ಚಿತ್ರದುರ್ಗ: ಜಿಲ್ಲೆಯಲ್ಲಿ ಇಂದು ಧಾರುಣ ಘಟನೆಯೊಂದು ನಡೆದಿದೆ. ಅದೇ ಮಕ್ಕಳನ್ನು ಹೊಲದ ಬೇಲಿಗೆ ಬೆಂಕಿಯಿಟ್ಟು, ಅದರಲ್ಲಿ ತಳ್ಳಿ, ತಾಯಿಯೂ ತಾನು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ. ಈ ಮೂಲಕ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ ಬಹಿರ್ದೆಸೆಗೆಂದು ಇಬ್ಬರು ಮಕ್ಕಳೊಂದಿಗೆ ತಾಯಿ ಮಾರಕ್ಕ ತೆರಳಿದ್ದಾರೆ. ಬೇಲಿಯೊಂದಕ್ಕೆ ಬೆಂಕಿಯಿಟ್ಟಂತ ಆಕೆ, ತನ್ನ 4 ವರ್ಷದ ಪುತ್ರ ನಯನ್ ಹಾಗೂ 2 ವರ್ಷದ ಹರ್ಷವರ್ಧನ್ ನನ್ನು ಬೆಂಕಿಗೆ ದೂಡಿದ್ದಾರೆ.
ಈ ಬಳಿಕ 24 ವರ್ಷದ ಮಾರಕ್ಕ ಕೂಡ ಅದೇ ಬೆಂಕಿಗೆ ಹಾರಿ ಸಜೀವ ದಹನವಾಗುವ ಮೂಲಕ ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಭೇಟಿ ನೀಡಿ, ಪರಿಶೀಲಿಸಿ ಮಾಹಿತಿ ಪಡೆದರು. ಈ ದುರಂತಕ್ಕೆ ಕೌಟುಂಬಿಕ ಕಲಹ ಕಾರಣ ಎನ್ನಲಾಗುತ್ತಿದೆ. ಈ ಸಂಬಂಧ ತಳುಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಜಾರ್ಖಂಡ್ ಮಾಜಿ CM ಹೇಮಂತ್ ಸೊರೆನ್ ಅತ್ತಿಗೆ ಸೀತಾ ಸೊರೆನ್ ಬಿಜೆಪಿಗೆ ಸೇರ್ಪಡೆ
ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರವಾಗಿ ಮುಂದುವರೆಯಲಿದೆ: ಬಿವೈ ವಿಜಯೇಂದ್ರ