ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕು ವ್ಯಾಪ್ತಿಯ ವಾಣಿ ವಿಲಾಸಪುರ ವ್ಯಾಪ್ತಿಯ ಗ್ರಾಮಗಳ ಕೆರಗಳಿಗೂ ಮಾರಿಕಣಿಮೆ ಡ್ಯಾಂನಿಂದ ನೀರು ತುಂಬಿಸುವಂತೆ ಆಗ್ರಹಿಸಿ ದಿನಾಂಕ 21-08-2024ರಂದು ವಿವಿ ಪುರಂ ಬಂದ್ ಗೆ ಕರೆ ನೀಡಲಾಗಿದೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಅವರು ಇಂದು ವಿವಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬರಮಗಿರಿ ಗ್ರಾಮದಲ್ಲಿ ಆ ಭಾಗದ ಕೆರೆಗಳಾದ ಭರಮಗಿರಿ ಕೆರೆ ಗುಡಿಹಳ್ಳಿ ಕೆರೆ ಗೌನಹಳ್ಳಿ ಕೆರೆ ಬೇರೇನಹಳ್ಳಿ ಜಾಲಿ ಕಟ್ಟೆ ಕೆರೆ ಕೂನಿಕೆರೆ ಕೆರೆ ಮತ್ತು ತವಂದಿ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಈ ಎಲ್ಲಾ ಗ್ರಾಮಗಳಿಂದ ರೈತ ಮುಖಂಡರು ಸಭೆ ಸೇರಿದರು ಸಭೆಯನ್ನು ನಡೆಸಿದರು.
ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದಂತ ಹಿರಿಯೂರು ತಾಲೂಕು ರೈತ ಸಂಘದ ಅಧ್ಯಕ್ಷರಾದ ಕೆ ಟಿ ತಿಪ್ಪೇಸ್ವಾಮಿ ವಾಣಿ ವಿಲಾಸ ಜಲಾಶಯದ ಸಮೀಪವಿದ್ದರೂ ಅಂತರ್ಜಲ ಈ ಭಾಗಕ್ಕೆ ಇಲ್ಲದಂತಾಗಿದ್ದು ಎಲ್ಲಾ ಕೆರೆಗಳು ಬತ್ತಿ ಹೋಗಿದ್ದಾವೆ. ಕುಡಿಯುವ ನೀರಿಗೂ ಸಹ ಆಹಾಕಾರ ಉಂಟಾಗಿದೆ. ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ ಎಂಬುದಾಗಿ ಆಂತಕ ವ್ಯಕ್ತ ಪಡಿಸಿದರು.
ವಿವಿ ಪುರಂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹರಿಸುತ್ತಿದ್ದಾರೆ. ಆದ್ದರಿಂದ ಈ ಭಾಗದ ಕೆರೆಗಳನ್ನು ತುಂಬಿಸಲು ಪ್ರತಿ ಹಳ್ಳಿಯಿಂದಲೂ ರೈತರು ಸಂಘಟಿತರಾಗಿ ಗಟ್ಟಿಯಾದ ಹೋರಾಟ ಚಳುವಳಿ ಮಾಡಿಬೇಕು. ಸರ್ಕಾರದ ಗಮನ ಸೆಳೆದು ನಮ್ಮ ಕೆರೆಗಳಿಗೆ ನೀರು ತುಂಬಿಸುವವರೆಗೂ ನಿರಂತರ ಚಳುವಳಿ ಮಾಡೋಣ ಎಂದರು.
ವಾಣಿವಿಲಾಸ ಜಲಾಶಯಕ್ಕೆ ಪ್ರತಿ ವರ್ಷ 10ಟಿಎಂಸಿ ನೀರು ಹರಿಸಬೇಕು. ಕೇಂದ್ರ ಸರ್ಕಾರ ಘೋಷಣೆ ಮಾಡಿದಂತೆ 5,300 ಕೋಟಿ ಹಣ ಬಿಡುಗಡೆ ಮಾಡಬೇಕು. ಈ ಎಲ್ಲಾ ಒತ್ತಾಯಗಳನ್ನು ಈಡೇರಿಸುವವರೆಗೂ ನಿರಂತರ ಚಳುವಳಿ ಮಾಡೋಣ ಎಂದು ಸಭೆಯಲ್ಲಿ ನೆರೆದಿದ್ದಂತ ರೈತರನ್ನು ಹುರಿದುಂಬಿಸಿದರು.
ಈ ಹಿನ್ನಲೆಯಲ್ಲಿ ಇಂದಿನ ಸಭೆಯಲ್ಲಿ ಒಮ್ಮತದ ನಿರ್ಮಾಣಕ್ಕೆ ಬಂದು ದಿನಾಂಕ 21/8/ 2024ನೇ ಬುಧವಾರ ವಿ ವಿ ಪುರ ಬಂದ್ ಬಾಡಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ.
ಇದಕ್ಕೆ ಸರ್ಕಾರ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ಅಂತ ಹಂತವಾಗಿ ಚಳುವಳಿಯನ್ನು ತೀವ್ರಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಬಳ್ಳಗಟ್ಟಿ ವೆಂಕಟೇಶ್, ತಿಮ್ಮಯ್ಯ, ಭೂತಯ್ಯ, ಅಮ್ಮನ ಹಟ್ಟಿಯ ಬಸವರಾಜ್, ಪೇರಿಸ್ವಾಮಿ, ಭರಮಗಿರಿ ಲೋಕೇಶ್, ವೀರಭದ್ರಪ್ಪ, ಶಿವಣ್ಣ, ಕೆಂಚಪ್ಪ, ಕಾಂತರಾಜ್, ಮಂಜುನಾಥ್, ಗೌನ ಹಳ್ಳಿಯ ಶಾಂತಕುಮಾರ್, ಶಿವಣ್ಣ, ಹನುಮಂತಪ್ಪ, ಕಕ್ಕಯನ ಹಟ್ಟಿಯ ಹನುಮಂತಪ್ಪ, ಮಹಾಲಿಂಗಪ್ಪ, ಶಿವಣ್ಣ, ತಳವಾರಟ್ಟಿಯ ಭೂತೇಶ್, ಪೂಜಾರಪ್ಪ, ಭೀಮಯ್ಯ, ಎ ವಿ ಕೊಟ್ಟಿಗೆಯ ಪಾರತೇಶ್ ವಿ ಏನ್ ಗೌಡ, ದೇವರಾಜ್, ಸುರೇಶ್, ಕೂನಿಕೆರೆ ಶಶಿಧರ್, ಮುಂತಾದವರು ಭಾಗವಹಿಸಿದ್ದರು.
BIG NEWS: ‘ಮೊಟ್ಟೆ ವಂಚನೆ’ ವಿಡಿಯೋ ವೈರಲ್: ಸಿಡಿಪಿಒ, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಸಸ್ಪೆಂಡ್
‘ಚಂದ್ರಗುತ್ತಿ ದೇವಸ್ಥಾನ’ದ ಸರ್ವಾಂಗೀಣ ವಿಕಾಸಕ್ಕೆ ಕ್ರಮ: ಸಚಿವ ಮಧು ಬಂಗಾರಪ್ಪ
‘KSRTC’ಗೆ ಮತ್ತೊಂದು ಗರಿಮೆ: ದೇಶದ ‘ಲೀಡರ್ಸ್ ಆಫ್ ರೋಡ್ ಟ್ರಾನ್ಸಪೋರ್ಟ್ 2024’ರ ಪ್ರಶಸ್ತಿ