ಬೆಂಗಳೂರು: ನಗರದಲ್ಲಿ ಇನ್ನೂ ಬಾಲ್ಯವಿವಾಹ ಜೀವಂತವಾಗಿದೆ. ಅಪ್ರಾಪ್ತೆಯನ್ನು ವಿವಾಹವಾದ ಬಳಿಕ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸೋದಕ್ಕೆ ಪ್ರಯತ್ನ ಪಟ್ಟ ಯುವಕನ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಆರ್ ಆರ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 16 ವರ್ಷದ ಬಾಲಕಿಗೆ ತಾಯಿ ವಿವಾಹ ಮಾಡಿಸಿದ್ದಳು. ದೇವಾಲಯದಲ್ಲಿ 27 ವರ್ಷದ ಯುವಕನೊಂದಿಗೆ ಅಪ್ರಾಪ್ತೆಯನ್ನು ವಿವಾಹ ಮಾಡಿಸಲಾಗಿತ್ತು. ಈ ಬಳಿಕ ಬಾಲಕಿಯೊಂದಿಗೆ ಬಲವಂತವಾಗಿ ಯುವಕ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಇದರಿಂದ ಮಾನಸಿಕವಾಗಿ ಘಾಸಿಕೊಂಡ ಅಪ್ರಾಪ್ತ ಬಾಲಕಿ, ಮಕ್ಕಳ ಕಲ್ಯಾಣ ಸಮಿತಿಗೆ ಕರೆ ಮಾಡಿ ಅಪ್ರಾಪ್ತ ವಯಸ್ಸಿಗೆ ಇಷ್ಟವಿಲ್ಲದಿದ್ದರೂ ಮದುವೆ ಮಾಡಿಸಿದ್ದು. ಯುವಕ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸೋದರ ಬಗ್ಗೆ ದೂರು ನೀಡಿದ್ದಳು.
ಸ್ಥಳಕ್ಕೆ ಆಗಮಿಸಿದಂತ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಲವಂತವಾಗಿ ಮದುವೆ ಮಾಡಿಸಿದ್ದು, ಯುವಕ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದರ ಬಗ್ಗೆ ಅಲವತ್ತುಕೊಂಡಿದ್ದಾಳೆ. ಈ ಮಾಹಿತಿ ಆಧರಿಸಿ, ಇದೀಗ ಯುವಕನ ವಿರುದ್ಧ ಆರ್ ಆರ್ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
BREAKING: ಹಾಸನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ‘KSRTC ಬಸ್’ ಪಲ್ಟಿ: 4 ಪ್ರಯಾಣಿಕರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ
BIG NEWS: ರಾಜ್ಯ ಸರ್ಕಾರದಿಂದ ‘ಮಂಗಳೂರು ವಿವಿ ಸಿಂಡಿಕೇಟ್’ ಪ್ರಾಧಿಕಾರಕ್ಕೆ ‘6 ಮಂದಿ ನಾಮನಿರ್ದೇಶನ’ ಮಾಡಿ ಆದೇಶ