ಚಿತ್ರದುರ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) 2025-28ನೇ ಅವಧಿಯ ಚಿತ್ರದುರ್ಗ ಜಿಲ್ಲಾ ಘಟಕದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯು ಇದೇ ನವೆಂಬರ್ 09ರಂದು ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಚಿಕ್ಕಪ್ಪನಹಳ್ಳಿ ಷಣ್ಮುಖ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾಭವನದಲ್ಲಿ ಮತದಾನ ನಡೆಯಲಿದ್ದು, 39 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ವಿವರ ಇಂತಿದೆ. ಜಿಲ್ಲಾ ಉಪಾಧ್ಯಕ್ಷರು- 3 ಹುದ್ದೆಗಳಿಗೆ ಕ್ರಮವಾಗಿ ಅಹೋಬಳಪತಿ ಎಂ.ಎನ್, ಕೆ.ಕೆಂಚಪ್ಪ, ನಾಗತಿಹಳ್ಳಿ ಮಂಜುನಾಥ್, ಸಿ.ಪಿ.ಮಾರುತಿ, ಬಿ.ಟಿ.ರಂಗನಾಥ ಸೇರಿದಂತೆ ಒಟ್ಟು ಐದು ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ ಮೂವರು ಅಭ್ಯರ್ಥಿಗಳಿಗೆ ಮಾತ್ರ ಮತ ಚಲಾಯಿಸುವುದು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ-1 ಹುದ್ದೆಗೆ ಕ್ರಮವಾಗಿ ಟಿ.ತಿಪ್ಪೇಸ್ವಾಮಿ (ಸಂಪಿಗೆ), ವೀರೇಶ್ ವಿ (ಅಪ್ಪು) ಸೇರಿದಂತೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ ಒಂದು ಅಭ್ಯರ್ಥಿಗೆ ಮಾತ್ರ ಮತ ಚಲಾಯಿಸುವುದು.
ಜಿಲ್ಲಾ ಕಾರ್ಯದರ್ಶಿ- 3 ಹುದ್ದೆಗಳಿಗೆ ಕ್ರಮವಾಗಿ ವಿ.ಚಂದ್ರಪ್ಪ (ಪ್ರಜಾವಾಣಿ), ಹೆಚ್.ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ ನಾಕೀಕೆರೆ, ನಾಗೇಶ್ ಬಿ.ಆರ್, ಜಿ.ಸುಭಾಷ್ ಚಂದ್ರ ಸೇರಿದಂತೆ ಒಟ್ಟು ಐದು ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ ಮೂವರು ಅಭ್ಯರ್ಥಿಗಳಿಗೆ ಮಾತ್ರ ಚಲಾಯಿಸಬೇಕು.
ಜಿಲ್ಲಾ ಖಜಾಂಚಿ-1 ಹುದ್ದೆಗೆ ಕ್ರಮವಾಗಿ ಡಿ.ಕುಮಾರಸ್ವಾಮಿ, ಎಸ್.ಜೆ.ದ್ವಾರಕನಾಥ ಸೇರಿದಂತೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ ಒಂದು ಅಭ್ಯರ್ಥಿಗೆ ಮಾತ್ರ ಮತ ಚಲಾಯಿಸಬೇಕು.
ಜಿಲ್ಲೆಯ ರಾಜ್ಯ ಸಮಿತಿ ಸದಸ್ಯರು-1 ಹುದ್ದೆಗೆ ಕ್ರಮವಾಗಿ ದಿನೇಶ್ ಗೌಡಗೆರೆ, ಸಿ.ರಾಜಶೇಖರ (ಟಿ.ವಿ ರಾಜು), ಎಸ್.ಸಿದ್ದರಾಜು (ಪಬ್ಲಿಕ್ ಟಿ ವಿ) ಸೇರಿದಂತೆ ಮೂವರು ಅಭ್ಯರ್ಥಿಗಳು ಕಣದಲ್ಲಿದಲ್ಲಿದ್ದು, ಈ ಪೈಕಿ ಒಂದು ಅಭ್ಯರ್ಥಿಗೆ ಮಾತ್ರ ಮತ ಚಲಾಯಿಸುವುದು.
ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರ 15 ಸ್ಥಾನಗಳಿಗೆ ಕ್ರಮವಾಗಿ ಅರ್ಜುನ್ ಡಿ, ಎಸ್.ಅಮಿತ್, ಸಿ.ಎನ್.ಕುಮಾರ್ (ಹೊಯ್ಸಳ), ಹೆಚ್.ಸಿ.ಗಿರೀಶ್, ಗೋಪಾಲ ಟಿ, ಡಿ.ಎನ್.ಗೋವಿಂದಪ್ಪ, ಚೌಳೂರು ಮಂಜುನಾಥ, ಜಡೇಕುಂಟೆ ಮಂಜುನಾಥ, ಟಿ.ಜೆ.ತಿಪ್ಪೇಸ್ವಾಮಿ, ಟಿ.ದರ್ಶನ್, ಎಸ್.ಟಿ.ನವೀನ್ ಕುಮಾರ್ (ನಿತ್ಯವಾಣಿ, ಹೆಚ್.ಟಿ.ಪ್ರಸನ್ನ (ಪೊಲೀಸ್ ಬೇಟೆ), ಹೆಚ್.ಬಸವರಾಜಪ್ಪ, ಎಸ್.ಮಹಾಂತೇಶ್, ಜಿಒಎನ್ ಮೂರ್ತಿ (ಮುಂಜಾನೆ ಮಾತು), ಎಸ್.ಬಿ.ರವಿಕುಮಾರ್ (ಉಗ್ರಾಣ), ರವಿಮಲ್ಲಾಪುರ, ಎಸ್.ರಾಜಶೇಖರ, ವರದರಾಜ (ವಿಜಯವಾಣಿ), ವಿಶ್ವನಾಥ (ಶ್ರೀರಾಂಪುರ), ಕೆ.ಜಿ.ವೀರೇಂದ್ರ ಕುಮಾರ್, ಆರ್.ಶಿವರಾಜ್ ಸೇರಿದಂತೆ ಒಟ್ಟು 22 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ 15 ಅಭ್ಯರ್ಥಿಳಿಗೆ ಮಾತ್ರ ಮತ ಚಲಾಯಿಸುವುದು.
ಮತದಾನ ಮಾಡುವಾಗ ತಾವು ಆಯ್ಕೆ ಮಾಡಬಯಸುವ ಅಭ್ಯರ್ಥಿ ಹೆಸರಿನ ಮುಂದಿರುವ ಕೋಷ್ಠಕದೊಳಗೆ x ಗುರುತು ಒತ್ತುವ ಮೂಲಕ ಮತದಾನ ಮಾಡಬೇಕು. ಮತ ಚಲಾಯಿಸಿದ ಮತದಾರರಿಗೆ ಅಳಿಸಲಾಗದ ಶಾಯಿಯನ್ನು ಎಡಗೈ ತೋರು ಬೆರಳಿಗೆ ಲೇಪಿಸಲಾಗುತ್ತದೆ.
ಚುನಾವಣೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಹಾಗೂ ಮತದಾರ ಸದಸ್ಯರು ಪಾಲಿಸಬೇಕಾದ ನಿಯಮಗಳು: ಚುನಾವಣೆ ಪ್ರಕ್ರಿಯೆ ಸುಗಮವಾಗಿ ನಡೆಯಲು ಹಾಗೂ ಸಂಘದ ಘನತೆ ಗೌರವ ಹೆಚ್ಚಿಸಲು ಪ್ರತಿಯೊಬ್ಬ ಸದಸ್ಯರ ಸಹಕಾರ ಹಾಗೂ ಜವಾಬ್ದಾರಿ ಇರುವುದನ್ನು ಮರೆಯಬಾರದು. ಮತದಾನ ಮಾಡಲು ಬರುವ ಸದಸ್ಯರ ಗುರುತು ಮಾಡುವುದು ಏಜೆಂಟರ್ ಕರ್ತವ್ಯ ಹಾಗೂ ಮತಪತ್ರ ಕೊಡುವುದಕ್ಕೂ ಮೊದಲೇ ಇವರು ನಮಗೆ ಗೊತ್ತು ಎಂದು ಏಜೆಂಟರ್ ಒಪ್ಪಿಗೆ ಸೂಚಿಸಬೇಕು. ಆ ನಂತರವೇ ಅವರಿಗೆ ಮತದಾನ ಮಾಡಲು ಮತಪತ್ರ ಕೊಡಲಾಗುವುದು. ಮತದಾರರು ಮತದಾನ ಕೇಂದ್ರದೊಳಗೆ 2025-26ನೇ ಸಾಲಿನ ಗುರುತಿನ ಚೀಟಿ ತರುವುದು ಕಡ್ಡಾಯ. ಜೊತೆಗೆ ಮತಚೀಟಿಯಲ್ಲಿ 2025-26 ಹಾಗೂ 2024-2025 ಎರಡು ವರ್ಷದ ಕ್ರಮ ಸಂಖ್ಯೆ, ಹೆಸರನ್ನು ಮತಚೀಟಿಯಲ್ಲಿ ಬರೆದುಕೊಂಡು ಬರಬೇಕು.
ಮತ ಎಣಿಕೆಯ ಕೇಂದ್ರದೊಳಗೆ ಏಜೆಂಟರ್‍ಗೆ ನೀಡಿರುವ ಪಾಸ್‍ನ್ನು ಮಧ್ಯಾಹ್ನ 3ಗಂಟೆಯ ನಂತರ ಅಭ್ಯರ್ಥಿಗಳು ಅದೇ ಪಾಸ್ ಬಳಸಿ ಒಳ ಬರಲು ಅವಕಾಶ ಮಾಡಲಾಗಿದೆ.
