Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸರ್ಕಾರದಿಂದ `ರೈತರಿಗೆ’ ಭಾರತ್ ವಿಸ್ತಾರ್ ಯೋಜನೆ ಜಾರಿ : ಒಂದೇ ಕ್ಲಿಕ್ ನಲ್ಲಿ ಎಲ್ಲಾ ಕೃಷಿ ಪ್ರಶ್ನೆಗಳಿಗೆ ನಿಮ್ಮ ಭಾಷೆಯಲ್ಲೇ ಸಿಗಲಿದೆ ಉತ್ತರ !

20/02/2026 11:00 AM

ಏಲಿಯನ್ ರಹಸ್ಯ ಬಯಲು? ಟ್ರಂಪ್ ಆಜ್ಞೆ ಬೆನ್ನಲ್ಲೇ UFO ಫೈಲ್‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್!

20/02/2026 11:00 AM

ಬಾಬರ್ ನ ತಂದೆ ಶಿವಾಜಿ..! ಪಾಸ್ ಮಾಡುವಂತೆ 100 ರೂ. ಇಟ್ಟ ವಿದ್ಯಾರ್ಥಿಯ `ಉತ್ತರ ಪತ್ರಿಕೆ’ ವೈರಲ್ | WATCH VIDEO

20/02/2026 10:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜ್ವರ, ಕೆಮ್ಮು, ನೆಗಡಿ ಇರೋ ಮಕ್ಕಳನ್ನು ಶಾಲೆಗೆ ಕಳುಹಿಸುವಂತಿಲ್ಲ: ಶಾಲಾ ಶಿಕ್ಷಣ ಇಲಾಖೆ ಕೋವಿಡ್ ಗೈಡ್ ಲೈನ್
KARNATAKA

ಜ್ವರ, ಕೆಮ್ಮು, ನೆಗಡಿ ಇರೋ ಮಕ್ಕಳನ್ನು ಶಾಲೆಗೆ ಕಳುಹಿಸುವಂತಿಲ್ಲ: ಶಾಲಾ ಶಿಕ್ಷಣ ಇಲಾಖೆ ಕೋವಿಡ್ ಗೈಡ್ ಲೈನ್

By kannadanewsnow0902/06/2025 5:30 AM

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಹೆಚ್ಚಳದ ನಡುವೆ ಶಾಲೆಗಳು ಆರಂಭಗೊಂಡಿದ್ದಾವೆ. ಈ ಸಂದರ್ಭದಲ್ಲಿ ಜ್ವರ, ಕೆಮ್ಮು, ನೆಗಡಿ ಇರುವಂತ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ ಎಂಬುದಾಗಿ ಶಾಲಾ ಶಿಕ್ಷಣ ಇಲಾಖೆಯಿಂದ ಕೋವಿಡ್ ಮಾರ್ಗಸೂಚಿ ಪ್ರಕಟಿಸಲಾಗಿದೆ.

ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ  ಕೋವಿಡ್-19 ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಕುರಿತು ಮಾರ್ಗಸೂಚಿ ಪ್ರಕಟಿಸಲಾಗಿದೆ.

ರಾಜ್ಯಾದ್ಯಂತ ಪ್ರಸ್ತುತ ಸಾಲಿನ ಶೈಕ್ಷಣಿಕ ವರ್ಷವು ದಿನಾಂಕ ಪುನರಾರಂಭಗೊಂಡಿದ್ದು, ಶಾಲೆಗಳಲ್ಲಿ ದೈನಂದಿನ ಶಾಲಾ ಚಟುವಟಿಕೆಗಳು ಪ್ರಾರಂಭವಾಗಿರುತ್ತದೆ. ಪ್ರಸ್ತುತ ರಾಜ್ಯದಲ್ಲಿ ಇರುವ ಕೋವಿಡ್ 19 ಪರಿಸ್ಥಿತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿರುತ್ತದೆ. ಉಲ್ಲೇಖಿತ ಪತ್ರದಲ್ಲಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಕುರಿತು ಈಗಾಗಲೇ ಸೂಚನೆಗಳನ್ನು ನೀಡಲಾಗಿರುತ್ತದೆ. ಮುಂದುವರೆದು, ಶಾಲಾ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಈ ಕೆಳಕಂಡ ಸೂಚನೆಗಳನ್ನು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ತಪ್ಪದೇ ಪಾಲಿಸುವಂತೆ ಸೂಚಿಸಲಾಗಿದೆ :

