ಚಿತ್ರದುರ್ಗ: ಓರ್ವ ಮಹಿಳೆ ಸುಶಿಕ್ಷಿತರಾಗಿದ್ದರೆ ಆಕೆ ಹುಟ್ಟಿದ ಮನೆ ಹಾಗು ಗಂಡನಮನೆಗಳೆರೆಡು ಬೆಳಕಾಗುತ್ತವೆ ಎಂದು ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಅನುಸೂಯಮ್ಮ ತಿಳಿಸಿದರು.ಚಿತ್ರದುರ್ಗದ ಐಯುಡಿಪಿ ಬಡಾವಣೆಯ ಪ್ರಶಾಂತಿ ವಿದ್ಯಾಲಯದ ಆವರಣದಲ್ಲಿ ನಡೆದ ಮಹಿಳಾದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ಮಹಿಳೆಯು ಕೇವಲ ಮನೆಯಲ್ಲಿ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದಳು.ಆದರೆ ಸಂವಿಧಾನದ ಎಲ್ಲರಿಗೂ ಕೊಟ್ಟ ಸದಾವಕಾಶದಿಂದ ಮಹಿಳೆಯು ಇಂದು ಎಲ್ಲಾ ಕ್ಷೇತ್ರದಲ್ಲು ತನ್ನದೇ ಆದ ಛಾಪು ಮೂಡಿಸಿದ್ದಾಳೆ.
ಮಹಿಳೆಗೆ ಸಿಕ್ಕ ಅವಕಾಶದಿಂದ ಶಿಕ್ಷಣ,ಆರೋಗ್ಯ,ರಾಜಕೀಯ ಕ್ಷೇತ್ರದಲ್ಲು ತನ್ನ ಪವರ್ ತೋರಿಸಿದ್ದಾರೆ.ಪುರುಷರಿಗೆ ಸರಿಸಮಾನವಾಗಿ ಬೆಳೆದು ತಾನು ಮನಸು ಮಾಡಿದರೆ ಯಾವುದೇ ಕ್ಷೇತ್ರದಲ್ಲಾದರು ಎದೆಗುಂದದೇ ಸಾಧಿಸಬಲ್ಲ ಛಲವುಳ್ಳವಳು ಎಂಬುದನ್ನು ಸಾಭೀತುಮಾಡಿದ್ದಾಳೆ.ಇದಕ್ಕೆ ಕೈಗನ್ನಡಿ ಎಂಬಂತೆ ಭಾರತ ದೇಶದ ರಾಷ್ಪಪತಿಯಾಗಿರುವ ದ್ರೌಪದಿ ಮುರ್ಮು,ಪ್ರತಿಭಾ ಪಾಟೀಲ್ ಹಾಗುಕೇಂದ್ರಸಚಿವರಾದ ನಿರ್ಮಲಸೀತಾರಾಮನ್,ಶೋಭಾ ಕರಂದ್ಲಾಜೆ ಮತ್ತು ಕ್ರೀಡಾಪಟುಗಳಾದ ಸೈನಾ ನೆಹ್ವಾಲ್,ವೈಶಾಲಿ ಸೇರಿದಂತೆ ಅನೇಕ ಮಹನಿಯರು ನಮಗೆಲ್ಲಾಪ್ರೇರಣೆಯಾಗಿದ್ದಾರೆ.ಇವರಂತೆಯೇ ಪ್ರತಿಯೊಬ್ಬ ಮಹಿಳೆಸಹ ಅವರವರಿಗೆ ಆಸಕ್ತಿಇರುವ ಕ್ಷೇತ್ರಗಳಲ್ಲಿಶ್ರಮವಹಿಸಿ ಪ್ರಯತ್ನಿಸಿದರೆ ಸಾಧನೆಯತ್ತ ಮುನ್ನುಗ್ಗಬಹುದಾಗಿದೆ.ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮಹಿಳೆಯು ಮುನ್ನುಗ್ಗಬೇಕಿದೆ.ನಾವು ನಡೆಯುವ ಹಾದಿಇತರರಿಗೆ ಮಾದರಿಆಗಬೇಕಿದೆ ಎಂದರು.
ಹಾಗೆಯೇ ಈ ಮಹಿಳಾದಿನಾಚರಣೆ ಅಂಗವಾಗಿ ಐಯುಡಿಪಿ ಯೋಗ ಕೇಂದ್ರದ ಅಧ್ಯಕ್ಷರಾದ ರಾಮಣ್ಣ,ಕಾರ್ಯದರ್ಶಿ ಜಯ್ಯಣ್ಣ ಹಾಗು ಪ್ರಾಥಾಮಿಕಶಿಕ್ಷಕರಾದ ಮಹಲಿಂಗಪ್ಪನವರು ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ ಯೋಗ ಕೇಂದ್ರದ ಮಹಿಳಾಮಣಿಗಳನ್ನು ಸನ್ಮಾನಿಸಿದ್ದು ಸಂತಸ ತಂದಿದೆ.ಸರ್ಕಾರಿ ಉದ್ಯೋಗಿಯಾಗಿ ಹಲವೆಡೆ ಗೌರವ ಸ್ವೀಕರಿಸಿದ್ದರು ಸಹ ಇಂದು ಮಹಿಳಾದಿನಾಚರಣೆ ಅಂಗವಾಗಿ ಯೋಗಕೇಂದ್ರದ ಮಹಿಳೆಯರೊಂದಿಗೆ ಗೌರವ ಸ್ವೀಕರಿಸಿದ್ದು ನನ್ನ ಜೀವಮಾನದಲ್ಲೆ ಮರೆಯಲಾಗದ ಅರ್ಥಪೂರ್ಣ ಸನ್ಮಾನ ಎನಿಸಿದೆ ಎಂದರು.
ಇದೇ ವೇಳೆ ಐಯುಡಿಪಿ ಬಡಾವಣೆಯ ಪತಾಂಜಲಿ ಯೋಗಕೇಂದ್ರದ ಹವ್ಯಾಸಿಯೋಗಪಟುಗಳಾದ ಹನುಮಕ್ಕ,ಗೀತ,ಪುಷ್ಪ,ಪುಷ್ಪವತಿ,ಮಂಜುಳ,ಶಬರಿ, ಸಂಯುಕ್ತ,ಸ್ವರೂಪ,ಗೀತಮ್ಮಹಾಗು ಮಂಜುಳಮ್ಮರವರನ್ನಜ ಸನ್ಮಾನಿಸಿ,ಗೌರವಿಸಲಾಯ್ತು.ಕಾರ್ಯಕ್ರಮವನ್ನು ಶಿಕ್ಷಕರಾದ ಮಹಲಿಂಗಪ್ಪ ನಿರೂಪಿಸಿದ್ರು.ಶಬರಿ,ಮಂಜುಳಪ್ರಾರ್ಥಿಸಿದರು.ಯೋಗಕೇಂದ್ರದ ಅಧ್ಯಕ್ಷ ರಾಮಣ್ಣ ಸ್ವಾಗತಿಸಿದ್ದು,ಕಾರ್ಯದರ್ಶಿ ಜಯ್ಯಣ್ಣ ವಂದಿಸಿದರು.ಈ ವೇಳೆ ಹಿರಿಯ ಯೋಗಪಟುಗಳಾದ ಹನುಮಂತಪ್ಪ,ರವಿಶಂಕರ್ ಇದ್ದರು.