ಚಿತ್ರದುರ್ಗ: ಜಿಲ್ಲೆಯ ಜವಗೊಂಡನಹಳ್ಳಿಯ ಗೊರ್ಲಡಕು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಹಾಗೂ ಬಸ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿತ್ತು. ಈ ಅಪಘಾತದ ಬಳಿಕ ಬೆಂಕಿ ಕಾಣಿಸಿಕೊಂಡು ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು. ಈ ದುರಂತದಲ್ಲಿ 7 ಮಂದಿ ಮೃತಪಟ್ಟಿದ್ದರು. ಅವರಲ್ಲಿ ಇಬ್ಬರು ಯುವತಿಯರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಚಿತ್ರದುರ್ಗದ ಜವಗೊಂಡನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯ ಬಸ್ ಅಪಘಾತ ಪ್ರಕರಣದಲ್ಲಿ ಮೃತಪಟ್ಟ ಹಾಸನ ಜಿಲ್ಲೆಯ ಇಬ್ಬರು ಯುವತಿಯ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಚಿತ್ರದುರ್ಗ ಜಿಲ್ಲಾಸ್ಪತ್ರೆ ಶವಾಗಾರದ ಬಳಿ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಡಿಎನ್ಎ ಪರೀಕ್ಷೆ ವರದಿ ಆಧರಿಸಿ ನವ್ಯಾ, ಮಾನಸಾ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.
ಇಂದು ನವ್ಯಾ, ಮಾನಸಾ ಅವರ ಶವದ ಅಂತ್ಯ ಸಂಸ್ಕಾರವನ್ನು ಕುಟುಂಬಸ್ಥರು ಹಾಸನದ ಎ.ಅಂಕನಹಳ್ಳಿಯಲ್ಲಿ ನೆರವೇರಿಸಲಿದ್ದಾರೆ. ಕಾಳೇನಹಳ್ಳಿ ಸ್ಮಶಾನದಲ್ಲಿ ಮಾನಸಾ ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ.
BREAKING: ಬೆಂಗಳೂರಲ್ಲಿ ಕಾಲೇಜು ಹಿಂಭಾಗ ನವಜಾತ ಶಿಶು ಪತ್ತೆ: ನಿನ್ನೆ ಜನಿಸಿದ ಮಗು ಎಸೆದು ಹೋದ ದುರುಳರು