1) ಶಾಲಾ ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಹಾಗೂ ಇತರ ಲಕ್ಷಣಗಳು ಕಂಡು ಬಂದಲ್ಲಿ, ಮಕ್ಕಳನ್ನು ಶಾಲೆಗೆ ಕಳುಹಿಸದೇ, ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಹಾಗೂ ಆರೈಕಾ ಕ್ರಮಗಳನ್ನು ಪಾಲಿಸುವುದು.

2) ಸದರಿ ಲಕ್ಷಣಗಳು ಸಂಪೂರ್ಣವಾಗಿ ಗುಣಮುಖವಾದ ನಂತರವೇ ಮಕ್ಕಳನ್ನು ಶಾಲೆಗೆ ಕಳುಹಿಸುವುದು.

3) ಜ್ವರ, ಕೆಮ್ಮು, ನೆಗಡಿ ಮತ್ತು ಇತರ ಲಕ್ಷಣಗಳಿರುವ ಮಕ್ಕಳು ಶಾಲೆಗೆ ಬಂದಲ್ಲಿ, ಪೋಷಕರಿಗೆ ಮಾಹಿತಿಯನ್ನು ನೀಡಿ, ಅಂತಹ ಮಕ್ಕಳನ್ನು ಸುರಕ್ಷಿತವಾಗಿ ಪೋಷಕರೊಂದಿಗೆ ಮನೆಗೆ ಕಳುಹಿಸುವುದು.

4) ಶಾಲಾ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳಲ್ಲಿ ಜ್ವರ, ಕೆಮ್ಮು, ನೆಗಡಿ ಹಾಗೂ ಇತರ ಲಕ್ಷಣಗಳು ಕಂಡು ಬಂದಲ್ಲಿ, ಅಗತ್ಯ ಮುಂಜಾಗೃತ ಕ್ರಮಗಳನ್ನು ಪಾಲಿಸುವುದು, 5) ಶಾಲಾ ಅವಧಿಯಲ್ಲಿ ಮುಂಜಾಗೃತಾ ಕ್ರಮಗಳಾದ ಸಾಮಾನ್ಯ ಸ್ವಚ್ಛತೆಯೊಂದಿಗೆ ಪ್ರಮುಖವಾಗಿ ಕೈಗಳ ಸ್ವಚ್ಛತೆ ಮತ್ತು ಕೆಮ್ಮುವಾಗ, ಸೀನುವಾಗ ಎಚ್ಚರ ವಹಿಸಿ Covid-19 Appropirate Behaviour (CAB) ನ ಪಾಲನೆಯನ್ನು ಖಚಿತಪಡಿಸಿಕೊಳ್ಳುವುದು.

ಈ ಮೇಲ್ಕಂಡ ಎಲ್ಲಾ ಕ್ರಮಗಳೊಂದಿಗೆ ಸರ್ಕಾರದಿಂದ ಹಾಗೂ ಸಂಬಂಧಿಸಿದ ಇಲಾಖೆಗಳಿಂದ ಕಾಲಕಾಲಕ್ಕೆ ಹೊರಡಿಸಲಾಗುವ ಸುತ್ತೋಲೆ, ಮಾರ್ಗದರ್ಶನ ಹಾಗೂ ಮುಂಜಾಗೃತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದೆ.

Share. Facebook Twitter LinkedIn WhatsApp Email

Related Posts

BREAKING : ಶಂಕಿತ ಉಗ್ರ ಜುನೈದ್ ಅಹಮ್ಮದ್ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ‘NIA’

20/02/2026 10:37 AM1 Min Read

BIG NEWS : ದಾವಣಗೆರೆಯಲ್ಲಿ ಭೀಕರ ಅಪಘಾತ : ಟಿಟಿ ವಾಹನ ಪಲ್ಟಿಯಾಗಿ 13 ಜನರಿಗೆ ಗಂಭೀರ ಗಾಯ!

