ಚಿತ್ರದುರ್ಗ: ಜಿಲ್ಲೆಯಲ್ಲಿ ಅಬ್ಬಿನಹೊಳೆ ಠಾಣೆ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿ, 9 ಲಕ್ಷದ 92 ಸಾವಿರ ಬೆಲೆಬಾಳುವ ಕುರಿಗಳನ್ನು ಕಳ್ಳತನ ಮಾಡಿದ್ದ ಕಳ್ಳನನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತಂತೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ; 01-11-2025 ರಂದು ಸಂಜೆ 06-30 ಗಂಟೆಯಿಂದ ರಾತ್ರಿ 09-00 ಗಂಟೆಯ ವೇಳೆಯಲ್ಲಿ ಸಕ್ಕರ ಗ್ರಾಮದ ಬಳಿ ಇರುವ ಗುಂಡಪ್ಪ ತಂದೆ ಈರಪ್ಪ ಅವರ ಜಮೀನಿನಲ್ಲಿದ್ದ ಕುರಿ ರೊಪ್ಪದಿಂದ ಸುಮಾರು 120 ಕುರಿಗಳು ಕಳ್ಳತನವಾಗಿರುವುದಾಗಿ, ಪಿರ್ಯಾದಿ ಸಕ್ಕರ ಗ್ರಾಮದ ಭೂತಣ್ಣ ಅವರು ನೀಡಿದ್ದ ದೂರಿನ ಮೆರೆಗೆ ಅಬ್ಬಿನಹೊಳೆ ಪೊಲೀಸ್ ಠಾಣಾ ಮೊ.ನಂ.192/2025 ಕಲಂ 303[2] BNS-2023 ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು ಎಂದಿದೆ.
ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶಿವಕುಮಾರ, ಹಿರಿಯೂರು ಪೊಲೀಸ್ ಉಪಾಧೀಕ್ಷಕರಾದ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಐಮಂಗಲ ವೃತ್ತ ನಿರೀಕ್ಷಕರಾದ ಗುಡ್ಡಪ್ಪ ಎನ್ ಹಾಗೂ ಅಬ್ಬಿನಹೊಳೆ ಪೊಲೀಸ್ ಠಾಣೆಯ ಪಿಎಸ್ಐ ದೇವರಾಜ್, ದಿನಾಂಕ;03-10-2025 ರಂದು ಕಳ್ಳತನವಾಗಿದ್ದ 9 ಲಕ್ಷದ 92 ಸಾವಿರ ಬೆಲೆಬಾಳುವ ಕುರಿಗಳ ಸಮೇತ ಆರೋಪಿ ಲಕ್ಷ್ಮೀಕಾಂತ ತಂದೆ ರಘುವಣ್ಣ ಸುಮಾರು-35 ವರ್ಷ ದ್ವಾರನಕುಂಟೆ ಗ್ರಾಮ ಶಿರಾ ತಾಲ್ಲೂಕು ಅವರನ್ನು ಪತ್ತೆ ಮಾಡಿ, ಸದರಿ ಆರೋಪಿಯನ್ನು ದಸ್ತಗಿರಿ ಕ್ರಮ ಜರುಗಿಸಿ ಘನ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು. ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ಮಾಡಿರುತ್ತಾರೆ ಎಂದಿದೆ.
ಬಡ ರೈತರ ಕಳ್ಳತನವಾದ ಕುರಿಗಳನ್ನು ಕೇಸು ದಾಖಲಾದ 24 ಗಂಟೆಗಳ ಒಳಗೆ ಪತ್ತೆಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶ್ವಸಿಯಾಗಿರುವ ಎನ್ ಗುಡ್ಡಪ್ಪ, ಪೊಲೀಸ್ ವೃತ್ತ ನಿರೀಕ್ಷಕರು, ಐಮಂಗಲ ವೃತ್ತರವರು, ಅಬ್ಬಿನಹೊಳೆ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರವರಾದ ದೇವರಾಜ್, ಪಿಎಸ್ಐ, ಹುಸೇನ್ ಅ ಸುಳಿಕೇರಿ ಮತ್ತು ಸಿಬ್ಬಂದಿಯವರಾದ ಎಎಸ್ಐ ರಾಮಣ್ಣ, ನಿಂಗರಾಜ್, ದೇವೇಂದ್ರಪ್ಪ, ಹಳೆಯಳನಾಡು ನಾಗರಾಜ್, ಹಿರಿಯೂರು ಗ್ರಾಮಾಂತರ ಠಾಣೆಯ ಸಿದ್ದಲಿಂಗೇಶ್ವರ, ಬಬ್ಬೂರು ನಾಗರಾಜ್, ದಿಲೀಪ್, ರುದ್ರೇಶ್, ನಾಗಣ್ಣ ಹಾಗೂ ಚಾಲಕರಾದ ಹರ್ಷ ಅವರುಗಳ ಕಾರ್ಯವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಷಿಸಿದ್ದಾರೆ ಎಂಬುದಾಗಿ ತಿಳಿಸಿದೆ.
ಅಂದಹಾಗೇ ಆರೋಪಿ ಲಕ್ಷ್ಮೀ ಕಾಂತ 120 ಕುರಿಗಳನ್ನು ಕದ್ದು, ಹಿರಿಯೂರು ತಾಲ್ಲೂಕಿನ ಸಕ್ಕರದಿಂದ ಬೇವಿನಹಳ್ಳಿಗೆ ಹೊಡೆದುಕೊಂಡು ತೆರಳಿದ್ದನು. ಭಾನುವಾರ ರಾತ್ರಿಯಂದು ಬೇವಿನಹಳ್ಳಿ ಸಮೀಪದ ಕೆರೆಯೊಂದರಲ್ಲಿ ತಡೆದುಕೊಂಡಿದ್ದನು. ಕುರಿಯ ಬಗ್ಗೆ ಅನುಮಾನಗೊಂಡಂತ ಸ್ಥಳೀಯರಾದಂತ ಶ್ರೀಧರ್, ಬೋರವ್ ವೆಲ್ ಏಜೆನ್ಸಿಯ ಮುದ್ದಣ್ಣ, ಅಂಬರೀಶ್, ಕೇಶವ, ಲಕ್ಷ್ಮೀತ, ಜವರಪ್ಪ, ಕಾಳಜ್ಜರ ನಾಗರಾಜ ಸೇರಿದಂತೆ ಇತರರು ಕುರಿ ತಡೆದುಕೊಂಡಿದ್ದಂತ ಲಕ್ಷ್ಮೀ ಕಾಂತನನ್ನು ವಿಚಾರಿಸಿದ್ದಾರೆ. ಈ ವೇಳೆ ಸರಿಯಾದ ಮಾಹಿತಿ ನೀಡಿಲ್ಲ. ಹೀಗಾಗಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದಂತ ಅಬ್ಬಿನಹೊಳೆ ಠಾಣೆಯ ಪೊಲೀಸರು ವಿಚಾರಣೆ ನಡೆಸಿದಾಗ ಕುರಿ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು
ಕಬ್ಬು ಬೆಳೆಗಾರರ ವಿಚಾರದಲ್ಲಿ ರಾಜ್ಯ ಸರಕಾರ ಜವಾಬ್ದಾರಿಯಿಂದ ವರ್ತಿಸಿ ಸಂಧಾನ ನಡೆಸಬೇಕು: ಪ್ರಲ್ಹಾದ್ ಜೋಶಿ
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ, ಸಚಿವ ರಾಮಲಿಂಗಾ ರೆಡ್ಡಿ ದಿಢೀರ್ ಭೇಟಿ








