ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ವೆಲ್ಡಿಂಗ್ ಮಾಲೀಕರು ಮತ್ತು ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಪರಮೇಶ್ ಅವರು ಇಂದು ಎರಡನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ವೆಲ್ಡಿಂಗ್ ಮಾಲೀಕರು ಮತ್ತು ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆಯು ನಗರದ ಸಂಘದ ಕಾರ್ಯಾಲಯದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಕಾನೂನು ಸಲಹೆಗಾರರಾದ ರಫೀಕ್ ಅಹ್ಮದ್ ಇವರ ಸಮ್ಮುಖದಲ್ಲಿ ನೆಡೆದ ಚುನಾವಣೆಯಲ್ಲಿ ಪರಮೇಶ್ ಅವರು ಎರಡನೆಯ ಬಾರಿಗೆ ಅಧ್ಯಕ್ಷರಾಗಿ ಅಯ್ಕಯಾಗಿರುತ್ತಾರೆ.
ಇನ್ನೂ ಹಿರಿಯೂರು ತಾಲ್ಲೂಕು ವೆಲ್ಡಿಂಗ್ ಮಾಲೀಕರು ಮತ್ತು ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾಗಿ ಸಯ್ಯದ್ ನಯಜ್, ಶಾಮು, ಖಜಾಂಚಿಯಾಗಿ ಇಸ್ಮಾಯಿಲ್, ಕಾರ್ಯದರ್ಶಿಯಾಗಿ ಬಸವರಾಜು, ಸಹ ಕಾರ್ಯದರ್ಶಿಯಾಗಿ ಸಾದಿಕ್ ಖಾನ್, ಗೌರವ ಅಧ್ಯಕ್ಷರಾಗಿ ರಾಜ್ ಕುಮಾರ್, ನಹೀಮುಲ್ಲಾ, ಸಂಘಟನಾ ಕಾರ್ಯದರ್ಶಿಗಳಾಗಿ ಜಾಫರ್ ಸಾದಿಕ್, ಕಿರಣ್ ಕುಮಾರ್, ರಾಮತ್, ಅಜಯ್, ರವಿ, ಶಾನ್ ವಾಜ್, ನಾಜಿ ಆಯ್ಕೆಯಾಗಿದ್ದಾರೆ.
ಇನ್ನೂ ಹಿರಿಯ ಸಲಹೆಗಾರರಾಗಿ ಸೈಪುಲ್ಲಾ, ತಿಪ್ಪೇಸ್ವಾಮಿ ಆಯ್ಕೆಯಾಗಿದ್ದಾರೆ. ಇಂದು ಹಿರಿಯೂರು ತಾಲ್ಲೂಕು ವೆಲ್ಡಿಂಗ್ ಮಾಲೀಕರು ಮತ್ತು ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳಿಗೆ ಹಲವು ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
BREAKING: ಸಂಸದ ಕೋಟ ಶ್ರೀನಿವಾಸ ಪೂಜಾರಿ ‘ತಾಯಿ ಲಚ್ಚಿ ಪೂಜಾರ್ತಿ’ ವಿಧಿವಶ
‘ಕನ್ನಡ ಚಲನಚಿತ್ರ’ಗಳ ಬೆಳವಣಿಗೆಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಾಯ: ಸಿಎಂ ಸಿದ್ದರಾಮಯ್ಯ ಘೋಷಣೆ