ಚಳ್ಳಕೆರೆ : ಸ್ಥಳೀಯ ಪ್ರಗತಿ ವಿದ್ಯಾಲಯದಲ್ಲಿ ಶಾಲೆಯ ಸ್ಮರಣ ಸಂಚಿಕೆ (ವಾರ್ಷಿಕ ಪತ್ರಿಕೆ) ಯನ್ನು ಗೌರವಾನ್ವಿತ ಸಂಸದರಾದ ಗೋವಿಂದ ಕಾರಜೋಳ್ ಅವರು ಬಿಡುಗಡೆ ಮಾಡಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಕಾರ್ಯಕ್ರಮವನ್ನು ಶಾಲೆಯ ಪ್ರಾಂಶುಪಾಲರು , ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಭಾವಪೂರ್ಣವಾಗಿ ನಡೆಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಸ್ವಾಗತ ಗೀತೆಯನ್ನು ಹಾಡಿ ಅತಿಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಸ್ಮರಣ ಸಂಚಿಕೆ ಯನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಸಂಸದರಾದ ಗೋವಿಂದ ಕಾರಜೋಳ ಅವರು, ಶಾಲಾ ವಾರ್ಷಿಕ ಪತ್ರಿಕೆ ವಿದ್ಯಾರ್ಥಿಗಳ ಸೃಜನಶೀಲತೆ, ಚಿಂತನೆ ಮತ್ತು ಪ್ರತಿಭೆಯನ್ನು ಹೊರಹೊಮ್ಮಿಸುವ ಅತ್ಯುತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಾಹಿತ್ಯ, ವಿಜ್ಞಾನ ಮತ್ತು ಕಲಾ ಕ್ಷೇತ್ರಗಳಲ್ಲಿಯೂ ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ನಂತರ ಶಾಲಾ ಅಧ್ಯಕ್ಷರಾದ ಶ್ರೀ ರಮೇಶ್ ಬಾಬು ಅವರು ಮಾತನಾಡಿ ಈ ಸ್ಮರಣ ಸಂಚಿಕೆ ಯಲ್ಲಿ ವಿದ್ಯಾರ್ಥಿಗಳ ಕಥೆಗಳು, ಕವನಗಳು, ವಿಜ್ಞಾನ ಮಾಹಿತಿ, ಚಟುವಟಿಕೆಗಳು ಹಾಗೂ ವಿವಿಧ ಲೇಖನಗಳನ್ನು ಒಳಗೊಂಡಿದ್ದು, ಇದು ವಿದ್ಯಾರ್ಥಿಗಳ ಪ್ರತಿಭೆಗೆ ಉತ್ತಮ ಪ್ರತಿಬಿಂಬವಾಗಿದೆ, ಇಂತಹ ಕಾರ್ಯಕ್ರಮ ಮಾನ್ಯ ಸಂಸದರಿಂದ ನೆರವೇರಿರುವುದು ಅತ್ಯಂತ ಸಂತೋಷದಾಯಕ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಅರ್ಚನರವರು ಮತ್ತು ಶಾಲಾ ಶಿಕ್ಷಕರು ಸಂಸದರಿಗೆ ಶಾಲೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಹಾಗೂ ಈ ವಾರ್ಷಿಕ ಪತ್ರಿಕೆಯ ಬಿಡುಗಡೆ ಗೆ ಶ್ರಮಿಸಿದ ಶಾಲಾ ಸಂಯೋಜಕರಾದ ಬಸವರಾಜ್, ಅಲೆಕ್ಸ್ ಎಮ್ ಶೇಫೇರ್ಡ್ ಹಾಗೂ ಚಿತ್ರಕಲಾ ಶಿಕ್ಷಕರಾದ ಜಯಂತ್ ಮತ್ತು ವೀರೇಶ್ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಉಪ ಪ್ರಾಂಶುಪಾಲರಾದ ಮಾಲಿನಿ ಜಾನ್, ಆಡಳಿತ ಅಧಿಕಾರಿಗಳಾ ವೈಷ್ಣವಿ ಮತ್ತು ಕಾವ್ಯ ಹಾಗೂ ಶಾಲೆಯಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಕುಸುಮ್-ಬಿ ಮೂಲಕ ನೀರಾವರಿ ಚಟುವಟಿಕೆಗಳಿಗೆ ಸಬ್ಸಿಡಿ ದರದಲ್ಲಿ ಸೌರ ಪಂಪ್‌ಸೆಟ್
ಸೀ ಬರ್ಡ್ ಸಂತ್ರಸ್ಥರಿಗೆ ರೂ.27.70 ಕೋಟಿ ಹೆಚ್ಚುವರಿ ಪರಿಹಾರ ವಿತರಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ








