ಚಿತ್ರದುರ್ಗ ಜಿಲ್ಲೆಯ ಕಾಡುಗೊಲ್ಲ ಸಮಾಜದ ಪ್ರಭಾವಿ ನಾಯಕರಾದ ಗಂಜಿಗಟ್ಟೆ ಶಿವಣ್ಣ ಅವರನ್ನು ಗ್ಯಾರಂಟಿ ಭಾಗ್ಯಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸುವಂತೆ ಒತ್ತಾಯಿಸಿ ಕಾಡುಗೊಲ್ಲಸಮಾಜದ ಮುಖಂಡರು ಆಗ್ರಹಿಸಿದರು.
ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕಾಡುಗೊಲ್ಲಸಮಾಜದ ಮುಖಂಡ ಹಾಗು ನಿವೃತ್ತ ಪ್ರೊಫೆಸರ್ ಬಸವರಾಜಪ್ಪ ಅವರು, ಕಾಡುಗೊಲ್ಲ ಸಮುದಾಯದ ಗಂಜಿಗಟ್ಟೆ ಶಿವಣ್ಣ ಅವರು ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದು,ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷದ ಗೆಲುವು ಹಾಗು ಸಂಘಟನೆಯಲ್ಲಿ ತಮ್ಮ ತೊಡಗಿಸಿಕೊಂಡಿದ್ದಾರೆ.
ಸತತ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ್ದಾರೆ.ಆದ್ದರಿಂದ ಗ್ಯಾರಂಟಿ ಭಾಗ್ಯಗಳ ಜಿಲ್ಲಾ ಅನುಷ್ಟಾನ ಸಮಿತಿಗೆ ಇವರನ್ನು ಅಧ್ಯಕ್ಷರನ್ನಾಗಿಸಿದರೆ ಪರೋಕ್ಷವಾಗಿ ಪಕ್ಷಕ್ಕು ಅನುಕೂಲ ಆಗಲಿದೆ.
ಅಲ್ಲದೇ ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾಡುಗೊಲ್ಲ ಸಮಾಜ ಚುನಾವಣೆ ವೇಳೆ ನಿರ್ಣಾಯಕ ಪಾತ್ರ ವಹಿಸಲಿದ್ದು, ಇವರನ್ನು ಅಧ್ಯಕ್ಷರನ್ನಾಗಿ ನೇಮಿಸಿದರೆ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗಲಿದೆ. ಹೀಗಾಗಿ ರಾಜ್ಯದ ಗ್ಯಾರಂಟಿ ಭಾಗ್ಯಗಳ ಅಧ್ಯಕ್ಷರಾದ ಹೆಚ್.ಎಂ ರೇವಣ್ಣ ಅವರು ಶಿವಣ್ಣ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸುವಂತೆ ಒತ್ತಾಯಿಸಿ ಕಾಡುಗೊಲ್ಲ ಸಮಾಜದ ಮುಖಂಡರು ಒಟ್ಟಾಗಿ ಸುದ್ದಿಗೋಷ್ಟಿ ನಡೆಸಿದರು.
ಸುದ್ದಿಗೋಷ್ಟಿಯಲ್ಲಿ ನಿವೃತ್ತ ಖಜಾನೆ ಅಧಿಕಾರಿ ಮೈಲಾರಪ್ಪ,ನಿವೃತ್ತ ಶಿಕ್ಷಕ ನಾಗಪ್ಪ ಹಾಗು ಕಾಂಗ್ರೆಸ್ ಮುಖಂಡ ಲೋಕಪ್ಪ ಸೇರಿದಂತೆ ಇತರರು ಇದ್ದರು.
ಶೋಭಾ ನಂತರ ಡಿವಿಎಸ್ಗೆ ಸಂಕಷ್ಟ : ಸದಾನಂದಗೌಡಗೆ ಟಿಕೇಟ್ ನೀಡದಂತೆ ಬಿಜೆಪಿ ಕಾರ್ಯಕರ್ತರ ಒತ್ತಾಯ
BREAKING : ರಾಮನಗರ : 25 ಮನುಷ್ಯರ ‘ತಲೆಬುರುಡೆ’ ಸಂಗ್ರಹಿಸಿ ಮಾಟ ಮಂತ್ರ : ಆರೋಪಿ ವಶಕ್ಕೆ