20/02/2026 10:33 AM1 Min Read

ರಾಜ್ಯ ಸರ್ಕಾರದಿಂದ `ವೀರಶೈವ ಲಿಂಗಾಯತ ಸಮುದಾಯ’ದವರಿಗೆ ಗುಡ್ ನ್ಯೂಸ್ : `ಮೊಬೈಲ್ ಕ್ಯಾಂಟಿನ್’ ತೆರೆಯಲು ಸಿಗಲಿದೆ 3 ಲಕ್ಷ ರೂ. ಸಹಾಯಧನ !

20/02/2026 10:32 AM1 Min Read
Recent News

ಸರ್ಕಾರದಿಂದ `ರೈತರಿಗೆ’ ಭಾರತ್ ವಿಸ್ತಾರ್ ಯೋಜನೆ ಜಾರಿ : ಒಂದೇ ಕ್ಲಿಕ್ ನಲ್ಲಿ ಎಲ್ಲಾ ಕೃಷಿ ಪ್ರಶ್ನೆಗಳಿಗೆ ನಿಮ್ಮ ಭಾಷೆಯಲ್ಲೇ ಸಿಗಲಿದೆ ಉತ್ತರ !

20/02/2026 11:00 AM

ಏಲಿಯನ್ ರಹಸ್ಯ ಬಯಲು? ಟ್ರಂಪ್ ಆಜ್ಞೆ ಬೆನ್ನಲ್ಲೇ UFO ಫೈಲ್‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್!

20/02/2026 11:00 AM

ಬಾಬರ್ ನ ತಂದೆ ಶಿವಾಜಿ..! ಪಾಸ್ ಮಾಡುವಂತೆ 100 ರೂ. ಇಟ್ಟ ವಿದ್ಯಾರ್ಥಿಯ `ಉತ್ತರ ಪತ್ರಿಕೆ’ ವೈರಲ್ | WATCH VIDEO

20/02/2026 10:57 AM

ಗಣಿತ ಎಲ್ಲ ಮಕ್ಕಳಿಗೂ ಯಾಕೆ ಸುಲಭವಲ್ಲ? ಸ್ಟ್ಯಾನ್‌ಫೋರ್ಡ್ ಸಂಶೋಧನೆಯಿಂದ ಬಯಲಾಯ್ತು ಅಸಲಿ ರಹಸ್ಯ!

20/02/2026 10:54 AM
State News
KARNATAKA

BREAKING : ಶಂಕಿತ ಉಗ್ರ ಜುನೈದ್ ಅಹಮ್ಮದ್ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ‘NIA’

By kannadanewsnow0520/02/2026 10:37 AM KARNATAKA 1 Min Read

ಬೆಂಗಳೂರು : ಮೋಸ್ಟ್‌ ವಾಂಟೆಡ್‌ ಉಗ್ರ ಜುನೈದ್‌ ಅಹಮ್ಮದ್‌ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ NIA…

BIG NEWS : ದಾವಣಗೆರೆಯಲ್ಲಿ ಭೀಕರ ಅಪಘಾತ : ಟಿಟಿ ವಾಹನ ಪಲ್ಟಿಯಾಗಿ 13 ಜನರಿಗೆ ಗಂಭೀರ ಗಾಯ!

20/02/2026 10:33 AM

ರಾಜ್ಯ ಸರ್ಕಾರದಿಂದ `ವೀರಶೈವ ಲಿಂಗಾಯತ ಸಮುದಾಯ’ದವರಿಗೆ ಗುಡ್ ನ್ಯೂಸ್ : `ಮೊಬೈಲ್ ಕ್ಯಾಂಟಿನ್’ ತೆರೆಯಲು ಸಿಗಲಿದೆ 3 ಲಕ್ಷ ರೂ. ಸಹಾಯಧನ !

20/02/2026 10:32 AM

BIG NEWS : ಗ್ರಾಮಗಳಲ್ಲಿ `ವರದಕ್ಷಿಣೆ’ ತಡೆಗೆ `PDO’ ಗಳು ಕೈಗೊಳ್ಳಬೇಕಾದ ಕ್ರಮಗಳೇನು? ಇಲ್ಲಿದೆ ಮಾಹಿತಿ

20/02/2026 10:24 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.