ಮರು ಮತ ಎಣಿಕೆ ಕೋರುವ ಪದಾಧಿಕಾರಿಗಳ ಅಭ್ಯರ್ಥಿ ನಾಲ್ಕು ಸಾವಿರ ರೂ. ಹಾಗೂ ಕಾರ್ಯಕಾರಿ ಸಮಿತಿ ಅಭ್ಯರ್ಥಿ ಎರಡು ಸಾವಿರ ರೂ. ಠೇವಣಿ ಪಾವತಿಸಬೇಕು. ಠೇವಣಿ ಪಾವತಿಸಿದವರ ಮತ ಎಣಿಕೆ ಮಾತ್ರ ಮಾಡಲಾಗುವುದು.
ಚುನಾವಣೆ ಅಧಿಕಾರಿಗಳು ಹಾಗೂ ಇತರೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು. ಒಂದು ವೇಳೆ ನಿಯಮ ಮೀರಿದರೆ ಅಗತ್ಯ ಕ್ರಮಕೈಗೊಳ್ಳಲಾಗುವುದು.
ಮತದಾನ ಕೇಂದ್ರದಲ್ಲಿ ಮೊಬೈಲ್ ಬಳಕೆ ಹಾಗೂ ತರುವುದನ್ನು (ಚುನಾವಣೆ ಅಧಿಕಾರಿ ಹೊರತುಪಡಿಸಿ) ನಿಷೇಧಿಸಲಾಗಿದೆ. ಮತದಾನದ ಛಾಯಾಚಿತ್ರ, ವಿಡಿಯೋ ತೆಗೆಯುವುದು ಅಪರಾಧ ಹಾಗೂ ಮೂರು ವರ್ಷ ಜೈಲು ಎಂಬುದನ್ನು ಮರೆಯುವಂತಿಲ್ಲ. ನಿಗದಿಪಡಿಸಿದ ಸ್ಥಾನಕ್ಕಿಂತ ಹೆಚ್ಚು ಮತದಾನ ಮಾಡಿದಲ್ಲಿ ಆ ಮತಪತ್ರ ಅಸಿಂಧುವಾಗುತ್ತದೆ.
ಮತದಾನ ಕೇಂದ್ರ ನಿಯಮಗಳು: ಮತದಾನ ಕೇಂದ್ರದ ಒಳಗೆ ಮೊಬೈಲ್ ತರುವಂತಿಲ್ಲ. ಮತದಾನ ಕೇಂದ್ರದ ಒಳಗೆ ಮತ ಯಾಚನೆ/ಪ್ರಚಾರ ಮಾಡುವಂತಿಲ್ಲ. ಮತ ಎಣಿಕೆ ಸ್ಥಳದಲ್ಲಿ ಮೊಬೈಲ್ ನಿಷೇಧಿಸಲಾಗಿದೆ. ಮತಕೇಂದ್ರದ 100ಮೀ ವ್ಯಾಪ್ತಿಯಲ್ಲಿ ಯಾವುದೇ ಪ್ರಚಾರ ನಡೆಸುವಂತಿಲ್ಲ. ಮತಪತ್ರದಲ್ಲಿ ಮತ ಚಲಾಯಿಸುವ ಚಿನ್ಹೆ ಹೊರತು ಪಡಿಸಿ ಉಳಿದಂತೆ ಪೆನ್ ಮೂಲಕ ಇನ್ನಿತರೆ ಯಾವುದೇ ವಸ್ತು ಬಳಸಿ ಗುರುತು ಮಾಡಿದರೆ ಅದನ್ನು ಅಸಿಂಧುಗೊಳಿಸಲಾಗುವುದು.
ನ.09ರಂದು ಮಧ್ಯಾಹ್ನ 3.30 ನಂತರ ಮತಗಳ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಯಲ್ಲಿ ಜಯಶೀಲರಾದವರಿಗೆ ಅಂದೇ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಚಿಕ್ಕಪ್ಪನಹಳ್ಳಿ ಷಣ್ಮುಖ ತಿಳಿಸಿದ್ದಾರೆ.
ರಾಜ್ಯದಲ್ಲಿ ವೋಟ್ ಚೋರಿ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ: ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ
ಒಂದು ಹನಿಯಿಂದ್ಲೂ ದೊಡ್ಡ ಹಾನಿ ; ‘ಮದ್ಯ’ ನಿಮ್ಮ ಮೆದುಳನ್ನ ಹೇಗೆ ಹಾನಿ ಮಾಡುತ್ತೆ ಅಂತಾ ತಿಳಿದ್ರೆ ಶಾಕ್ ಆಗ್ತೀರಾ!








