಜ್ಯಾಧ್ಯಂತ 6 ಮಂದಿಗೆ ಕಾಲರಾ ರೋಗ ಪತ್ತೆಯಾಗಿದೆ. ಅಲ್ಲದೇ ಓರ್ವ ಬಿಸಿಗಾಳಿಯ ಪರಿಣಾಮದಿಂದ ಬಲಿಯಾಗಿರೋದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
ಈ ಕುರಿತಂತೆ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ರಂದೀಪ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ರಾಜ್ಯದಲ್ಲಿ ಒಟ್ಟು 6 ಮಂದಿಗೆ ಕಾಲರಾ ರೋಗ ದೃಷಪಟ್ಟಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು, ರಾಮನಗರ ಸೇರಿದಂತೆ 6 ಮಂದಿಗೆ ಕಾಲರಾ ರೋಗ ಪತ್ತೆಯಾಗಿದೆ. ಬಿಸಿಲ ತಾಪ ಹೆಚ್ಚಾಗುತ್ತಿರೋದು, ಬಿಸಿಗಾಳಿಯ ಪರಿಣಾಮವೇ ಕಾಲರಾ ಹೆಚ್ಚಳಕ್ಕೆ ಕಾರಣ ಎಂಬುದಾಗಿ ಹೇಳಿದರು.
ಬೆಂಗಳೂರಿನಲ್ಲಿ ಇಬ್ಬರಿಗೆ ಕಾಲರಾ ದೃಢಪಟ್ಟಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೂವರಿಗೆ ಕಾಲರಾ ಸೋಂಕು ತಗುಲಿರೋದು ಪರೀಕ್ಷೆಯಲ್ಲಿ ತಿಳಿದು ಬಂದಿದೆ. ರಾಮನಗರದಲ್ಲಿ ಒಬ್ಬ ವ್ಯಕ್ತಿ ಸೇರಿದಂತೆ 6 ಮಂದಿಗೆ ಕಲರಾ ರಾಜ್ಯಾಧ್ಯಂತ ದೃಢಪಟ್ಟಿರೋದಾಗಿ ಹೇಳಿದರು.
ರಾಜ್ಯದಲ್ಲಿ ಕಾಲರಾ ತಡೆಗಾಗಿ ಆರೋಗ್ಯ ಇಲಾಖೆ ಕ್ರಮವಹಿಸಿದೆ. ಇಂದು ತಡರಾತ್ರಿ ರಾಜ್ಯದಲ್ಲಿ ಕಾಲರಾ ರೋಗ ತಡೆ ಸಂಬಂಧ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ ಎಂದರು.
ಬಿಸಿಗಾಳಿ ಹೆಚ್ಚಾಗುತ್ತಿರೋ ಕಾರಣ, ಓರ್ವ ಇತರೆ ರೋಗಗಳಿಂದ ಬಳಪರೀಕ್ಲುಷೆ ನಡೆಯುತ್ತ್ತಿತಿದೆ ಎಂದರು.ದ್ದಂತ ವ್ಯಕ್ತಿಯೊಬ್ಬರು ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರಲ್ಲಿ ‘ಕಾಲರಾ’ ರೋಗ ಪತ್ತೆ : ಹೋಟೆಲ್, ರೆಸ್ಟೋರೆಂಟ್, ಕೆಫೆ ಮಾಲೀಕರಿಗೆ ‘BBMP’ ಮಹತ್ವದ ಆದೇಶ