ಚಿತ್ರದುರ್ಗ: ಯೋಗ ಕಲಿಯಲು ವಯಸ್ಸು ಮುಖ್ಯವಲ್ಲ,ಆಸಕ್ತಿಯಿಂದ ಕಲಿಯುವ ಮನಸಿರಬೇಕು ಎಂದು ಐಯುಡಿಪಿ ಬಡಾವಣೆಯ ನಿಸರ್ಗ ಯೋಗಕೇಂದ್ರದ ಯೋಗಗುರು ಶಿವಲಿಂಗಪ್ಪ ಹೇಳಿದರು.
ನಗರದ ಐಯುಡಿಪಿ ಬಡಾವಣೆಯಲ್ಲಿರುವ ಪ್ರಶಾಂತಿ ವಿದ್ಯಾಲಯದಲ್ಲಿ 10 ನೇ ಅಂತರರಾಷ್ಟ್ರೀಯ ಯೋಗಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಯೋಗಪ್ರದರ್ಶನದಲ್ಲಿ ಭಾಗಿಯಾಗಿದ್ದ ಅವರು, ನರ್ಸರಿ,ಎಲ್ ಕೆಜಿ ವಿದ್ಯಾರ್ಥಿಗಳು ಸೇರಿದಂತೆ ಪ್ರಾಥಾಮಿಕ ಶಾಲೆಯ ಮಕ್ಕಳಿಗೆ ಯೋಗತರಭೇತಿ ಕುರಿತು ತಿಳಿಸಿದರು.
ಶಾಲೆಯ ಸಭಾಂಗಣದಲ್ಲಿ ನಡೆದ ಯೋಗಾಭ್ಯಾಸದಲ್ಲಿ ಮಾತನಾಡಿದ ಅವರು,ಯೋಗ ಅನ್ನೋದು ಇಂದು ಹೆಮ್ಮರವಾಗಿ ಬೆಳೆದಿದೆ.ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ.ಔಶಧೋಪಚಾರದಿಂದ ಗುಣವಾಗದ ರೋಗರುಜಿನಗಳು ನಿತ್ಯ ಯೋಗಭ್ಯಾಸದಿಂದ ಸುಧಾರಿಸಿವೆ.ಹೀಗಾಗಿ ದೇಶ ವಿದೇಶಗಳಲ್ಲು ಯೋಗ ಬಹುಪ್ರಾಮುಖ್ಯತೆ ಪಡೆದಿದೆ ಎಂದರು.
ಈ ವೇಳೆ ಹವ್ಯಾಸಿ ಯೋಗ ಪಟುಗಳ ಜಯ್ಯಣ್ಣ,ಪುಷ್ಪ,ಸಂಯುಕ್ತ,ದಿವ್ಯ ಯೋಗ ಪ್ರದರ್ಶನ ನೀಡಿದರು.ವಿದ್ಯಾರ್ಥಿಗಳು ಆಕರ್ಷಕ ಯೋಗ ಭಂಗಿಗಳನ್ನು ನೋಡಿ ಪುಳಕಿತರಾದರು.ಈ ವೇಳೆ ಪ್ರಶಾಂತಿ ಶಾಲೆಯ ಮುಖ್ಯಸ್ಥರಾದ ರಮೇಶ್ ಇಟಗಿ, ಶಿಕ್ಷಕಿಯಾದ ಸಂಪದ,ಸಂದ್ಯ ಮೇಡಂ ಇದ್ದರು.
BIG NEWS: ಈ ಬಾರಿ ‘ಪಂಚಘಾತಕ’ಗಳು ಸಂಭವಿಸಲಿವೆ: ‘ಕೋಡಿಮಠ ಶ್ರೀ’ ಶಾಕಿಂಗ್ ಭವಿಷ್ಯ | Kodimatha Swamiji
BREAKING : ʻBMTCʼ ನೌಕರರ ಮುಷ್ಕರಕ್ಕೆ ಬ್ರೇಕ್ : 6 ತಿಂಗಳು ಪ್ರತಿಭಟನೆ ನಡೆಸದಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